Cyber Crime: ಎಸ್​ಬಿಐ, ಹೆಚ್​ಡಿಎಫ್​ಸಿ ಬ್ಯಾಂಕ್ ಬಳಕೆದಾರರಿಗೆ ಬರುತ್ತಿದೆ ಫೇಕ್ ಮೆಸೇಜ್: ತಪ್ಪಿಯೂ ಹೀಗೆ ಮಾಡಬೇಡಿ

Scam SMS: ನಿಮ್ಮ ಬ್ಯಾಂಕ್ ಅಕೌಂಟ್​ನಲ್ಲಿ ಪಾನ್ ಕಾರ್ಡ್ ಕುರಿತ ಮಾಹಿತಿಯನ್ನು ಕೂಡಲೇ ಭರ್ತಿ ಮಾಡಿ ಎಂಬ ಮೆಸೇಜ್ ಅನೇಕರಿಗೆ ಬರುತ್ತಿದ್ದು, ಇದನ್ನು ನಂಬಿ ಅಪ್ಡೇಟ್ ಮಾಡಲು ಹೊರಟರೆ ಬ್ಯಾಂಕ್ ಅಕೌಂಟ್ ಖಾಲಿ ಆಗುತ್ತದೆ.

Cyber Crime: ಎಸ್​ಬಿಐ, ಹೆಚ್​ಡಿಎಫ್​ಸಿ ಬ್ಯಾಂಕ್ ಬಳಕೆದಾರರಿಗೆ ಬರುತ್ತಿದೆ ಫೇಕ್ ಮೆಸೇಜ್: ತಪ್ಪಿಯೂ ಹೀಗೆ ಮಾಡಬೇಡಿ
Cyber Crime
Follow us
Vinay Bhat
|

Updated on:Mar 20, 2023 | 11:36 AM

ಇಂದು ಡಿಜಿಟಲ್ ಬ್ಯಾಂಕಿಂಗ್ (Digital Banking) ಹೆಚ್ಚು ಚಾಲ್ತಿಯಲ್ಲಿರುವ ಕಾರಣ ಸ್ಕ್ಯಾಮರ್​ಗಳು ಇದನ್ನು ದುರುಪಯೋಗ ಪಡಿಸಿಕೊಂಡು ಅಮಾಯಕರ ಹಣ ಎಗರಿಸುತ್ತಿರುವುದು ಕೂಡ ಪ್ರತಿ ದಿನ ವರದಿ ಆಗುತ್ತಿದೆ. ಥೇಟ್ ಬ್ಯಾಂಕುಗಳು ಕಳುಹಿಸುವ ಸಂದೇಶದಂತೆ ಫೇಕ್ ಮೆಸೇಜ್​ಗಳನ್ನು (Fake Message) ಕಳುಹಿಸಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇಂಥಹ ಪ್ರಕರಣಗಳು ಪ್ರತಿದಿನ ನಡೆಯುತ್ತಿದ್ದು, ಮುಖ್ಯವಾಗಿ ಹೆಚ್​ಡಿಎಫ್​ಸಿ ಮತ್ತು ಎಸ್​ಬಿಐ ಬಳಕೆದಾರರು ಹೆಚ್ಚಾಗಿ ಈ ಸ್ಕ್ಯಾಮ್​​ಗೆ (Scam) ಒಳಗಾಗಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ನಿಮ್ಮ ಬ್ಯಾಂಕ್ ಅಕೌಂಟ್​ನಲ್ಲಿ ಪಾನ್ ಕಾರ್ಡ್ ಕುರಿತ ಮಾಹಿತಿಯನ್ನು ಕೂಡಲೇ ಭರ್ತಿ ಮಾಡಿ ಎಂಬ ಮೆಸೇಜ್ ಅನೇಕರಿಗೆ ಬರುತ್ತಿದ್ದು, ಇದನ್ನು ನಂಬಿ ಅಪ್ಡೇಟ್ ಮಾಡಲು ಹೊರಟರೆ ಬ್ಯಾಂಕ್ ಅಕೌಂಟ್ ಖಾಲಿ ಆಗುತ್ತದೆ.

ಕೆಲವರಿಗೆ ಈರೀತಿಯ ಮೆಸೇಜ್​ಗಳು ಬರುತ್ತಿದೆ. ”ತಕ್ಷಣವೇ ನಿಮ್ಮ ಬ್ಯಾಂಕ್ ಖಾತೆಯೆ ಮಾಹಿತಿಯನ್ನು ಅಪ್ಡೇಟ್ ಮಾಡಿ, ಇಲ್ಲವಾದಲ್ಲಿ ನಿಮ್ಮ ಖಾತೆ ಬ್ಲಾಕ್ ಆಗುತ್ತದೆ” ಎಂಬ ಫೇಕ್ ಸಂದೇಶ ಬರುತ್ತದೆ. ಇದನ್ನು ನೋಡಿದ ತಕ್ಷಣ ಬಳಕೆದಾರರು ಗಾಬರಿಗೊಂಡು ಮೆಸೇಜ್​ನಲ್ಲಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಾನ್ ಕಾರ್ಡ್ ಅಥವಾ ಅಕೌಂಟ್ ಮಾಹಿತಿಯನ್ನು ಭರ್ತಿ ಮಾಡಲು ಮುಂದಾಗುತ್ತಾರೆ. ಇದು ಪೂರ್ಣವಾದ ತಕ್ಷಣ ಸ್ಕ್ಯಾಮರ್​ಗಳು ಸುಲಭವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಪ್ರವೇಶಿಸಿ ಹಣವನ್ನು ದೂಚುತ್ತಾರೆ. ಕೆಲವು ದಿನಗಳಿಂದ ಈರೀತಿಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ.

