Twitter Data: ಸುಂದರ್ ಪಿಚೈ, ಸಲ್ಮಾನ್ ಖಾನ್ ಸೇರಿ 40 ಕೋಟಿ ಟ್ವಿಟರ್ ಬಳಕೆದಾರರ ವೈಯಕ್ತಿಕ ವಿವರ ಡಾರ್ಕ್​ವೆಬ್​ನಲ್ಲಿ ಮಾರಾಟಕ್ಕೆ; ವರದಿ

ಗೂಗಲ್ ಸಿಇಒ ಸುಂದರ್ ಪಿಚೈ, ಬಾಲಿವುಡ್ ನಟ ಸಲ್ಮಾನ್ ಖಾನ್, ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೇರಿದಂತೆ 40 ಕೋಟಿ ಟ್ವಿಟರ್ ಬಳಕೆದಾರರ ವೈಯಕ್ತಿಕ ದತ್ತಾಂಶ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

Twitter Data: ಸುಂದರ್ ಪಿಚೈ, ಸಲ್ಮಾನ್ ಖಾನ್ ಸೇರಿ 40 ಕೋಟಿ ಟ್ವಿಟರ್ ಬಳಕೆದಾರರ ವೈಯಕ್ತಿಕ ವಿವರ ಡಾರ್ಕ್​ವೆಬ್​ನಲ್ಲಿ ಮಾರಾಟಕ್ಕೆ; ವರದಿ
ಟ್ವಿಟರ್ ಬಳಕೆದಾರರ ವೈಯಕ್ತಿಕ ವಿವರ ಸೋರಿಕೆ
Follow us
TV9 Web
| Updated By: Ganapathi Sharma

Updated on: Dec 26, 2022 | 5:46 PM

ನವದೆಹಲಿ: ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai), ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan), ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೇರಿದಂತೆ 40 ಕೋಟಿ ಟ್ವಿಟರ್ (Twitter) ಬಳಕೆದಾರರ ವೈಯಕ್ತಿಕ ದತ್ತಾಂಶ (Personal Data) ಸೋರಿಕೆಯಾಗಿದೆ. ಇದು ಡಾರ್ಕ್​​ವೆಬ್​ನಲ್ಲಿ (Dark Web) ಮಾರಾಟಕ್ಕಿದೆ ಎಂದು ಇಸ್ರೇಲ್​ನ ಸೈಬರ್ ಗುಪ್ತಚರ ಕಂಪನಿ ಹಡ್ಸನ್ ರಾಕ್ (Hudson Rock) ವರದಿ ತಿಳಿಸಿದೆ. ಇ-ಮೇಲ್, ಯೂಸರ್​ನೇಮ್, ಫಾಲೋವರ್ಸ್, ದೂರವಾಣಿ ಸಂಖ್ಯೆಗಳನ್ನೂ ಮಾರಾಟಕ್ಕಿಡಲಾಗಿದೆ. 40 ಕೋಟಿ ಬಳಕೆದಾರರ ಸಂಪೂರ್ಣ ಖಾಸಗಿ ಮಾಹಿತಿಯನ್ನು ಮಾರಾಟ ಮಾಡಲಿದ್ದೇನೆ ಎಂದು ಹ್ಯಾಕರ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಮಾಲೀಕತ್ವ ವಹಿಸಿಕೊಂಡ ಕೆಲವೇ ದಿನಗಳಲ್ಲಿ 54 ಲಕ್ಷ ಟ್ವಿಟರ್​ ಬಳಕೆದಾರರ ದತ್ತಾಂಶ ಸೋರಿಕೆಯಾಗಿತ್ತು. ಈ ಬಗ್ಗೆ ಐರಿಷ್ ದತ್ತಾಂಶ ಸಂರಕ್ಷಣಾ ಆಯೋಗ ತನಿಖೆ ನಡೆಸುತ್ತಿದೆ.

