Acer Aspire 3 15: ಜನಸಾಮಾನ್ಯರ ಬಳಕೆಗೆ ಸೂಕ್ತ ಏಸರ್ ಲ್ಯಾಪ್ಟಾಪ್
ಬಜೆಟ್ ದರಕ್ಕೆ ಉತ್ತಮ ಫೀಚರ್ ಇರುವ, ಆಕರ್ಷಕ ಮಾದರಿಯ ಎರಡು ಲ್ಯಾಪ್ಟಾಪ್ಗಳನ್ನು ಏಸರ್ ಬಿಡುಗಡೆ ಮಾಡಿದೆ. ಏಸರ್ ಅಸ್ಪೈರ್ ಸರಣಿಯಲ್ಲಿ ಬಿಡುಗಡೆಯಾಗಿರುವ ನೂತನ ಸರಣಿಯ ವಿಶೇಷತೆಗಳ ವಿವರ ಇಲ್ಲಿದೆ.
ಶಾಲಾ-ಕಾಲೇಜುಗಳ ಪರೀಕ್ಷೆಗಳು ಮುಗಿಯುತ್ತಿವೆ. ಮುಂದಿನ ಹೊಸ ಶೈಕ್ಷಣಿಕ ವರ್ಷದ ತಯಾರಿಯಲ್ಲಿ ಪಾಲಕರು ಮತ್ತು ವಿದ್ಯಾರ್ಥಿಗಳು ಇರುತ್ತಾರೆ. ಜತೆಗೆ, ಹೊಸ ಕಾಲೇಜು, ಬುಕ್ಸ್ ಜತೆಗೆ ಈಗ ಲ್ಯಾಪ್ಟಾಪ್ ಅಗತ್ಯವಾಗಿ ಬೇಕಾಗುತ್ತದೆ. ಆನ್ಲೈನ್ ಕ್ಲಾಸ್ ಮಾತ್ರವಲ್ಲದೆ, ವಿವಿಧ ರೀತಿಯ ಸ್ಕೂಲ್ ಪ್ರಾಜೆಕ್ಟ್, ಪರೀಕ್ಷಾ ತಯಾರಿ ಹಾಗೂ ಇಂಟರ್ನೆಟ್ ಬ್ರೌಸಿಂಗ್ ಜತೆಗೆ ವೈವಿಧ್ಯಮಯ ಕೆಲಸಗಳಿಗೆ ಲ್ಯಾಪ್ಟಾಪ್ ಅನಿವಾರ್ಯತೆ ಇರುತ್ತದೆ. ಅಂತಹವರಿಗಾಗಿ, ಬಜೆಟ್ ದರಕ್ಕೆ ಉತ್ತಮ ಫೀಚರ್ ಇರುವ, ಆಕರ್ಷಕ ಮಾದರಿಯ ಎರಡು ಲ್ಯಾಪ್ಟಾಪ್ಗಳನ್ನು ಏಸರ್ ಬಿಡುಗಡೆ ಮಾಡಿದೆ. ಏಸರ್ ಅಸ್ಪೈರ್ ಸರಣಿಯಲ್ಲಿ ಬಿಡುಗಡೆಯಾಗಿರುವ ನೂತನ ಸರಣಿಯ ವಿಶೇಷತೆಗಳ ವಿವರ ಇಲ್ಲಿದೆ. ಏಸರ್ ಅಸ್ಪೈರ್ ಸರಣಿಯಲ್ಲಿ ಬಿಡುಗಡೆಯಾಗಿರುವ Aspire 3 15 ಮತ್ತು Aspire 3 14 ಲ್ಯಾಪ್ಟಾಪ್, ಇಂಟೆಲ್ ಕೋರ್ i3-N305 CPU ಪ್ರೊಸೆಸರ್ ಬೆಂಬಲ ಮತ್ತು ಇಂಟೆಲ್ ಗ್ರಾಫಿಕ್ಸ್ ಬೆಂಬಲ ಹೊಂದಿದೆ. Aspire 3 ಸರಣಿ ಲ್ಯಾಪ್ಟಾಪ್ ಏಸರ್ Aspire 3 15 ಬೆಲೆ ₹39,999 ಇದ್ದು, ಆನ್ಲೈನ್ನಲ್ಲಿ ₹33,990ಕ್ಕೆ ಲಭ್ಯವಿದೆ. ಏಸರ್ Aspire 3 14 ಬೆಲೆ 512GB SSDಗೆ ₹37,990 ದರವಿದೆ. Aspire 3 15 8GB RAM ಮತ್ತು 256GB ಹಾಗೂ 512GB SSD ಆಯ್ಕೆ ಇದ್ದು, 40WHr ಲಿಥಿಯಂ ಆಯಾನ್ ಬ್ಯಾಟರಿ ಹಾಗೂ 45W AC ಅಡಾಪ್ಟರ್ ಹೊಂದಿದೆ. ಜತೆಗೆ Windows 11 ಕಾರ್ಯಾಚರಣೆ ವ್ಯವಸ್ಥೆ ಬಳಸುವ ಏಸರ್ ಅಸ್ಪೈರ್ ಲ್ಯಾಪ್ಟಾಪ್ನಲ್ಲಿ ಬ್ಲೂಲೈಟ್ ಶೀಲ್ಡ್ ಮೂಲಕ ಕಣ್ಣಿನ ರಕ್ಷಣೆಗೆ ಹೊಸ ವ್ಯವಸ್ಥೆ ಹೊಂದಿದೆ.