Kannada News Technology A 200MP Camera Phone Infinix Zero Ultra Goes On Sale In India via Flipkart Technology News in Kannada
Infinix Zero Ultra: 200MP ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಸ್ಮಾರ್ಟ್‌ಫೋನ್ ಮಾರಾಟ ಆರಂಭ: ಬೆಲೆ ಎಷ್ಟು?
200MP Camera Phone: ಮೊನ್ನೆಯಷ್ಟೆ ಇನ್ಫಿನಿಕ್ಸ್ ಕಂಪನಿ ತನ್ನ ಮೊಟ್ಟಮೊದಲ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ ಅಲ್ಟ್ರಾ (Infinix Zero Ultra) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅನಾವರಣ ಮಾಡಿತ್ತು. ಇದೀಗ ಈ ಫೋನ್ ಖರೀದಿಗೆ ಸಿಗುತ್ತಿದೆ.
Infinix Zero Ultra
Follow us on
ಹೆಚ್ಚಾಗಿ ಅಗ್ಗದ ಫೋನ್‌ಗಳಿಗೆ ಹೆಸರುವಾಸಿಯಾಗಿರುವ ಇನ್ಫಿನಿಕ್ಸ್ (Infinix) ಕಂಪನಿ ಈ ವರ್ಷದ ಹೆಚ್ಚು ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೊಸ ವರ್ಷ ಆಗಮಿಸುತ್ತಿರುವ ಹಿನ್ನಡೆಯಲ್ಲಿ ಮೊನ್ನೆಯಷ್ಟೆ ಕಂಪನಿ ತನ್ನ ಮೊಟ್ಟಮೊದಲ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಇನ್ಫಿನಿಕ್ಸ್ಜಿರೋ ಅಲ್ಟ್ರಾ (Infinix Zero Ultra) ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅನಾವರಣ ಮಾಡಿತ್ತು. ಇದೀಗ ಈ ಫೋನ್ ದೇಶದಲ್ಲಿ ಖರೀದಿಗೆ ಸಿಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ (Flipkart) ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಸೇಲ್ ಕಾಣುತ್ತಿದೆ. ಹಾಗಾದರೆ, ಈ ಫೋನಿನ ಫೀಚರ್ಗಳು ಏನೇನು?, ಬೆಲೆ ಎಷ್ಟು ಎಂಬುದನ್ನು ನೋಡೋಣ.
ಇನ್ಫಿನಿಕ್ಸ್ ಜಿರೋ ಅಲ್ಟ್ರಾ ಸ್ಮಾರ್ಟ್‌ಫೋನ್ ಸದ್ಯಕ್ಕೆ ಭಾರತದಲ್ಲಿ ಒಂದು ಆಯ್ಕೆಯಲ್ಲಷ್ಟೆ ರಿಲೀಸ್ ಆಗಿದೆ. ಇದರ 8GB + 128GB ಮಾದರಿಗೆ 29,999ರೂ. ಬೆಲೆಯನ್ನು ಹೊಂದಿದೆ.
ಆದರೆ, ಫ್ಲಿಪ್‌ಕಾರ್ಟ್ ಮೂಲಕ ಈ ಫೋನ್ ಈಗ 32,999 ರೂ. ಗೆ ಮಾರಾಟ ಆಆಗುತ್ತಿದೆ. ಇದು ಕಾಸ್ಲೈಟ್ ಸ್ಲಿವರ್ ಮತ್ತು ಜೆನೆಸಿಸ್ ನಾಯರ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ.