Tech Tips: ಮನೆಯಲ್ಲಿ ವೈ-ಫೈ ವೇಗ ನಿಧಾನವಾಗಿದೆಯೇ?: ಈ ಟ್ರಿಕ್ ಮೂಲಕ ಹೈ ಸ್ಪೀಡ್ ಇಂಟರ್ನೆಟ್ ಪಡೆಯಿರಿ

Wi-Fi Speed Tricks: ಮನೆಗೆ ಹೈ ಸ್ಪೀಡ್ ಇಂಟರ್ನೆಟ್ ಕನೆಕ್ಷನ್ ಹಾಕಿಸಿಕೊಂಡಿದ್ದರೂ ಕೂಡ ಇಂಟರ್ನೆಟ್ ಸ್ಪೀಡ್ ನಿಂದ ನೀವು ಅಷ್ಟೇನು ತೃಪ್ತರಾಗಿಲ್ಲದೇ ಇರಬಹುದು. ಈ ರೀತಿ ಇಂಟರ್ನೆಟ್ ಸ್ಪೀಡ್ ಕಡಿಮೆ ಇರುವುದಕ್ಕೆ ಕೆಲವು ಪ್ರಮುಖ ಕಾರಣಗಳಿರಬಹುದು.

Tech Tips: ಮನೆಯಲ್ಲಿ ವೈ-ಫೈ ವೇಗ ನಿಧಾನವಾಗಿದೆಯೇ?: ಈ ಟ್ರಿಕ್ ಮೂಲಕ ಹೈ ಸ್ಪೀಡ್ ಇಂಟರ್ನೆಟ್ ಪಡೆಯಿರಿ
Wifi
Follow us
TV9 Web
| Updated By: Vinay Bhat

Updated on: Oct 13, 2022 | 2:03 PM

ದೇಶದಲ್ಲಿ ಕೋವಿಡ್ (Covid) ಬಿಸಿ ತಣ್ಣಗಾಗಿದ್ದರೂ ಬಹುತೇಕರು ಮನೆಯಲ್ಲಿಯೇ ಕುಳಿತು ತಮ್ಮ ಕಚೇರಿಯ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಮನೆಯಲ್ಲಿ ವೈ-ಫೈ ರೂಟರ್‌ಗಳನ್ನು (Wi-Fi Router) ಹಾಕಿಸಿಕೊಂಡು, ಡಾಂಗಲ್ ಮೂಲಕ ಅಥವಾ ಮೊಬೈಲ್​ನಿಂದಲೇ ಹಾಟ್​ಸ್ಪಾಟ್ ಕನೆಕ್ಟ್ ಮಾಡಿಕೊಂಡು ವರ್ಕ್ ಮಾಡುತ್ತಿದ್ದಾರೆ. ಈಗಂತೂ ವೈ-ಫೈ ಬಹುತೇಕರ ಮನೆಗೆ ಬೇಕಾದ ಅವಶ್ಯಕವಾದ ಗ್ಯಾಜೆಟ್ ಆಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಕೇವಲ ಆಫೀಸ್ ಕೆಲಸಕ್ಕೆ ಮಾತ್ರವಲ್ಲದೆ ಚಲನಚಿತ್ರ ನೋಡಲು, ಮಲ್ಟಿಪ್ಲೇಯರ್ ಆಟ ಆಡಲು ಹೀಗೆ ಎಲ್ಲದಕ್ಕೂ ವೈ-ಫೈ ಇರುವುದು ಮುಖ್ಯ. ವೈ-ಫೈ ಸಂಪರ್ಕ ಕಲ್ಪಿಸಲು ಮತ್ತೊಂದು ಪ್ರಮುಖ ಕಾರಣ ವೇಗದ ಇಂಟರ್ನೆಟ್‌ಗೆ (Internet) ಪೂರಕವಾಗಿರಬೇಕೆಂದು. ಆದರೆ ಕೆಲವೊಮ್ಮೆ ವೈ-ಫೈ ವೇಗ ಸ್ಲೋ ಆಗಿ ಬಿಡುತ್ತದೆ.

ಮನೆಗೆ ಹೈ ಸ್ಪೀಡ್ ಇಂಟರ್ನೆಟ್ ಕನೆಕ್ಷನ್ ಹಾಕಿಸಿಕೊಂಡಿದ್ದರೂ ಕೂಡ ಇಂಟರ್ನೆಟ್ ಸ್ಪೀಡ್ ನಿಂದ ನೀವು ಅಷ್ಟೇನು ತೃಪ್ತರಾಗಿಲ್ಲದೇ ಇರಬಹುದು. ಈ ರೀತಿ ಇಂಟರ್ನೆಟ್ ಸ್ಪೀಡ್ ಕಡಿಮೆ ಇರುವುದಕ್ಕೆ ಕೆಲವು ಪ್ರಮುಖ ಕಾರಣಗಳಿರಬಹುದು. ಆದರೆ ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ವೈಯರ್‌ಲೆಸ್‌ ಸಾಧನಗಳ ಬಳಕೆಗೆ ರೂಟರ್ ವೈಫೈ ಬೂಸ್ಟ್ ಹೆಚ್ಚಿಸಬಹುದು. ಆ ಬಗ್ಗೆ ತಿಳಿಯಲು ಮುಂದೆ ಓದಿರಿ.

ಕೋಣೆಯ ಮಧ್ಯಭಾಗದಲ್ಲಿ ಇರಿಸಿ: ವೈ-ಫೈ ರೌಟರ್ ಕೇವಲ ಒಂದು ದಿಕ್ಕಿನಲ್ಲಿ ಸಂಕೇತಗಳನ್ನು ಕಳುಹಿಸುವುದಿಲ್ಲ, ಅದು ಸುತ್ತಲೂ ಸಂಕೇತಗಳನ್ನು ರವಾನಿಸುತ್ತದೆ. ಆದ್ದರಿಂದ, ವೈ-ಫೈ ರೂಟರ್‌ನ ಸೂಕ್ತ ಸ್ಥಾನವು ಕೋಣೆಯ ಮಧ್ಯಭಾಗದಲ್ಲಿ ಇರಿಸುವುದಾಗಿದೆ. ನೀವು ವೈ-ಫೈ ರೂಟರ್ ಅನ್ನು ಯಾವುದೋ ಕೋಣೆಯ ಮೂಲೆಯಲ್ಲಿ ಇರಿಸಿದರೆ, ಗಮನಾರ್ಹ ಪ್ರಮಾಣದ ಕವರೇಜ್ ವ್ಯರ್ಥವಾಗುತ್ತದೆ. ಇದರಿಂದ ಮೊಬೈಲ್​ಗೆ ವೈಫೈ ಕನೆಕ್ಟ್ ಮಾಡಿದಾಗ ಸರಿಯಾಗಿ ಕೆಲಸ ಮಾಡುವುದಿಲ್ಲ.

ಇದನ್ನೂ ಓದಿ
Image
Google Pixel 7: ಇಂದಿನಿಂದ ಗೂಗಲ್ ಪಿಕ್ಸೆಲ್ 7 ಸರಣಿ ಖರೀದಿಗೆ ಲಭ್ಯ: ಮೊದಲ ಸೇಲ್​ನಲ್ಲಿ ಬಂಪರ್ ಆಫರ್
Image
Amazon Diwali sale: ಗ್ಯಾಲಕ್ಸಿ S22 5G ಸ್ಮಾರ್ಟ್​ಫೋನ್ ಖರೀದಿಗೆ ಮುಗಿಬಿದ್ದ ಜನರು: ಎಷ್ಟು ರೂ. ಡಿಸ್ಕೌಂಟ್ ಗೊತ್ತೇ?
Image
WhatsApp Tricks: ಐಫೋನ್, ಆಂಡ್ರಾಯ್ಡ್​ ಸ್ಮಾರ್ಟ್​​ಫೋನ್​​ನಲ್ಲಿ ವಾಟ್ಸ್​ಆ್ಯಪ್​​ ಕಾಲ್ ರೆಕಾರ್ಡ್​ ಹೇಗೆ?: ಇಲ್ಲಿದೆ ಟ್ರಿಕ್
Image
ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಫೇಸ್​ಬುಕ್ ಮಾತೃಸಂಸ್ಥೆ ಮೆಟಾವನ್ನೂ ಸೇರಿಸಿದ ರಷ್ಯಾ!

ರೂಟರ್‌ ಏಂಟಿನಾ ಬಳಕೆ ಉತ್ತಮ: ಹೌದು, ವೈಫೈ ರೊಟರ್‌ಗೆ ಆಂತರಿಕ ಏಂಟಿನಾ ಸೌಲಭ್ಯ ಇದ್ದರೆ. ಅದಕ್ಕೆ ಹೆಚ್ಚುವರಿ ಬಾಹ್ಯ ಏಂಟಿನಾ ವ್ಯವಸ್ಥೆ ಮಾಡಿಕೊಳ್ಳಿ ಇದರಿಂದ ಉತ್ತಮ ನೆಟವರ್ಕ್ ಸೌಲಭ್ಯಕ್ಕೆ ಅನುಕೂಲವಾಗಲಿದೆ. ಆಂತರಿಕ ಏಂಟಿನಾ ರೊಟರ್‌ಗಳು ಉತ್ತಮ ಸಿಗ್ನಲ್ ಕವರೇಜ್ ನೀಡುತ್ತವೆ. ಅದ್ಯಾಗೂ ವೇಗದ ಸಿಗ್ನಲ್‌ ಅಗತ್ಯ ಇದ್ದರೆ ಎಂಟನಾ ಅಳವಡಿಸಿಕೊಳ್ಳಿ.

