Aadhaar card: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೊಸ ಫೋಟೋ ಅಪ್ಡೇಟ್ ಮಾಡುವುದು ಹೇಗೆ?: ಇಲ್ಲಿದೆ ಸಿಂಪಲ್ ಟಿಪ್ಸ್

| Updated By: Vinay Bhat

Updated on: Oct 14, 2022 | 10:31 AM

Aadhaar Photo Change: ಆಧಾರ್ ಕಾರ್ಡ್​ ಬಂದು ಹತ್ತು ವರ್ಷಗಳೇ ಕಳೆದಿವೆ. ಕೆಲವರು ಅಗತ್ಯಕ್ಕೆ ಅನುಗುಣವಾಗಿ ಹೆಸರು, ವಿಳಾಸವನ್ನು ಆಧಾರ್​ನಲ್ಲಿ ಬದಲು ಮಾಡಿಕೊಂಡಿರುತ್ತಾರೆ. ಆದರೆ, ಫೋಟೋ ಮಾತ್ರ ಅದೇ ಹಳೆಯದೆ ಇರುತ್ತದೆ.

Aadhaar card: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೊಸ ಫೋಟೋ ಅಪ್ಡೇಟ್ ಮಾಡುವುದು ಹೇಗೆ?: ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us on

ದೇಶದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದುವುದು ಮುಖ್ಯ. ಇಲ್ಲವಾದಲ್ಲಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ತಮ್ಮ ಆಧಾರ್‌ ಕಾರ್ಡ್‌ಗಳನ್ನ ಪಡೆದುಕೊಳ್ಳುತ್ತಾರೆ. 2009ರಲ್ಲಿ ಭಾರತ ವಾಸಿಗಳ ಜಾಗತಿಕ ಗುರುತಿನ ಮನ್ನಣೆಗಾಗಿ ಪ್ರಾರಂಭಿಸಲಾದ ಆಧಾರ್ ಹಾಗೂ ಇದರಲ್ಲಿರುವ 12 ಅಂಕಿಗಳ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ. ಆಧಾರ್ ಕಾರ್ಡ್​ ಬಂದು ಹತ್ತು ವರ್ಷಗಳೇ ಕಳೆದಿವೆ. ಕೆಲವರು ಅಗತ್ಯಕ್ಕೆ ಅನುಗುಣವಾಗಿ ಹೆಸರು, ವಿಳಾಸವನ್ನು ಆಧಾರ್​ನಲ್ಲಿ ಬದಲು ಮಾಡಿಕೊಂಡಿರುತ್ತಾರೆ. ಆದರೆ, ಫೋಟೋ (Photo) ಮಾತ್ರ ಅದೇ ಹಳೆಯದೆ ಇರುತ್ತದೆ. ಹೀಗಿರುವಾಗ ಸುಲಭವಾಗಿ ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ಹಳೆಯ ಫೋಟೋವನ್ನು ತೆಗೆದು ಹೊಸ ಫೋಟೋವನ್ನು ಅಪ್ಡೇಟ್ (Update) ಮಾಡಬಹುದು.

ಸಣ್ಣವರಿದ್ದಾಗ ಮಾಡಿದ ಆಧಾರ್ ಕಾರ್ಡ್ ಈಗ ದೊಡ್ಡವರಾದ ಮೇಲೆ ನೋಡಿದಾಗ ಇದು ನಾನೆನಾ? ಎಂಬ ಪ್ರಶ್ನೆ ಮೂಡುತ್ತದೆ. ನಿಮ್ಮ ಫೋಟೋ ಚೆನ್ನಾಗಿಲ್ಲದಿದ್ದರೆ ಬೇಸರಗೊಳ್ಳಬೇಡಿ. ಏಕೆಂದರೆ ನೀವು ನಿಮ್ಮ ಫೋಟೋವನ್ನು ಕೆಲವು ಸರಳ ವಿಧಾನಗಳ ಮೂಲಕ ಬದಲಾಯಿಸಬಹುದು. ಆದರೆ, ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಹೊಸ ಫೋಟೋ ಅಪ್ಡೇಟ್ ಆಗಲು ಸುಮಾರು 90 ದಿನಗಳ ಕಾಲವಕಾಶ ಬೇಕಾಗುತ್ತದೆ. ಆಧಾರ್ ಕಾರ್ಡ್ ಬದಲಾವಣೆಗೆ ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕು. ಸಾಮಾನ್ಯ ನಾಗರಿಕರು ತಮ್ಮ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಮಾರ್ಪಡಿಸಲು ಅನುವು ಮಾಡಿಕೊಡಲು UIDAI ದೇಶದ 53 ನಗರಗಳಲ್ಲಿ 114 ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

