Year Ender 2022: 2022ರ ನಂಬರ್ 1 ಸ್ಮಾರ್ಟ್​ಫೋನ್ ಯಾವುದು ಗೊತ್ತೇ?: ಇಲ್ಲಿದೆ ನೋಡಿ

Number One Smartphone: ಭಾರತವು ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಕ್ವಾರ್ಟರ್ 2, 2022 ರಲ್ಲಿ ಭಾರತದಲ್ಲಿ ಸುಮಾರು 37 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಲಾಗಿದೆ. ಹಾಗಾದರೆ ಭಾರತದ 2022ರ ನಂಬರ್ ಒನ್ ಸ್ಮಾರ್ಟ್​ಫೋನ್ ಯಾವುದು?

Year Ender 2022: 2022ರ ನಂಬರ್ 1 ಸ್ಮಾರ್ಟ್​ಫೋನ್ ಯಾವುದು ಗೊತ್ತೇ?: ಇಲ್ಲಿದೆ ನೋಡಿ
Best Smartphone 2022
Follow us
TV9 Web
| Updated By: Vinay Bhat

Updated on: Dec 15, 2022 | 1:42 PM

2023ರ ಹೊಸ ವರ್ಷಕ್ಕೆ (New Year 2023) ಇನ್ನೇನು ಕೆಲವು ದಿನಗಳಷ್ಟೆ ಬಾಕಿಯಿದೆ. ಹೀಗಿರುವಾಗ 2022ನೇ ವರ್ಷದ ಟೆಕ್ ಜಗತ್ತನ್ನು ಮೆಲುಕಿ ಹಾಕಿ ನೋಡಿದಾಗ ಈ ವರ್ಷ ಅನೇಕ ಬದಲಾವಣೆಗಳು ನಡೆದಿವೆ. ಮುಖ್ಯವಾಗಿ ಭಾರತದಲ್ಲಿ 5ಜಿ ಯುವ ಆರಂಭವಾಯಿತು. ಹೊಸ ಹೊಸ ಶೈಲಿಯ ವಿಭಿನ್ನವಾದ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಎಂಟ್ರಿಕೊಟ್ಟವು. ನಥಿಂಗ್ ಫೋನ್ (Nothing Phone) ಎಂಬ ಹೊಸ ಕಂಪನಿ ಕೂಡ ಹುಟ್ಟುಕೊಂಡಿತು. ನೂತನ ಅಪ್ಡೇಟ್​ಗಳು ಬಂದು ಸ್ಮಾರ್ಟ್​ಫೋನ್ ಬಳಕೆದಾರರು ಸಂಭ್ರಮಿಸಿದರು. ಈ ವರ್ಷದ ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ ಐದು ಫೋನುಗಳು ಮಾರುಕಟ್ಟೆಗೆ ಆಗಮಿಸಿವೆ. ಇದರಲ್ಲಿ ಬಜೆಟ್ ಫೋನಿನಿಂದ ಹಿಡಿದು ಹೈ ರೇಂಜ್ ಫೋನುವರೆಗೂ ಇದೆ. ಬಿಡುಗಡೆಗೂ ಮುನ್ನ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಕೆಲವು ಸ್ಮಾರ್ಟ್​​ಫೋನ್​​ಗಳು (Smartphones) ಮಾರುಕಟ್ಟೆಯಲ್ಲಿ ನಿರಾಸೆ ಅನುಭವಿಸಿದ್ದೂ ಇದೆ. ಹಾಗಾದರೆ ಭಾರತದ 2022ರ ನಂಬರ್ ಒನ್ ಸ್ಮಾರ್ಟ್​ಫೋನ್ ಯಾವುದು?, ಮೊದಲ ಐದು ಸ್ಥಾನದಲ್ಲಿ ಯಾವೆಲ್ಲ ಫೋನ್​ಗಳಿವೆ ಎಂಬುದನ್ನು ನೋಡೋಣ.