ಇದರಿಂದ ದೂರವಿರಿಸಿ: ನಿಮ್ಮ ಮನೆಯಲ್ಲಿರುವ ವೈ-ಫೈ ಅನ್ನು ಟಿವಿ, ರೆಫ್ರಿಜರೇಟರ್ ಮತ್ತು ಇತರೆ ಉಪಕರಣಗಳಾದ ಬೇಬಿ ಮಾನಿಟರ್, ಬ್ಲೂಟೂತ್ ಹೆಡ್ ಸೆಟ್‌ಗಳಿಂದ ದೂರವಿರಿಸಿ. ಇವುಗಳನ್ನು ಹತ್ತಿರದಲ್ಲಿ ಇರಿಸುವುದರಿಂದ ಸಿಗ್ನಲ್‌ಗೆ ಅಡ್ಡಿಪಡಿಸಿದಂತಾಗುತ್ತದೆ. ಇದು ವೈ-ಫೈ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು.

ಪಾಸ್‌ವರ್ಡ್ ಕಾಯ್ದುಕೊಳ್ಳುವುದು: ವೈಫೈ ರೂಟರ್ ವೇಗ ಹೆಚ್ಚಿಸುವುದು ಬಳಕೆ ಮಾಡುವುದು ಒಂದೆಡೆಯಾದರೇ, ಅದರ ಪಾಸ್‌ವರ್ಡ್ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಯಾರೊಂದಿಗೂ ವೈ ಫೈ ರೂಟರ್ ಪಾಸ್‌ವರ್ಡ್ ಶೇರ್ ಮಾಡಬೇಡಿ. ಇದರ ಜೊತೆಗೆ ಸರಿಯಾಗಿ ಮತ್ತು ಹೆಚ್ಚು ನೆಟವರ್ಕ್ ಕವರೇಜ್ ಇರುವ ಸ್ಥಳದಲ್ಲಿ ವೈ-ಫೈ ರೂಟರ್ ಇದೆಯಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿರಿ. ಸರಿಯಾದ ಸಿಗ್ನಲ್ ಇರುವ ಸ್ಥಳ ಗುರುತುಮಾಡಿಕೊಳ್ಳಿ ಮತ್ತು ಸಿಗ್ನಲ್‌ಗಳಿಗೆ ಅಡೆತಡೆಗಳಿದ್ದರೆ ಸರಿ ಮಾಡಿ.

ಏರ್ ವೇವ್ ತಪ್ಪಿಸಿ: ಬಹುತೇಕ ಪ್ರತಿಯೊಂದು ವೈ-ಫೈ ರೂಟರ್ 2.4 ಗಿಗಾ ಹರ್ಟ್ಜ್ ವೈರ್‌ಲೆಸ್ ಬ್ಯಾಂಡ್ ಬಳಸುತ್ತದೆ ಮತ್ತು ಬ್ಲೂಟೂತ್ ಸ್ಪೀಕರ್‌ಗಳು ಹಾಗೂ ಬೇಬಿ ಮಾನಿಟರ್‌ಗಳಂತಹ ಇತರ ಸಾಮಾನ್ಯ ಸಾಧನಗಳು ಸಹ ಏರ್ ವೇವ್‌ಗಳನ್ನು ಬಳಸುತ್ತವೆ. ಸಾಧನಗಳು ನಿಮ್ಮ ರೂಟರ್‌ನ ಸಿಗ್ನಲ್‌ಗೆ ಅಡ್ಡಿಪಡಿಸಬಹುದು. ಆದ್ದರಿಂದ, ನೀವು ನಿಮ್ಮ ರೂಟರ್ ಅನ್ನು ಅಂತಹ ಯಾವುದೇ ಉಪಕರಣಗಳ ಬಳಿ ಇಡಬಾರದು.

ಇವೆಲ್ಲದರ ಜೊತೆಗೆ ವೈಫೈ ರೊಟರ್‌ಗಳ ವೇಗ ಹೆಚ್ಚಿಸಲು ಅಥವಾ ಸರಿಯಾಗಿ ಸಿಗ್ನಲ್ ಕವರೇಜ್ ಆಗುತ್ತಿಲ್ಲ ಎನ್ನುವುದಾದರೇ ರೂಟರ್ ಒಮ್ಮ ರೀ ಸ್ಟಾರ್ಟ್‌ ಮಾಡಿ. ರೀ ಸ್ಟಾರ್ಟ್‌ ಅಥವಾ ರೀ ಬೂಟ್ ಮಾಡುವುದರಿಂದ ರೂಟರ್ ಕಾರ್ಯವೈಖರಿ ಉತ್ತಮವಾಗಲಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