ಆಧಾರ್​ನಲ್ಲಿ ಫೋಟೋ ಬದಲಾಯಿಸುವುದು ಹೇಗೆ?:

ಇದನ್ನೂ ಓದಿ
Moto G72: 108MP ಕ್ಯಾಮೆರಾದ ಹೊಚ್ಚ ಹೊಸ ಸ್ಮಾರ್ಟ್​ಫೋನ್ ಮಾರಾಟ ಆರಂಭ: ಈ ಆಫರ್ ಮಿಸ್ ಮಾಡ್ಬೇಡಿ
WhatsApp: ನಕಲಿ ವಾಟ್ಸ್​ಆ್ಯಪ್ ಬಗ್ಗೆ ಇರಲಿ ಎಚ್ಚರ!
ಸೊಳ್ಳೆಗಳ ಕಾಟವೇ? ಸೊಳ್ಳೆ ನಿರೋಧಕ ಉಂಗುರ ತಯಾರಿಸಿದ ಜರ್ಮನ್ ವಿಜ್ಞಾನಿ
Tech Tips: ಮನೆಯಲ್ಲಿ ವೈ-ಫೈ ವೇಗ ನಿಧಾನವಾಗಿದೆಯೇ?: ಈ ಟ್ರಿಕ್ ಮೂಲಕ ಹೈ ಸ್ಪೀಡ್ ಇಂಟರ್ನೆಟ್ ಪಡೆಯಿರಿ
  • ಸರ್ಕಾರದ ಅಧಿಕೃತ UIDAI ವೆಬ್​ಸೈಟ್​ ಓಪನ್ ಮಾಡಿ – uidai.gov.in
  • ವೆಬ್‌ಸೈಟ್​ನಲ್ಲಿರುವ ಆಧಾರ್ ನೋಂದಣಿ ಫಾರ್ಮ್ ಹುಡುಕಿ ಡೌನ್‌ಲೋಡ್ ಮಾಡಿಕೊಳ್ಳಿ.
  • ನಂತರ ಫಾರ್ಮ್‌ನಲ್ಲಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಫಾರ್ಮ್ ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ ಹತ್ತಿರದ ಆಧಾರ್ ಸೇವಾ ಕೇಂದ್ರದಲ್ಲಿ ಕೊಡಿ.
  • ಇಲ್ಲಿ ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ನಿಮ್ಮ ಎಲ್ಲ ವಿವರಗಳನ್ನು ಖಚಿತಪಡಿಸುತ್ತಾರೆ.
  • ನಂತರ ಆಧಾರ್ ಕಾರ್ಡ್‌ನಲ್ಲಿ ಹಾಕಲಾದ ಹೊಸ ಫೋಟೋವನ್ನು ಪರಿಶೀಲಿಸಲಾಗುತ್ತದೆ.
  • ಫೋಟೋ ಬದಲಾವಣೆ ಮಾಡಿದ್ದಕ್ಕಾಗಿ ಜಿಎಸ್​ಟಿ ಜೊತೆಗೆ 100 ರೂಪಾಯಿ ಕೊಡಬೇಕಾಗುತ್ತದೆ.
  • ಆಧಾರ್ ಕಾರ್ಯನಿರ್ವಾಹಕರು ನಿಮಗೆ ಸ್ವೀಕೃತಿ ಸ್ಲಿಪ್ ಮತ್ತು ಯುಆರ್ ನಂಬರ್ ನೀಡುತ್ತಾರೆ.

UIDAI ನ ಅಧಿಕೃತ ವೆಬ್‌ಸೈಟ್‌ನಲ್ಲಿ URN ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಆಧಾರ್ ಕಾರ್ಡ್‌ ಅನ್ನು ಟ್ರ್ಯಾಕ್ ಕೂಡ ಮಾಡಬಹುದು. ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಬದಲಾಯಿಸಲು ಸುಮಾರು 90 ದಿನಗಳನ್ನು ತೆಗೆದುಕೊಳ್ಳಬಹುದು. ಆಧಾರ್ ಸೇವಾ ಕೇಂದ್ರದ ಸಂಬಂಧಪಟ್ಟ ಅಧಿಕಾರಿ ಈ ಫೋಟೋವನ್ನು ಬದಲಾಯಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನೀವು ನವೀಕರಿಸಿದ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ.