AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ಮಕ್ಕಳಿದ್ದರೂ ಪ್ರಿಯಕರನ ಜೊತೆ ಲಾಡ್ಜ್​​​ಗೆ ಬಂದು ಹೆಣವಾದಳು: ಬೆಂಕಿ ದುರಂತಕ್ಕೆ ಅಸಲಿ ಕಾರಣ ಬಯಲು

ಯಲಹಂಕದ ನ್ಯೂಟೌನ್‌ನಲ್ಲಿರೋ ಕಿಚನ್‌ ಫ್ಯಾಮಿಲಿ ರೆಸ್ಟೋರೆಂಟ್‌ ಮೇಲೆ ಲಾಡ್ಜ್‌ ಕೂಡಾ ಇದೆ. ಅದೇ ಲಾಡ್ಜ್‌ನಲ್ಲಿ ರೂಮ್‌ ಮಾಡಿಕೊಂಡಿದ್ದ ಅದೊಂದು ಜೋಡಿ ವಾರದಿಂದವಾಗಿತ್ತು. ಹೀಗಿರುವಾಗ್ಲೇ ಅಲ್ಲಿ ಘೋರವಾಗಿದೆ. ಬೆಂಕಿಯಲ್ಲಿ ಯುವಕ ಬೆಂದು ಹೋದ್ರೆ, ಹೊಗೆಯಿಂದಲೇ ಯುವತಿ ಸಾವಿನ ಮನೆ ಸೇರಿದ್ದಾಳೆ. ಅಗ್ನಿ ಶಾಮದ ಸಿಬ್ಬಂದಿ ಬರುವಷ್ಟರಲ್ಲೇ ರೂಮ್‌ನಲ್ಲಿದ್ದ ಯುವಕ ರಮೇಶ್‌ ಎಂಬಾತ ಸುಟ್ಟು ಕರಕಲಾಗಿದ್ದ. ಇನ್ನು ಅದೇ ರೂಮಿನ ಬಾತ್​ ರೂಮ್ ನಲ್ಲಿದ್ದ ಕಾವೇರಿ ಎನ್ನುವ ಯುವತಿ ಹೊಗೆಯಿಂದ ಉಸಿರುಗಟ್ಟಿ ಪ್ರಾಣ ಬಿಟ್ಟಿದ್ದಳು. ಇನ್ನು ಈ ಘಟನೆಗೆ ಅಸಲಿ ಕಾರಣ ಬಹಿರಂಗವಾಗಿದೆ.

ರಮೇಶ್ ಬಿ. ಜವಳಗೇರಾ
|

Updated on: Oct 10, 2025 | 5:29 PM

Share

ಬೆಂಗಳೂರು, (ಅಕ್ಟೋಬರ್ 10): ಯಲಹಂಕ ಲಾಡ್ಜ್ ನಲ್ಲಿ ಬೆಂಕಿ ದುರಂತದಲ್ಲಿ (Yelahanka fire Incident) ಜೋಡಿ ಸಾವನ್ನಪ್ಪಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೆಂಗಳೂರಿನ ಯಲಹಂಕದ ನ್ಯೂಟೌನ್‌ನಲ್ಲಿರೋ ಕಿಚನ್‌ ಫ್ಯಾಮಿಲಿ ರೆಸ್ಟೋರೆಂಟ್‌ ಇದು. ಇದೇ ರೆಸ್ಟೋರೆಂಟ್‌ನೊಳಗೆ ಕೂಲ್‌ ಕಂಫರ್ಟ್ ಅನ್ನೋ ಲಾಡ್ಜ್‌ ಕೂಡಾ ಇದೆ. ಈ ಲಾಡ್ಜ್‌ನಲ್ಲೇ ಗುರುವಾರ ಸಂಜೆ ಘೋರವೇ ನಡೆದು ಹೋಗಿದೆ. ಅದೇ ಲಾಡ್ಜ್‌ನಲ್ಲಿ ರೂಮ್‌ ಮಾಡಿಕೊಂಡಿದ್ದ ಜೋಡಿ ದುರಂತ ಸಾವುಕಂಡಿದೆ. ಬೆಂಕಿಯಲ್ಲಿ ಯುವಕ ಬೆಂದು ಹೋದ್ರೆ, ಹೊಗೆಯಿಂದಲೇ ಯುವತಿ ಸಾವಿನ ಮನೆ ಸೇರಿದ್ದಾಳೆ. ಗದಗ ಮೂಲದ ರಮೇಶ್ ಮತ್ತು ಹನಗುಂದ ಮೂಲದ ಕಾವೇರಿ ದುರಂತ ಸಾವು ಕಂಡಿದ್ದಾಳೆ. ಗಂಡ ಮೂವರು ಮಕ್ಕಳಿಗಾಗಿ ದುಡಿಯಲು ಬೆಂಗಳೂರಿಗೆ ಬಂದವಳು ಪ್ರಿಯತಮನ ತೆಕ್ಕೆಗೆ ಸಿಲುಕಿ ಹೆಣವಾಗಿದ್ದಾಳೆ.