ಮೊನ್ನೆಯಷ್ಟೆ ಗುರುಗ್ರಾಮದಲ್ಲಿ ವಾಸಿಸುತ್ತಿರುವ ಮಾಧ್ವಿ ದತ್ತಾ ಎಂಬ ಮಹಿಳೆಯ ಇನ್​ಬಾಕ್ಸ್​ಗೆ ಒಂದು ಎಸ್​ಎಮ್​ಎಸ್ ಬಂದಿದೆ. ”ನಿಮ್ಮ ಹೆಚ್​ಡಿಎಫ್​ಸಿ ಖಾತೆಯ ಅವದಿ ಇಂದಿಗೆ ಮುಕ್ತಾಯಗೊಳ್ಳುತ್ತದೆ, ತಕ್ಷಣವೆ ಇಲ್ಲಿ ಕ್ಲಿಕ್ ಮಾಡುವ ಮೂಲಕ ನಿಮ್ಮ ಮೊಬೈಲ್ ನಂಬರ್ ಅನ್ನು ಮತ್ತು ಪಾನ್ ಕಾರ್ಡ್​ಗೆ ಲಿಂಕ್ ಮಾಡಿ”, ಎಂಬ ಸಂದೇಶ ಬಂದಿದೆ. ಇದು ಬ್ಯಾಂಕ್​ನಿಂದ ಬಂದ ಮೆಸೇಜ್ ಎಂದು ನಂಬಿದ ಮಹಿಳೆ ಲಿಂಕ್ ತೆರೆದ ತಕ್ಷಣ ಒಂದು ವೆಬ್ ಪೇಜ್ ಓಪನ್ ಆಗಿದೆ. ಅಲ್ಲಿರುವ ಮಾಹಿತಿಯನ್ನು ಭರ್ತಿ ಮಾಡಿದ್ದಾರೆ. ನಂತರ ಓಟಿಪಿ ಹಾಕುವಂತೆ ಸೂಚಿಸಲಾಗಿದೆ. ಮಹಿಳೆ ಓಟಿಪಿ ಹಾಕಿದ ತಕ್ಷಣ ಖಾತೆಯಿಂದ 1 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಇದನ್ನೂ ಓದಿ
Image
Tech Tips: ಪಿಡಿಫ್ ಫೈಲ್​ಗಳ ಪಾಸ್‌ವರ್ಡ್ ರಿಮೂವ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Image
Tecno Spark 8 Pro: ಅತ್ಯುತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿಯ ಸ್ಮಾರ್ಟ್​ಫೋನ್ ಬೇಕೇ?: ಕೇವಲ 8,399 ರೂ. ಗೆ ಈ ಫೋನನ್ನು ಖರೀದಿಸಿ
Image
Tech Tips: ನಿಮ್ಮ ಜಿಮೇಲ್​ನಲ್ಲಿ ಸ್ಟೋರೇಜ್​ ಫುಲ್ ಆಗಿದ್ದರೆ ಟೆನ್ಶನ್ ಬೇಡ: ಈ ಟ್ರಿಕ್ ಫಾಲೋ ಮಾಡಿ
Image
Instagram Blue Tick: ಇನ್​ಸ್ಟಾಗ್ರಾಮ್, ಫೇಸ್​ಬುಕ್​ನಲ್ಲಿ ಬಂದೇ ಬಿಡ್ತು ಹಣ ಕೊಟ್ಟು ಬ್ಲೂ ಟಿಕ್ ಪಡೆಯುವ ಆಯ್ಕೆ: ಬೆಲೆ ಎಷ್ಟು?

Mobile Blast: ಬಾಂಬ್​ನಂತೆ ಸ್ಪೋಟಗೊಂಡ ಶವೋಮಿ ಕಂಪನಿಯ ಸ್ಮಾರ್ಟ್​ಫೋನ್: ನಿಮ್ಮ ಬಳಿ ಇದೆಯೇ ಈ ಫೋನ್?

ಅಂತೆಯೆ ಮುಂಬೈ ಮೂಲದ ರಾಮ್​ಸಿಂಗ್ ರಜಪೂತ್ ಎಂಬ 29 ವರ್ಷದ ವ್ಯಕ್ತಿ ಕೂಡ ಸೈಬರ್ ವಂಚನೆಗೆ ಗುರಿಯಾಗಿದ್ದರು. ಕೋಟಕ್ ಮಹೀಂದ್ರ ಕ್ರೆಡಿಟ್ ಕಾರ್ಡ್​ನಲ್ಲಿ ಹಣವನ್ನು ಹೆಚ್ಚಿಸುವ ಆಮೀಷ ಒಡ್ಡಿ ಬಂದ ಕರೆಯಿಂದ ಇವರು 22,396 ರೂ. ಕಳೆದುಕೊಂಡಿದ್ದರು. ಪ್ರಿಯಾಂಕ ಧರ್ಮಾ ಎಂಬವರಿಂದ ರಾಮ್​ಸಿಂಗ್​ಗೆ ಕರೆಯೊಂದು ಬರುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಅನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ನಂಬಿದ ರಾಮ್​ಸಿಂಗ್ ತನಗೆ ಬಂದ ಒಟಿಪಿ ಅನ್ನು ಕರೆ ಮಾಡಿದವರೊಂದಿಗೆ ಹಂಚಿಕೊಂಡಿದ್ದಾರೆ. ಇದಾದ ತಕ್ಷಣ ತನ್ನ ಖಾತೆಯಲ್ಲಿದ್ದ ಹಣವನ್ನು ರಾಮ್​ಸಿಂಗ್ ಕಳೆದುಕೊಂಡಿದ್ದಾರೆ.

ಹಣ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು?:

ಪೊಲೀಸರು ಇತ್ತೀಚೆಗಷ್ಟೆ ಪರಿಚಯಿಸಿರುವ “ಗೋಲ್ಡನ್ ಅವರ್” ಎಂಬ ಸೌಲಭ್ಯ ಬಳಿಸಿದರೆ ಸೈಬರ್ ವಂಚಕರ ಜಾಲದಿಂದ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು. ಈಗಾಗಲೇ ಈ ಗೋಲ್ಡನ್ ಅವರ್ ಸೌಲಭ್ಯ ಬಳಿಸಿಕೊಂಡು ಸಾವಿರಾರು ಜನರು ಸೈಬರ್ ವಂಚಕ ಜಾಲದಿಂದ ಕಳೆದುಕೊಂಡಿದ್ದ ಹಣವನ್ನು ಮರಳಿ ವಾಪಸು ಪಡೆದಿದ್ದಾರೆ. ಕೊರೊನ ಲಾಕ್‌ಡೌನ್ ಸಮಯದಲ್ಲಿ, ಆನ್‌ಲೈನ್ ವಂಚನೆಯಂತಹ ಸೈಬರ್ ಅಪರಾಧ ಪ್ರಕರಣಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿತ್ತು. ಈ ಕಾರಣಕ್ಕಾಗಿ ಗೋಲ್ಡನ್ ಅವರ್ ಸೌಲಭ್ಯ ತರಲಾಗಿದೆ.

ಏನಿದು ಗೋಲ್ಡನ್ ಅವರ್?:

ಹೆಚ್ಚಿನ ಸಮಯದಲ್ಲಿ ಸೈಬರ್ ವಂಚಕರು ಹಣ ಕದಿಯುವ ಉದ್ದೇಶದಿಂದ ಮೆಸೇಜ್ ಕಳುಹಿಸುವುದು, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ ವರ್ಡ್ ಚೇಂಜ್ ಎಂಬ ಆಫರ್ ಸಂದೇಶ ಅಥವಾ ಕರೆಗಳನ್ನು ಸ್ವೀಕರಿಸುತ್ತಾರೆ. ಆಗ ಆಕಸ್ಮಿಕವಾಗಿ ಗೊತ್ತಿಲ್ಲದೇ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದಕೊಂಡರೆ, ಕಳೆದುಕೊಂಡ ಒಂದು ಗಂಟೆಯ ಒಳಗೆ ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿ. ಹಣ ಕಳೆದುಕೊಂಡ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಕೇಳುವ ಪೂರ್ಣ ವಿವರ ನೀಡಬೇಕು. ಇದನ್ನೇ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ.

ಯಾರಾದರೂ ಸೈಬರ್ ವಂಚನೆ ಮೂಲಕ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಸೈಬರ್ ಕ್ರೈಂ ವಿಭಾಗದ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ನಿಮ್ಮ ಮಾಹಿತಿಯನ್ನು ಆಧರಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯಿಂದ ಬೇರೆಯವರಿಗೆ ಹಣ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ www.cybercrime.gov.in ಮೂಲಕವೂ ದೂರು ನೀಡಬಹುದು. ಈ ಮೂಲಕ ಸೈಬರ್ ವಂಚಕರ ಮೋಸದ ಜಾಲ ನಿಯಂತ್ರಣಕ್ಕೆ ಮಹತ್ವದ ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Mon, 20 March 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್