ಓಲಾ, ಉಬರ್ ದರ ಹೆಚ್ಚಳದಿಂದ ಬೇಸತ್ತಿದ್ದೀರಾ? ದಿಢೀರ್ ದರ ಹೆಚ್ಚಳ ತಪ್ಪಿಸಲು ಇಲ್ಲಿದೆ ಟಿಪ್ಸ್

ತುರ್ತು ಸಂದರ್ಭಗಳಲ್ಲಿ, ತರಾತುರಿಯಲ್ಲಿ ತೆರಳಬೇಕಾದ ಸಂದರ್ಭ ಬಂದರೆ ಹೆಚ್ಚು ದರ ಪಾವತಿಸದೆ ವಿಧಿಯಿಲ್ಲ. ಆದರೆ ತೀರಾ ಗಡಿಬಿಡಿಯಲ್ಲಿ ಇಲ್ಲದಿದ್ದಾಗ ಓಲಾ, ಉಬರ್ ಟ್ಯಾಕ್ಸಿ ದರ ಹೆಚ್ಚಳವನ್ನು ಹೇಗೆ ತಡೆಯಬಹುದು? ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.

ಓಲಾ, ಉಬರ್ ದರ ಹೆಚ್ಚಳದಿಂದ ಬೇಸತ್ತಿದ್ದೀರಾ? ದಿಢೀರ್ ದರ ಹೆಚ್ಚಳ ತಪ್ಪಿಸಲು ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Dec 14, 2022 | 11:26 AM

ಓಲಾ (Ola), ಉಬರ್ (Uber) ಕ್ಯಾಬ್​ ಟ್ಯಾಕ್ಸಿ ಸೇವೆಗಳು (Cab Service) ಬಂದ ನಂತರ ಪ್ರಯಾಣ ಸುಲಭವಾಗಿದೆ. ದಿನದ 24 ಗಂಟೆಯೂ ಈ ಕಂಪನಿಗಳ ಟ್ಯಾಕ್ಸಿ ಸೇವೆ ದೊರೆಯುವುದರಿಂದ ನಗರದ ಎಲ್ಲಿಗೆ ಬೇಕಾದರೂ ಯಾವಾಗ ಬೇಕಾದರೂ ಪ್ರಯಾಣಿಸಲು ಅನುಕೂಲವಾಗಿದೆ. ಕೆಲವೊಮ್ಮೆ ಸಾಮಾನ್ಯ ಟ್ಯಾಕ್ಸಿಗಳಿಗೆ ಹೋಲಿಸಿದರೆ ಈ ಕಂಪನಿಗಳ ಟ್ಯಾಕ್ಸಿಗಳ ದರವೂ ಕಡಿಮೆ ಇರುತ್ತದೆ. ಪ್ರಯಾಣದ ದೂರಕ್ಕೆ ಅನುಗುಣವಾಗಿ ಓಲಾ, ಉಬರ್ ಆ್ಯಪ್​ಗಳು ದರದ ಅಂದಾಜು ತೋರಿಸುತ್ತವೆ. ಆದರೆ ಪ್ರಯಾಣಿಸುವ ಸಮಯ, ಆ ಹೊತ್ತಿಗೆ ನಾವು ಪ್ರಯಾಣಿಸುವ ಪ್ರದೇಶದಲ್ಲಿ ಟ್ಯಾಕ್ಸಿಗಳಿಗೆ ಇರುವ ಬೇಡಿಕೆ ಇವುಗಳಿಗೆ ಅನುಗುಣವಾಗಿ ದರ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ; ನಿರ್ದಿಷ್ಟ ಪ್ರದೇಶವೊಂದಕ್ಕೆ ಪ್ರಯಾಣಿಸಲು 100 ರೂ. ದರ ಇದ್ದರೆ ಹೆಚ್ಚು ಬೇಡಿಕೆ ಇರುವ ಸಂದರ್ಭದಲ್ಲಿ ಇದು 150 ರೂ. ಸಹ ಆಗಬಹುದು. ನಿರ್ದಿಷ್ಟ ಪ್ರದೇಶದಲ್ಲಿ ಚಾಲಕರ ಲಭ್ಯತೆ ಕಡಿಮೆ ಇದ್ದಾಗ ದರ ಹೆಚ್ಚಿಸುವ ಮೂಲಕ ಹೆಚ್ಚು ಚಾಲಕರು ಆ ಪ್ರದೇಶಕ್ಕೆ ತೆರಳುವಂತೆ ಮಾಡುವುದು ಕಂಪನಿಗಳ ಲೆಕ್ಕಾಚಾರ ಇರಬಹುದು.

ಬೇಡಿಕೆ ಹೆಚ್ಚಿದ್ದಾಗ ದರ ಹೆಚ್ಚಳ ಮಾಡದಿದ್ದರೆ ಆ ಪ್ರದೇಶದಲ್ಲಿ ಪ್ರಯಾಣಿಕರು ಹೆಚ್ಚು ಕಾಯಬೇಕಾಗಿ ಬರುತ್ತದೆ. ದರ ಹಚ್ಚಿಸುವುದರಿಂದ ಹೆಚ್ಚಿನ ಚಾಲಕರು ಆ ಪ್ರದೇಶಕ್ಕೆ ತೆರಳುವುದರಿಂದ ಈ ಸಮಸ್ಯೆ ತಪ್ಪಿಸಬಹುದು ಎನ್ನುತ್ತದೆ ಉಬರ್. ಜನನಿಬಿಡ ಪ್ರದೇಶಗಳಲ್ಲಿ ಚಾಲಕರಿಗೆ ಹೆಚ್ಚಿನ ಭತ್ಯೆ ಸಿಗುವುದಿಲ್ಲ. ಹೀಗಾಗಿ ದರ ಹೆಚ್ಚಳದಿಂದ ಅವರಿಗೆ ಹೆಚ್ಚಿನ ನೆರವಾಗಲಿದೆ ಎಂಬುದು ಉಬರ್ ಸ್ಪಷ್ಟನೆ.

Redmi Note 12 Series: ಹೊಸ ವರ್ಷದಂದು ಭಾರತಕ್ಕೆ ಅಪ್ಪಳಿಸುತ್ತಿದೆ 200MP ಕ್ಯಾಮೆರಾದ ಹೊಸ ರೆಡ್ಮಿ ಸ್ಮಾರ್ಟ್​ಫೋನ್: ಬೆಲೆ ಎಷ್ಟು?

ತುರ್ತು ಸಂದರ್ಭಗಳಲ್ಲಿ, ತರಾತುರಿಯಲ್ಲಿ ತೆರಳಬೇಕಾದ ಸಂದರ್ಭ ಬಂದರೆ ಹೆಚ್ಚು ದರ ಪಾವತಿಸದೆ ವಿಧಿಯಿಲ್ಲ. ಆದರೆ ತೀರಾ ಗಡಿಬಿಡಿಯಲ್ಲಿ ಇಲ್ಲದಿದ್ದಾಗ ಓಲಾ, ಉಬರ್ ಟ್ಯಾಕ್ಸಿ ದರ ಹೆಚ್ಚಳವನ್ನು ಹೇಗೆ ತಡೆಯಬಹುದು? ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.

ಬೇಡಿಕೆ ಹೆಚ್ಚಿದ್ದಾಗ ಬುಕ್ ಮಾಡುವುದನ್ನು ತಪ್ಪಿಸಿ

ಬೇಡಿಕೆ ತೀರಾ ಹೆಚ್ಚಿದ್ದಾಗ ಅಥವಾ ಪೀಕ್ ಅವರ್​ಗಳಲ್ಲಿ ಟ್ಯಾಕ್ಸಿ ಬುಕ್ ಮಾಡುವುದನ್ನು ತಪ್ಪಿಸಿ. ದರ ಹೆಚ್ಚಳ ಹೇಗೂ ಇಡೀ ದಿನ ಇರುವುದಿಲ್ಲ. ತುಸು ಹೊತ್ತು ಕಾದು ನಂತರ ಬುಕ್ ಮಾಡುವುದರಿಂದ ಹೆಚ್ಚು ದರ ತೆರಬೇಕಾಗುವ ಅನಿವಾರ್ಯತೆಯನ್ನು ತಪ್ಪಿಸಬಹುದು.

ಪಿಕ್-ಅಪ್ ಜಾಗದಿಂದ ತುಸು ದೂರ ನಡೆಯಿರಿ

ನೀವು ಟ್ಯಾಕ್ಸಿ ಬುಕ್ ಮಾಡುವ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿದ್ದು ದರ ಹೆಚ್ಚಾಗುತ್ತಿದೆ ಎಂಬುದು ನಿಮ್ಮ ಗಮನಕ್ಕೆ ಬಂದರೆ, ಹಾಗೆಯೇ ತುಸು ದೂರ ನಡೆದುಕೊಂಡು ಹೋಗಿ. ನಂತರ ಟ್ಯಾಕ್ಸಿ ಬುಕ್ ಮಾಡಲು ಪ್ರಯತ್ನಿಸಿ. ಕೆಲವೊಂದು ಕಚೇರಿಗಳ ಮುಖ್ಯ ದ್ವಾರ ಅಥವಾ ನಿರ್ದಿಷ್ಟ ಪ್ರದೇಶಗಳಿಗೆ ಬೇಡಿಕೆ ಹೆಚ್ಚಿದ್ದು ದರ ಹೆಚ್ಚಿರುತ್ತದೆ. ತುಸು ದೂರ ನಡೆದು ಟ್ಯಾಕ್ಸಿ ಬುಕ್ ಮಾಡುವಾಗ ಕಡಿಮೆ ದರಕ್ಕೆ ಸೇವೆ ಸಿಗಬಹುದು.

ಇತರ ಆ್ಯಪ್​ಗಳಲ್ಲಿ ದರ ಹೋಲಿಕೆ ಮಾಡಿ

ಒಂದು ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಲು ಮುಂದಾದಾಗ ದರ ಹೆಚ್ಚಳ ಕಂಡುಬಂದರೆ ಮತ್ತೊಂದು ಆ್ಯಪ್​ನಲ್ಲಿ ಪ್ರಯತ್ನಿಸಿ ಮತ್ತು ದರ ಹೋಲಿಕೆ ಮಾಡಿ ನೋಡುವುದು ಒಳ್ಳೆಯದು. ಇದರಿಂದ ಆ ಆ್ಯಪ್​​ನಲ್ಲಿ ಕಡಿಮೆ ದರಕ್ಕೆ ಟ್ಯಾಕ್ಸಿ ಸೇವೆ ಸಿಗುವ ಸಾಧ್ಯತೆ ಇದೆ. ರೈಡ್ ಶೇರಿಂಗ್ ಆಯ್ಕೆಯ ಮೂಲಕವೂ ಕಡಿಮೆ ದರಕ್ಕೆ ಪ್ರಯಾಣ ಮಾಡಬಹುದು. ಓಲಾ, ಉಬರ್​​ನಂಥ ಸಂಸ್ಥೆಗಳು ರೈಡ್ ಶೇರಿಂಗ್ ಆಯ್ಕೆ ನೀಡುತ್ತವೆ. ಇದೂ ಬೇಡವೆಂದರೆ ಓಲಾ, ಉಬರ್​ನಷ್ಟು ಖ್ಯಾತಿ ಗಳಿಸಿಲ್ಲದ ಬೇರೆ ಆ್ಯಪ್​ಗಳಲ್ಲಿ ಪ್ರಯತ್ನಿಸಿ ನೋಡಬಹುದು. ಇನ್​ಡ್ರೈವರ್, ರ್ಯಾಪಿಡೋದಂಥ (Rapido) ಆ್ಯಪ್​ಗಳಲ್ಲಿ ದರ ಕಡಿಮೆ ಇದ್ದರೆ ಅವುಗಳ ಸೇವೆ ಪಡೆಯಬಹುದು.

ಟ್ರಿಪ್ ಶೆಡ್ಯೂಲ್ ಆಯ್ಕೆ ಬಳಸಿ

ಆ್ಯಪ್​ಗಳಲ್ಲಿ ‘ಶೆಡ್ಯೂಲ್ ಯುವರ್ ಟ್ರಿಪ್’ ಆಯ್ಕೆ ಇದ್ದು ಅದನ್ನು ಬಳಸಿಕೊಳ್ಳುವುದು ಉತ್ತಮ. ಮೊದಲೇ ಟ್ರಿಪ್​ ಅನ್ನು ಶೆಡ್ಯೂಲ್ ಮಾಡಿ ಇಟ್ಟುಕೊಳ್ಳುವುದರಿಂದ ಆಗ ನಿರ್ಧಾರವಾದ ಬೆಲೆ ಪಾವತಿಸಿದರೆ ಸಾಕಾಗುತ್ತದೆ. ಕ್ಯಾಬ್ ಬುಕ್ ಮಾಡಲು ಕಾಯುವ ಮತ್ತು ದರ ಹೆಚ್ಚಳದ ಸಮಸ್ಯೆ ಇರುವುದಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