ಒಂದು ವಾರದಿಂದ ಗದಗ ಮೂಲದ ರಮೇಶ್ ಮತ್ತು ಹನಗುಂದ ಮೂಲದ ಕಾವೇರಿ ಇದೇ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದರು. ಕಾವೇರಿಗೆ 2016 ರಲ್ಲೇ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಆದ್ರೆ, ದುಡಿಯೋ ಸಲುವಾಗಿ ಗಂಡ ಮಕ್ಕಳನ್ನ ಊರಲ್ಲಿ ಬಿಟ್ಟು ಬೆಂಗಳೂರಿಗೆ ಬಂದು ಸ್ಪಾವೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಬಳಿಕ ಗಾರೇ ಕೆಲಸ ಮಾಡುತ್ತಿದ್ದ ರಮೇಶನ ಪರಿಚವಾಗಿ ಇಬ್ಬರ ನಡುವೆ ಸಲುಗೆ ಬೆಳೆದಿದೆ. ಹೀಗಾಗಿ ಈ ಜೋಡಿ ಲಾಡ್ಜ್‌ನಲ್ಲಿ ರೂಮ್‌ ಮಾಡಿಕೊಂಡಿತ್ತು. ಆದ್ರೆ ನಿನ್ನೆ(ಅ.10) ಬೆಳಗ್ಗೆ ಲಾಡ್ಜ್ ನಲ್ಲಿ ಇಬ್ಬರಿಗೂ ಜಗಳ‌ ಆಗಿದ್ದು, ಮಧ್ಯಾಹ್ನ ಕಾವೇರಿ ರೂಂನಲ್ಲಿದ್ದರೆ, ರಮೇಶ್ ಹೊರಗಡೆ ಹೋಗಿ ಪೆಟ್ರೋಲ್ ತಂದಿದ್ನಂತೆ. ಈ ವೇಳೆ ರೂಮ್ ಗೆ ಮತ್ತೊಬ್ಬ ವ್ಯಕ್ತಿ ಬಂದು ಹೋಗಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ: ಯಲಹಂಕ ರೆಸ್ಟೋರೆಂಟ್​ ಅಗ್ನಿ ದುರಂತಕ್ಕೆ ಟ್ವಿಸ್ಟ್: ಮೃತ ಯುವಕ-ಯುವತಿ ಇದ್ದ ರೂಮಿಗೆ ಬಂದಿದ್ದ 3ನೇ ವ್ಯಕ್ತಿ ಯಾರು? ಆಗಿದ್ದೇನು?

