Twitter Gold Checkmark: ಟ್ವಿಟರ್ನಲ್ಲಿ ಬ್ಲೂ ಜತೆಗೆ ಗ್ರೇ, ಗೋಲ್ಡ್ ಟಿಕ್; ಏನಿದರ ಒಳಮರ್ಮ? ಇಲ್ಲಿದೆ ನೋಡಿ
ಇದೀಗ ಬ್ಲೂಟಿಕ್ ಯೋಜನೆ ಮರಳಿ ಆರಂಭಿಸುವುದರ ಜತೆಗೆ ಹೊಸ ಎರಡು ಆಯ್ಕೆಗಳನ್ನು ನೀಡಿದೆ. ಗೋಲ್ಡ್ ಅಥವಾ ಯೆಲ್ಲೋ ಟಿಕ್ ಈಗಾಗಲೇ ಆರಂಭವಾಗಿದ್ದು, ಸದ್ಯದಲ್ಲೇ ಗ್ರೇ ಟಿಕ್ ಸಹ ಜಾರಿಗೆ ಬರಲಿದೆ.
ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟರ್ (Twitter) ಈಗ ಮೂರು ರೀತಿಯ ದೃಢೀಕರಣ (Verification) ವ್ಯವಸ್ಥೆಯೊಂದಿಗೆ ಬಳಕೆದಾರರಿಗೆ ಲಭ್ಯವಾಗುತ್ತಿದೆ. ಬ್ಲೂಟಿಕ್ ಜತೆಗೆ ಇದೀಗ ಗ್ರೇ, ಗೋಲ್ಡ್ ಟಿಕ್ಗಳನ್ನೂ ಟ್ವಿಟರ್ ಪರಿಚಯಿಸಿದೆ. ಈ ಹಿಂದೆ ಟ್ವಿಟರ್ನಲ್ಲಿ ದೃಢೀಕೃತ ಎಲ್ಲ ಖಾತೆಗಳಿಗೂ ಬ್ಲೂಟಿಕ್ ನೀಡಲಾಗುತ್ತಿತ್ತು. ಅದಕ್ಕೆ ಶುಲ್ಕ ವಿಧಿಸುವ ಬಗ್ಗೆ ಕಂಪನಿಯ ಮಾಲೀಕ ಎಲಾನ್ ಮಸ್ಕ್ (Elon Musk) ಇತ್ತೀಚೆಗೆ ನಿರ್ಧಾರ ಕೈಗೊಂಡಿದ್ದರು. ಇದನ್ನು ನಕಲಿ ಖಾತೆದಾರರು ದುರುಪಯೋಗಪಡಿಸಿಕೊಂಡಿದ್ದರಿಂದ ನಿರ್ಧಾರ ವಾಪಸ್ ಪಡೆಯಲಾಗಿತ್ತು. ಇದೀಗ ಬ್ಲೂಟಿಕ್ ಯೋಜನೆ ಮರಳಿ ಆರಂಭಿಸುವುದರ ಜತೆಗೆ ಹೊಸ ಎರಡು ಆಯ್ಕೆಗಳನ್ನು ನೀಡಿದೆ. ಗೋಲ್ಡ್ ಅಥವಾ ಯೆಲ್ಲೋ ಟಿಕ್ ಈಗಾಗಲೇ ಆರಂಭವಾಗಿದ್ದು, ಸದ್ಯದಲ್ಲೇ ಗ್ರೇ ಟಿಕ್ ಸಹ ಜಾರಿಗೆ ಬರಲಿದೆ.
ಜನಸಾಮಾನ್ಯರು, ಸೆಲೆಬ್ರಿಟಿಗಳು ಹೊಂದಿರುವ ಟ್ವಿಟರ್ ಖಾತೆಯ ದೃಢೀಕರಣದ ಬಳಿಕ ಅದಕ್ಕೆ ಬ್ಲೂಟಿಕ್ ನೀಡಲಾಗುತ್ತಿದೆ. ಕಂಪನಿಗಳು, ಸಂಸ್ಥೆಗಳ ಟ್ವಿಟರ್ ಖಾತೆಗಳಿಗೆ ಯೆಲ್ಲೋ ಅಥವಾ ಗೋಲ್ಡ್ ಟಿಕ್ ನೀಡಲಾಗುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಟ್ವಿಟರ್ ಖಾತೆಗಳಿಗೆ ಗ್ರೇ ಟಿಕ್ ನೀಡಲಾಗುವುದು ಎಂದು ಎಲಾನ್ ಮಸ್ಕ್ ನವೆಂಬರ್ 25ರಂದು ಟ್ವೀಟ್ ಮೂಲಕ ತಿಳಿಸಿದ್ದರು. ವಿಳಂಬವಾಗಿ ದೃಢೀಕರಣ ಪ್ರಕ್ರಿಯೆ ಆರಂಭಿಸುತ್ತಿರುವುದಕ್ಕೆ ಕ್ಷಮೆ ಇರಲಿ. ಇದೊಂದು ಬೇಸರದ ನಿರ್ಧಾರ, ಆದರೆ ಅನಿವಾರ್ಯ ಎಂದು ಅವರು ಟ್ವೀಟ್ನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ: Twitter Blue Tick: ಇಂದಿನಿಂದ ಟ್ವಿಟರ್ ಬ್ಲೂಟಿಕ್ ಯಾರು ಬೇಕಾದರೂ ಪಡೆಯಬಹುದು: ಬೆಲೆ ಎಷ್ಟು ಗೊತ್ತೇ?
Sorry for the delay, we’re tentatively launching Verified on Friday next week.
Gold check for companies, grey check for government, blue for individuals (celebrity or not) and all verified accounts will be manually authenticated before check activates.
Painful, but necessary.
— Elon Musk (@elonmusk) November 25, 2022
ಬ್ಲೂಟಿಕ್ ಚಂದಾದಾರಿಕೆಗೆ ತಿಂಗಳಿಗೆ 660 ರೂಪಾಯಿ
ಟ್ವಿಟರ್ ಬ್ಲೂ ಚಂದಾದಾರಿಕೆಯನ್ನು ಡಿಸೆಂಬರ್ 12ರಂದು ಕಂಪನಿ ಜಾರಿಗೊಳಿಸಿತ್ತು. ಇದನ್ನು ಯಾವ ವ್ಯಕ್ತಿ ಬೇಕಾದರೂ ಖರೀದಿಸಬಹುದು. ಇದಕ್ಕೆ ಸೆಲೆಬ್ರಿಟಿಗಳೇ ಆಗಬೇಕು ಅಥವಾ ಕಂಪನಿಗಳು ಮತ್ತು ರಾಜಕಾರಣಿಗಳೇ ಆಗಬೇಕೆಂದಿಲ್ಲ. ಬ್ಲೂ ಚಂದಾದಾರಿಕೆ ವೆಬ್ ಮೂಲಕ ಬಳಕೆಗೆ ತಿಂಗಳಿಗೆ 8 ಡಾಲರ್ ಪಾವತಿಸಬೇಕು. ಅಂದರೆ 660 ರೂಪಾಯಿಯಷ್ಟು. ಆದರೆ ಆ್ಯಪಲ್ ಐಓಸ್ ಮೂಲಕ ತಿಂಗಳಿಗೆ 11 ಡಾಲರ್ ಪಾವತಿ ಮಾಡಬೇಕು ಎಂದು ಟ್ವಿಟರ್ ಹೇಳಿದೆ. ಆಪಲ್ ಬಳಕೆದಾರರಿಗೆ ಇತರರಿಗಿಂತ ಹೆಚ್ಚಿನ ಶುಲ್ಕವನ್ನು ಏಕೆ ವಿಧಿಸಲಾಗುತ್ತಿದೆ ಎಂಬ ಬಗ್ಗೆ ಟ್ವಿಟರ್ ವಿವರಣೆ ನೀಡಿಲ್ಲ.
ಇದನ್ನೂ ಓದಿ: ಓಲಾ, ಉಬರ್ ದರ ಹೆಚ್ಚಳದಿಂದ ಬೇಸತ್ತಿದ್ದೀರಾ? ದಿಢೀರ್ ದರ ಹೆಚ್ಚಳ ತಪ್ಪಿಸಲು ಇಲ್ಲಿದೆ ಟಿಪ್ಸ್
ಮುಂದಿನ ಕೆಲವೇ ವಾರಗಳಲ್ಲಿ ಟ್ವಿಟರ್ನಲ್ಲಿ ವಿವ್ಸ್ ಕೌಂಟ್ ಕಾಣಿಸುವ ಹೊಸ ಫೀಚರ್ ಆರಂಭವಾಗಲಿದೆ ಎಂದು ಎಲಾನ್ ಮಸ್ಕ್ ಇತ್ತೀಚೆಗೆ ಘೋಷಿಸಿದ್ದರು. ಮಾಡಿರುವ ಟ್ವೀಟ್ ಅನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬುದು ತಿಳಿಯುವಂತಿದ್ದರೆ ಜನ ಹೆಚ್ಚೆಚ್ಚು ಟ್ವೀಟ್ ಮಾಡಬಹುದು ಮತ್ತು ಟ್ವಿಟರ್ನಲ್ಲಿ ಹೆಚ್ಚು ತೊಡಗಿಸಿಕೊಳ್ಳಬಹುದು ಎಂಬುದು ಮಸ್ಕ್ ಲೆಕ್ಕಾಚಾರ. ಇದಕ್ಕಾಗಿಯೇ ವಿವ್ಸ್ ಕೌಂಟ್ ತೋರಿಸುವ ಫೀಚರ್ ಆರಂಭಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿದ್ದವು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