Tecno Spark 8 Pro: ಅತ್ಯುತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿಯ ಸ್ಮಾರ್ಟ್​ಫೋನ್ ಬೇಕೇ?: ಕೇವಲ 8,399 ರೂ. ಗೆ ಈ ಫೋನನ್ನು ಖರೀದಿಸಿ

2021 ರಲ್ಲಿ ಬಿಡುಗಡೆ ಆಗಿ ಸಾಕಷ್ಟು ಬೇಡಿಕೆ ಸೃಷ್ಟಿಸಿದ್ದ ಟೆಕ್ನೋ ಸ್ಪಾರ್ಕ್ 8 ಪ್ರೊ ಈಗ ಅತಿ ಕಡಿಮೆ ಬೆಲೆಗೆ ಸೇಲ್ ಕಾಣುತ್ತಿದೆ. ನೀವು ಒಂದೊಳ್ಳೆ ಕ್ಯಾಮೆರಾ, ಉತ್ತಮ ಬ್ಯಾಟರಿ ಲೈಫ್ ಸ್ಮಾರ್ಟ್​ಫೋನನ್ನು ಬಜೆಟ್ ಬೆಲೆಗೆ ಹುಡುಕುತ್ತಿದ್ದರೆ ಇದು ಅತ್ಯುತ್ತಮ ಆಯ್ಕೆ ಆಗಿದೆ.

Tecno Spark 8 Pro: ಅತ್ಯುತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿಯ ಸ್ಮಾರ್ಟ್​ಫೋನ್ ಬೇಕೇ?: ಕೇವಲ 8,399 ರೂ. ಗೆ ಈ ಫೋನನ್ನು ಖರೀದಿಸಿ
Tecno Spark 8 Pro

Updated on: Mar 19, 2023 | 12:34 PM

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಜೆಟ್ ಬೆಲೆಯ ಮೊಬೈಲ್​ಗಳಿಗೆ ಹೆಸರುವಾಸಿಯಾಗಿರುವ ಪ್ರಸಿದ್ಧ ಟೆಕ್ನೋ (Tecno) ಕಂಪನಿ ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಎರಡು ವಾರಗಳ ಹಿಂದೆಯಷ್ಟೆ ಟೆಕ್ನೋ ಸ್ಪಾರ್ಕ್ 10 ಪ್ರೊ ಎಂಬ ನೂತನ ಮೊಬೈಲ್ ಪರಿಚಯಿಸಿ ಸದ್ದು ಮಾಡಿದ್ದ ಕಂಪನಿ ಇದೀಗ ತನ್ನ ಹಳೆಯ ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಇಳಿಕೆ ಮಾಡಿದೆ. 2021 ರಲ್ಲಿ ಬಿಡುಗಡೆ ಆಗಿ ಸಾಕಷ್ಟು ಬೇಡಿಕೆ ಸೃಷ್ಟಿಸಿದ್ದ ಟೆಕ್ನೋ ಸ್ಪಾರ್ಕ್ 8 ಪ್ರೊ ಈಗ ಅತಿ ಕಡಿಮೆ ಬೆಲೆಗೆ ಸೇಲ್ ಕಾಣುತ್ತಿದೆ. ನೀವು ಒಂದೊಳ್ಳೆ ಕ್ಯಾಮೆರಾ, ಉತ್ತಮ ಬ್ಯಾಟರಿ ಲೈಫ್ ಸ್ಮಾರ್ಟ್​ಫೋನನ್ನು ಬಜೆಟ್ ಬೆಲೆಗೆ ಹುಡುಕುತ್ತಿದ್ದರೆ ಇದು ಅತ್ಯುತ್ತಮ ಆಯ್ಕೆ ಆಗಿದೆ.

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಟೆಕ್ನೋ ಸ್ಪಾರ್ಕ್ 8 ಪ್ರೊ ಸ್ಮಾರ್ಟ್‌ಫೋನ್‌ ಶೇ. 38 ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಇದರ 4GB RAM + 64GB ಸ್ಟೋರೇಜ್ ಆಯ್ಕೆಯ ಮೂಲ ಬೆಲೆ 13,499 ರೂ. ಆಗಿದೆ. ಆದರೆ, ಈಗ ಬೆಲೆ ಕಡಿತಗೊಂಡು ಈ ಫೋನ್ ಕೇವಲ 8,399ರೂ. ಗೆ ಸೇಲ್ ಆಗುತ್ತಿದೆ. ಇದರೊಂದಿಗೆ ಬ್ಯಾಂಕ್‌ ಆಫರ್‌, ನೋ ಕಾಸ್ಟ್‌ ಇಎಮ್‌ಐ ಆಯ್ಕೆಗಳು ಲಭ್ಯವಾಗಲಿವೆ.

iQOO Z7 5G: ರೋಚಕತೆ ಸೃಷ್ಟಿಸಿರುವ ಐಕ್ಯೂ Z7 5G ಸ್ಮಾರ್ಟ್​ಫೋನ್​ನ ಬೆಲೆ ಬಹಿರಂಗ: ಎಷ್ಟು ಗೊತ್ತೇ?

ಇದನ್ನೂ ಓದಿ
Tech Tips: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್​ ಫುಲ್ ಆಗಿದ್ದರೆ ಟೆನ್ಶನ್ ಬೇಡ: ಈ ಟ್ರಿಕ್ ಫಾಲೋ ಮಾಡಿ
Instagram Blue Tick: ಇನ್​ಸ್ಟಾಗ್ರಾಮ್, ಫೇಸ್​ಬುಕ್​ನಲ್ಲಿ ಬಂದೇ ಬಿಡ್ತು ಹಣ ಕೊಟ್ಟು ಬ್ಲೂ ಟಿಕ್ ಪಡೆಯುವ ಆಯ್ಕೆ: ಬೆಲೆ ಎಷ್ಟು?
Mobile Blast: ಬಾಂಬ್​ನಂತೆ ಸ್ಪೋಟಗೊಂಡ ಶವೋಮಿ ಕಂಪನಿಯ ಸ್ಮಾರ್ಟ್​ಫೋನ್: ನಿಮ್ಮ ಬಳಿ ಇದೆಯೇ ಈ ಫೋನ್?
Airtel 5G: ಏರ್ಟೆಲ್​ನಿಂದ ಧಮಾಕ ಆಫರ್: ಅನ್ಲಿಮಿಟೆಡ್ 5G ಡೇಟಾ ಕೊಡುಗೆ: ಶಾಕ್ ಆದ ಜಿಯೋ

ಏನು ಫೀಚರ್ಸ್?:

ಟೆಕ್ನೋ ಸ್ಪಾರ್ಕ್ 8 ಪ್ರೊ ಸ್ಮಾರ್ಟ್‌ಫೋನ್‌ 1,080 x 2,460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8 ಇಂಚಿನ ಫುಲ್‌ HD+ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 20.5:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಆಕ್ಟಾ-ಕೋರ್‌ ಮೀಡಿಯಾಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಬಲವನ್ನು ನೀಡಲಾಗಿದ್ದು ಆಂಡ್ರಾಯ್ಡ್ 11 ವಿಟ್ HiOS v7.6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮೆಮೋರಿ ಹೆಚ್ಚಿಸ ಬೇಕು ಅಂದುಕೊಂಡಿದ್ದಲ್ಲಿ ಮೈಕ್ರೊ SD ಕಾರ್ಡ್ ಮೂಲಕ 512 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಆಯ್ಕೆ ಇದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ f/1.79 ಲೆನ್ಸ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಮತ್ತು AI ಲೆನ್ಸ್ ಅನ್ನು ಹೊಂದಿದೆ. ಇದರ ಜೊತೆಗೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಲ್ಲಿ ಡ್ಯುಯಲ್ LED ಫ್ಲ್ಯಾಷ್‌ ಇರುವುದು ವಿಶೇಷ.

ಟೆಕ್ನೋ ಸ್ಪಾರ್ಕ್‌ 8 ಪ್ರೊ ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ತಕ್ಕಂತೆ 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ಬದಲಾಗಿ 4G VoLTE, Wi-Fi 802.11ac, ಬ್ಲೂಟೂತ್ v5.0, GPS/ A-GPS ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