ಎಲಾನ್ ಮಸ್ಕ್​ಗೇ ಸವಾಲು

ಹ್ಯಾಕರ್ ಟ್ವಿಟರ್ ಮಾಲೀಕ ಎಲಾನ್​ ಮಸ್ಕ್​ಗೇ ಸವಾಲು ಹಾಕಿ ಸಂದೇಶ ಪ್ರಕಟಿಸಿದ್ದಾನೆ. ‘ಮಸ್ಕ್ ಅವರೇ, ನೀವು ಈ ಸಂದೇಶವನ್ನು ಓದುತ್ತಿದ್ದರೆ ಗಮನಿಸಿ. ಈಗಾಗಲೇ 54 ಲಕ್ಷ ಬಳಕೆದಾರರ ದತ್ತಾಂಶ ಸೋರಿಕೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದೀರಿ. ಈಗ 40 ಕೋಟಿ ಬಳಕೆದಾರರ ದತ್ತಾಂಶ ಸೋರಿಕೆಯಾಗಿದೆ. ನಿಮ್ಮ ಮುಂದಿರುವ ಉತ್ತಮ ಆಯ್ಕೆಯೆಂದರೆ ನೀವೇ ಹಣ ಪಾವತಿ ಮಾಡಿ ಈ ದತ್ತಾಂಶಗಳನ್ನು ಖರೀದಿಸುವುವುದು’ ಎಂದು ಉಲ್ಲೇಖಿಸಿದ್ದಾನೆ.

ಯಾವೆಲ್ಲ ಗಣ್ಯರ, ಸಂಸ್ಥೆಗಳ ದತ್ತಾಂಶ ಸೋರಿಕೆ?

  • ಸುಂದರ್ ಪಿಚೈ
  • ಸ್ಪೇಸ್​ಎಕ್ಸ್
  • ಸಲ್ಮಾನ್ ಖಾನ್
  • ಭಾರತ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
  • ವಿಶ್ವ ಆರೋಗ್ಯ ಸಂಘಟನೆಯ ಸೋಶಿಯಲ್ ಮೀಡಿಯಾ ಹ್ಯಾಂಡಲ್
  • ಚಾರ್ಲಿ ಪುತ್
  • ಶಾನ್ ಮೆಂಡಿಸ್
  • ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್
  • ಸಿಬಿಎಸ್​ ಮೀಡಿಯಾ
  • ಡೊನಾಲ್ಡ್ ಟ್ರಂಪ್
  • ಡೋಜಾ ಕ್ಯಾಟ್
  • ನಾಸಾದ ಜೆಡಬ್ಲ್ಯುಎಸ್​ಟಿ ಖಾತೆ
  • ಎನ್​ಬಿಎ

ಇದನ್ನೂ ಓದಿ: Twitter Gold Checkmark: ಟ್ವಿಟರ್​ನಲ್ಲಿ ಬ್ಲೂ ಜತೆಗೆ ಗ್ರೇ, ಗೋಲ್ಡ್ ಟಿಕ್; ಏನಿದರ ಒಳಮರ್ಮ? ಇಲ್ಲಿದೆ ನೋಡಿ

ಮಧ್ಯವರ್ತಿ ಮೂಲಕ ಡೀಲ್​ಗೆ ಮುಂದಾದ ಹ್ಯಾಕರ್

ಮಧ್ಯವರ್ತಿಗಳ ಮೂಲಕ ವ್ಯವಹಾರ ಕುದುರಿಸುವುದಕ್ಕೂ ಸಹಮತ ಇದೆ ಎಂದು ಹ್ಯಾಕರ್ ಹೇಳಿರುವುದಾಗಿ ಹಡ್ಸನ್ ರಾಕ್ ವರದಿ ತಿಳಿಸಿದೆ. ವ್ಯವಹಾರ ಅಂತಿಮಗೊಂಡರೆ ಈ ಸಂದೇಶವನ್ನು ಅಳಿಸಿಹಾಕಲಿದ್ದೇನೆ ಮತ್ತು ಮತ್ತೊಂದು ಬಾರಿ ದತ್ತಾಂಶವನ್ನು ಮಾರಾಟ ಮಾಡುವುದಿಲ್ಲ ಎಂದು ಹ್ಯಾಕರ್ ಭರವಸೆ ನೀಡಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್