Paytm: ಪೇಟಿಎಂನಿಂದ ಧಮಾಕ ಆಫರ್: ವಿದ್ಯುತ್ ಬಿಲ್ ಪಾವತಿಸಿದರೆ ಅಷ್ಟೂ ಹಣ ವಾಪಸ್
Electricity Bill: ಪೇಟಿಎಂ ಧಮಾಕ ಆಫರ್ ಒಂದನ್ನು ಪರಿಚಯಿಸಿದೆ. ಬಳಕೆದಾರರು ಪ್ರತಿ ತಿಂಗಳ 10 ರಿಂದ 15 ನೇ ತಾರೀಖಿನ ನಡುವೆ ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಮತ್ತು ಹೆಚ್ಚುವರಿ ಬಹುಮಾನಗಳನ್ನು ಪಡೆಯಬಹುದು.
ಪ್ರತೀ ತಿಂಗಳು ನಾವು ಅಗತ್ಯವಾಗಿ ಪಾವತಿಸಬೇಕಾದ ಸೇವೆಗಳು ಹಲವಿದೆ. ಗ್ಯಾಸ್ ಬಿಲ್, ವಾಟರ್ ಬಿಲ್, ಮೊಬೈಲ್ ರೀಚಾರ್ಜ್ (Mobile Reacharg), ಡಿಟಿಎಚ್ ರೀಚಾರ್ಜ್, ವಿದ್ಯುತ್ ಬಿಲ್ ಹೀಗೆ ಅನೇಕ ಬಿಲ್ ಕಟ್ಟಬೇಕಾಗುತ್ತಿದೆ. ಇಂದು ಇವುಗಳನ್ನೆಲ್ಲ ಕೌಂಟರ್‌ಗೆ ಹೋಗಿ ಬಿಲ್ ಕಟ್ಟುವುದು ತೀರ ಕಡಿಮೆ. ಅನೇಕರು ಆನ್ಲೈನ್ ಮೂಲಕ ಬಿಲ್ ಪಾವತಿ (Online Bill Payment) ಮಾಡುತ್ತಾರೆ. ಇದಕ್ಕಾಗಿ ಅನೇಕ ಆ್ಯಪ್ಗಳು ಕೂಡ ಇದೆ. ಅಂತೆಯೆ ಜನರು ಇಂದು ವಿದ್ಯುತ್ ಬಿಲ್ ಪಾವತಿ ಮಾಡಲು ಫೋನ್ ಪೇ, ಗೂಗಲ್ ಪೇ, ಪೇಟಿಎಂ (Paytm) ನಂತರ ಅಪ್ಲೆಕೇಶನ್ಗಳನ್ನು ಉಪಯೋಗಿಸುತ್ತಾರೆ. ಹೀಗಿರುವಾಗ ವಿದ್ಯುತ್ ಬಿಲ್ ಕಟ್ಟುವವರಿಗೆ ಒನ್ 97 ಕಮ್ಯುನಿಕೇಷನ್ಸ್ ಲಿಮಿಟೆಡ್ ಒಡೆತನದಲ್ಲಿರುವ ಪೇಟಿಎಂ ಧಮಾಕ ಆಫರ್ ಒಂದನ್ನು ಪರಿಚಯಿಸಿದೆ.
ಬಳಕೆದಾರರು ಪ್ರತಿ ತಿಂಗಳ 10 ರಿಂದ 15 ನೇ ತಾರೀಖಿನ ನಡುವೆ ಪೇಟಿಎಂ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದರೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಮತ್ತು ಹೆಚ್ಚುವರಿ ಬಹುಮಾನಗಳನ್ನು ಪಡೆಯಬಹುದು. ಪ್ರತಿದಿನ ಬಿಜ್ಲೀ ಡೇಸ್ ಮೂಲಕ ವಿದ್ಯುತ್ ಬಿಲ್ ಪಾವತಿ ಮಾಡಿದ 50 ಬಳಕೆದಾರರಿಗೆ 100 ಪ್ರತಿಶತ ಕ್ಯಾಶ್‌ಬ್ಯಾಕ್ ಮತ್ತು 2,000 ರೂ. ಹೆಚ್ಚುವರಿಯಾಗಿ, ಬಳಕೆದಾರರಿಗೆ ಟಾಪ್ ಶಾಪಿಂಗ್ ಮತ್ತು ಟ್ರಾವೆಲ್ ಬ್ರ್ಯಾಂಡ್‌ಗಳಿಂದ ರಿಯಾಯಿತಿ ವೋಚರ್‌ಗಳನ್ನು ಪಡೆಯಬಹುದು. ಅಂತೆಯೆ ನೀವು ಮೊದಲ ಬಾರಿಗೆ ಪೇಟಿಎಂ ಆ್ಯಪ್ ಮೂಲಕ ವಿದ್ಯುತ್ ಬಿಲ್ ಕಟ್ಟುವವರಾಗಿದ್ದರೆ 200 ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದಕ್ಕಾಗಿ ನೀವು ‘ELECNEW200’ ಕೋಡ್ ಬಳಸಬೇಕು.
ಪೇಟಿಎಂನಲ್ಲಿ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?
- Paytm ಅಪ್ಲಿಕೇಶನ್ ಅಥವಾ ವೆಬ್ ಪುಟವನ್ನು ತೆರೆಯಿರಿ.
- ಮುಖಪುಟದಲ್ಲಿ, ‘ರೀಚಾರ್ಜ್‌ಗಳು ಮತ್ತು ಬಿಲ್ ಪಾವತಿಗಳು’ ಆಯ್ಕೆ ಮೇಲೆ ಟ್ಯಾಪ್ ಮಾಡಿ.
- ಇಲ್ಲಿ ‘ವಿದ್ಯುತ್’ ಬಿಲ್ ಆಯ್ಕೆಮಾಡಿ.
- ಬಳಿಕ ನಿಮ್ಮ ರಾಜ್ಯ ಮತ್ತು ವಿದ್ಯುತ್ ಮಂಡಳಿಯನ್ನು ಆಯ್ಕೆಮಾಡೇಕು.
- ನಿಮ್ಮ ಗ್ರಾಹಕ ಗುರುತಿನ ಸಂಖ್ಯೆಯನ್ನು ನಮೂದಿಸಿ
- ಮುಂದೆ ‘ಮುಂದುವರಿಯಿರಿ’ ಮೇಲೆ ಕ್ಲಿಕ್ ಮಾಡಬೇಕು.
- ಈಗ ನಿಮ್ಮ ಬಿಲ್ ಮತ್ತು ಮೊತ್ತವನ್ನು ನಿಮಗೆ ತೋರಿಸುತ್ತದೆ.
- ಬಿಲ್ ಪಾವತಿಸಲು, ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಆಯ್ಕೆಮಾಡಿ ಮತ್ತು ಪಾವತಿಯೊಂದಿಗೆ ಮುಂದುವರಿಯಿರಿ.
- ಈಗ ಪೇಟಿಎಂ ವ್ಯಾಲೆಟ್, ಯುಪಿಐ, ನೆಟ್ ಬ್ಯಾಂಕಿಂಗ್ ಮೂಲಕ ಬಿಲ್ ಪಾವತಿಸಬಹುದು.
ಫೋನ್ ಪೇ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:
- ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ.
- ‘ರೀಚಾರ್ಜ್ ಮತ್ತು ಪಾವತಿ ಬಿಲ್‌ಗಳು’ ವಿಭಾಗದ ಅಡಿಯಲ್ಲಿ ವಿದ್ಯುತ್’ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವಿದ್ಯುತ್ ಮಂಡಳಿಯನ್ನು ಆಯ್ಕೆ ಮಾಡಿ.
- ನಿಮ್ಮ ಬಿಲ್ ವಿವರಗಳನ್ನು ನಮೂದಿಸಿ.
- ನಿಮ್ಮ ಬಿಲ್ ಅನ್ನು UPI/ಡೆಬಿಟ್ ಕಾರ್ಡ್‌ಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಪಾವತಿಸಿ.
ಗೂಗಲ್ ಪೇ ಆ್ಯಪ್‌ನಲ್ಲಿ ವಿದ್ಯುತ್ ಬಿಲ್ ಪಾವತಿಸಲು ಈ ಕ್ರಮ ಅನುಸರಿಸಿ:
- ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಆ್ಯಪ್ ತೆರೆಯಿರಿ.
- ಪರದೆಯ ಕೆಳಭಾಗಕ್ಕೆ ಸ್ಕ್ರಾಲ್ ಮಾಡಿ, “+ ಹೊಸ ಪಾವತಿ” ಆಯ್ಕೆಯನ್ನು ಪತ್ತೆ ಮಾಡಿ ಮತ್ತು ಟ್ಯಾಪ್ ಮಾಡಿ.
- ಈಗ ಮುಂದಿನದರಲ್ಲಿ “ಬಿಲ್ ಪಾವತಿಗಳು” ಆಯ್ಕೆಯನ್ನು ಆರಿಸಿ.
- ವಿವಿಧ ಬಿಲ್ ಪಾವತಿ ಆಯ್ಕೆಗಳಿಂದ ‘ವಿದ್ಯುತ್’ ಟ್ಯಾಬ್ ಆಯ್ಕೆಮಾಡಿ ನಂತರ ನೀವು ಪಾವತಿ ಮಾಡಲು ಬಯಸುವ ಏಜೆನ್ಸಿಯನ್ನು ಆಯ್ಕೆ ಮಾಡಿ.
- ನೀವು ಬಯಸಿದ ಕಂಪನಿಯನ್ನು ಆಯ್ಕೆ ಮಾಡಿದ ನಂತರ, ಪಾವತಿ ಪ್ರಕ್ರಿಯೆಯನ್ನು ಮುಗಿಸಲು ನಿಮ್ಮ ಗ್ರಾಹಕ ಖಾತೆಯನ್ನು ನೀವು ಲಿಂಕ್ ಮಾಡಬೇಕಾಗುತ್ತದೆ.
- ನೀವು ಬಿಲ್ ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು UPI ಪಿನ್ ಬಳಸಿ ಬಿಲ್ ಪಾವತಿಸಿ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