ರೂಮಿನಲ್ಲಿ ಕಾವೇರಿ ಹಾಗೂ ರಮೇಶನಿಗೆ ಇಬ್ಬರಿಗೂ ಮತ್ತೆ ಗಲಾಟೆ ಆಗಿರೋ ಸಾಧ್ಯತೆಯಿದ್ದು ಈ ವೇಳೆ ರಮೇಶ ಪೆಟ್ರೋಲ್ ಸುರಿದುಕೊಂಡು ಮೇನ್ ಡೋರ್ ಲಾಕ್ ಮಾಡಿದ್ದಾನೆ. ಭಯದಲ್ಲಿ ಕಾವೇರಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಬಾತ್ ರೂಂಗೆ ಓಡಿ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ. ಬಳಿಕ ತನ್ನ ಸ್ಪಾ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಆದ್ರೆ, ಅಷ್ಟೊತ್ತಿಗಾಗಲೇ ಬೆಂಕಿ ಇಡೀ ರೂಂ ವ್ಯಾಪಿಸಿದೆ. ಬೆಂಕಿಯಿಂದಾಗಿ ರಮೇಶ್ ಸಾವಾಗಿದ್ರೆ. ಹೊಗೆಯಿಂದ ಉಸಿರುಗಟ್ಟಿ ಕಾವೇರಿ ಸಾವನ್ನಪ್ಪಿದ್ದಾಳೆ. ಕಾವೇರಿಗೆ ಮದುವೆಯಾಗಿ ಮೂರು ಮಕ್ಕಳಿದ್ದು, ಪತಿ ಹಾಗೂ ಮಕ್ಕಳನ್ನ ಬಿಟ್ಟು ಬಂದವಳು ರಮೇಶನ ಜೊತೆ ಪರಲೋಕ ಸೇರಿದ್ದಾಳೆ. ಗಂಡ ಮಕ್ಕಳು ಅಂತಾ ಕಾವೇರಿ ಬದುಕಿದ್ರೆ ಇವತ್ತು ಈ ಪರಿಸ್ಥಿತಿ ಬರ್ತಿರಲಿಲ್ಲ. ಪರ ಪುರುಷನ ತೆಕ್ಕೆಗೆ ಬಿದ್ದು ಅತನ ಜೊತೆ ತಾನೂ ಹೆಣವಾಗಿದ್ದಾಳೆ.

ಇನ್ನು ರಮೇಶ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದರ ಜತೆಗೆ ಮದ್ವೆಗೆ ನಿರಾಕರಿಸಿದ ಪ್ರೇಯಸಿ ಕಾವೇರಿಯನ್ನೂ ಸಹ ಬಲಿ ಪಡೆದಿದ್ದಾರೆ.  ಸದ್ಯ ಈ ಬಗ್ಗೆ ಯಲಹಂಕ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ.

ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಗವಿ ಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ: ಇದರ ವಿಶೇಷ ಏನು ಗೊತ್ತೇ?
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಎಂಟ್ರಿ ಕೊಟ್ಟಿದ್ದು ವಧು, ಆದ್ರೆ ಎಲ್ಲರೂ ನೋಡಿದ್ದು ಫೋಟೊಗ್ರಾಫರ್​ನ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಗೋ ಸೇವೆ ಮಾಡುವ ಮೂಲಕ ಸಂಕ್ರಾಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಮೋದಿ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಬಿಗ್​​ಬಾಸ್ ಮನೆಗೆ ಸಂಕ್ರಾಂತಿ ಅತಿಥಿಗಳು: ಪುಟ್ಟಿ ಹಾಡಿಗೆ ಅಶ್ವಿನಿ ಫಿದಾ
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಏನೂ ಮಾಡ್ಬೇಡಿ... ವಿರಾಟ್ ಕೊಹ್ಲಿಯ ಕಾಳಜಿ ವಿಡಿಯೋ ವೈರಲ್
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಬಾವಿ ಕಟ್ಟೆ ಹತ್ತಿ ಎರಡೂ ಕೈಗಳಲ್ಲೂ ಮಕ್ಕಳನ್ನು ಹಿಡಿದು ಮಹಿಳೆಯ ನೃತ್ಯ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಚೈತ್ರಾ ಕುಂದಾಪುರ
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ನಾನಾ... ಹೌದು ನೀನೇ... ಅರ್ಧಶತಕ ಪೂರೈಸಲು ಬಿಡದ ಅಭಿಷೇಕ್ ನಾಯರ್!
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಮುಚ್ಚಿದ್ದ ತರಕಾರಿ ಗಾಡಿಯಿಂದ ಒಂದು ಈರುಳ್ಳಿ ತೆಗೆದುಕೊಂಡು ಹಣವಿಟ್ಟ ಯುವಕರು
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ
ಬೆಂಗಳೂರು: ಅಕ್ಷಯನಗರ ಸ್ಕ್ರಾಪ್​ ಗೋಡೌನ್​ನಲ್ಲಿ ಭಾರಿ ಅಗ್ನಿ ಅವಘಡ