ಭಾರತವು ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ, ಕ್ವಾರ್ಟರ್ 2, 2022 ರಲ್ಲಿ ಭಾರತದಲ್ಲಿ ಸುಮಾರು 37 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ರವಾನಿಸಲಾಗಿದೆ. ಭಾರತದಲ್ಲಿ ಈಗ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ 600 ಮಿಲಿಯನ್ ದಾಟಿದೆಂತೆ. ಇದಲ್ಲದೆ, ದೇಶದಲ್ಲಿ ಈಗ 5G ಯುಗ ಆರಂಭವಾಗಿರುವ ಕಾರಣ 50 ಪ್ರತಿಶತದಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಒಂದು ವರ್ಷದೊಳಗೆ ಹೊಸ ಮೊಬೈಲ್ ಖರೀದಿಸಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

2022ನೇ ವರ್ಷದ ಭಾರತದ ನಂಬರ್ ಒನ್ ಸ್ಮಾರ್ಟ್​ಫೋನ್ ಆಗಿ ಆ್ಯಪಲ್ ಕಂಪನಿಯ ಐಫೋನ್ 14 ಪ್ರೊ ಕಾಣಿಸಿಕೊಂಡಿದೆ. ಈ ಫೋನ್ ಕ್ಯಾಮೆರಾ, ಬ್ಯಾಟರಿ ಸೇರಿದಂತೆ ಹಲವು ವಿಭಾಗಗಳಲ್ಲಿ ಅಪ್‌ಡೇಟ್‌ ಪಡೆದಿವೆ. ಐಫೋನ್ 14 ಪ್ರೊ ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್‌ಪ್ಲೇ ಹೊಂದಿದ್ದು, ಮೊದಲ ಬಾರಿಗೆ ಆಲ್ವೇಸ್‌ ಆನ್ ಡಿಸ್‌ಪ್ಲೇ ನೀಡುತ್ತದೆ. ಹಿಂಬದಿಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ವಾಡ್ ಪಿಕ್ಸೆಲ್​ನಿಂದ ಕೂಡಿದ್ದು 65 ಪ್ರತಿಶತ ದೊಡ್ಡ ಸಂವೇದಕವನ್ನು ಹೊಂದಿದೆ. 48 ಮೆಗಾ ಪಿಕ್ಸೆಲ್ ಅಗಲದ ಕ್ಯಾಮೆರಾ 2x ಟೆಲಿಫೋಟೋ ವೀಕ್ಷಣೆಯನ್ನು ಸಹ ನೀಡುತ್ತದೆ. ವಿಶೇಷವಾಗಿ ಕ್ರ್ಯಾಶ್ ಡಿಟೆಕ್ಷನ್ ಮತ್ತು Emergency SOS via satellite ಸಂಪರ್ಕವನ್ನು ಪಡೆದುಕೊಂಡಿರುವುದು ಎಲ್ಲರ ಹುಬ್ಬೇರುವಂತೆ ಮಾಡಡಿದೆ. A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್ ಪಡೆದಿವೆ.

ಇದನ್ನೂ ಓದಿ
Image
Paytm: ಪೇಟಿಎಂನಿಂದ ಧಮಾಕ ಆಫರ್: ವಿದ್ಯುತ್ ಬಿಲ್ ಪಾವತಿಸಿದರೆ ಅಷ್ಟೂ ಹಣ ವಾಪಸ್
Image
Twitter Gold Checkmark: ಟ್ವಿಟರ್​ನಲ್ಲಿ ಬ್ಲೂ ಜತೆಗೆ ಗ್ರೇ, ಗೋಲ್ಡ್ ಟಿಕ್; ಏನಿದರ ಒಳಮರ್ಮ? ಇಲ್ಲಿದೆ ನೋಡಿ
Image
ಓಲಾ, ಉಬರ್ ದರ ಹೆಚ್ಚಳದಿಂದ ಬೇಸತ್ತಿದ್ದೀರಾ? ದಿಢೀರ್ ದರ ಹೆಚ್ಚಳ ತಪ್ಪಿಸಲು ಇಲ್ಲಿದೆ ಟಿಪ್ಸ್
Image
Online Fraud Awareness: ಆನ್​ಲೈನ್ ಶಾಪಿಂಗ್ ವೇಳೆ ವಂಚನೆಗಳಿಂದ ರಕ್ಷಣೆಗೆ ಈ ವಿಧಾನಗಳನ್ನು ಅನುಸರಿಸಿ

Year Ender 2022: ಈ ವರ್ಷ 15,000 ರೂ. ಒಳಗೆ ರಿಲೀಸ್ ಆದ ಟಾಪ್ 5 ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ

ಎರಡನೇ ಸ್ಥಾನದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ ಸ್ಮಾರ್ಟ್‌ಫೋನ್‌ ಇದೆ. ಇದು 6.8 ಇಂಚಿನ ಎಡ್ಜ್‌ QHD ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದ್ದು, ಇದರೊಂದಿಗೆ ಐ ಕಂಫರ್ಟ್ ಶೀಲ್ಡ್‌ ಸೌಲಭ್ಯ ಇದೆ. ಇದು ಆಕ್ಟಾ ಕೋರ್ 4 nm SoC ಪ್ರೊಸೆಸರ್‌ ಬೆಂಬಲ ಹೊಂದಿದ್ದು, 12 GB RAM ಮತ್ತು ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಫೋನ್ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 45W ಫಾಸ್ಟ್‌ ಚಾರ್ಜಿಂಗ್ ಬೆಂಬಲ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ.

ನಂತರದ ಸ್ಥಾನದಲ್ಲಿ ಗೂಗಲ್ ಪಿಕ್ಸೆಲ್ 7 ಪ್ರೊ ಇದೆ. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಕ್ವಾಡ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. 10.8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಈ ಸ್ಮಾರ್ಟ್‌ಫೋನ್​ನಲ್ಲಿ ವಿಶೇಷವಾದ ‘ಮ್ಯಾಕ್ರೋ ಫೋಕಸ್’ ಫೀಚರ್ಸ್‌ ಒಳಗೊಂಡಿದೆ ಎಂದು ಗೂಗಲ್‌ ಹೇಳಿದೆ. ಇದು ಕ್ಲೋಸ್-ಅಪ್ ಫೋಟೋಗಳನ್ನು ಅದ್ಭುತವಾಗಿ ಸೆರೆಹಿಡಿಯುತ್ತದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದು 30W ವೇಗದ ಚಾರ್ಜಿಂಗ್ ಮತ್ತು ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಪಡೆದಿದೆ.

ಶವೋಮಿ 12 ಪ್ರೊ ಸ್ಮಾರ್ಟ್‌ಫೋನ್‌ ನಾಲ್ಕನೇ ಸ್ಥಾನದಲ್ಲಿದೆ. ಇದು 6.72 ಇಂಚಿನ WQHD+ E5 ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX707 ಸೆನ್ಸಾರ್‌ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಬೆಂಬಲಿಸುವ f/1.8 ಲೆನ್ಸ್‌ ನೀಡಲಾಗಿದೆ. ಎರಡನೇ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ ಕೂಡ 50 ಮೆಗಾಪಿಕ್ಸೆಲ್ ಒಳಗೊಂಡಿದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗದೆ. 4,600mAh ಲಿ-ಪಾಲಿಮರ್‌ ಬ್ಯಾಟರಿಯನ್ನು ಹೊಂದಿದೆ. ಇದು 120W ಶವೋಮಿ ಹೈಪರ್‌ ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಐದನೇ ಸ್ಥಾನದಲ್ಲಿ ಒನ್‌ಪ್ಲಸ್‌ 10 ಪ್ರೊ ಸ್ಮಾರ್ಟ್‌ಫೋಮ್ ಇದೆ. ಈ ಫೋನ್ 6.7 ಇಂಚಿನ QHD+ ಲಿಕ್ವಿಡ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೋನಿ IMX789 ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಅಲ್ಟ್ರಾ ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಅನ್ನು ಹೊಂದಿದೆ. 32 ಮೆಗಾಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 80W ಸೂಪರ್‌ವೂಕ್‌ ವೈರ್ಡ್ ಚಾರ್ಜಿಂಗ್ ಮತ್ತು 50W ಏರ್‌ವೂಕ್‌ ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ.

ಮತ್ತಷ್ಟು ತಂತ್ರಜ್ಞಾನ  ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್