ಇತ್ತೀಚೆಗಷ್ಟೆ ಬೆಲೆ ಏರಿಕೆ ಘೋಷಣೆ ಮಾಡಿ ಬಳಕೆದಾರರಿಗೆ ದೊಡ್ಡ ಆಘಾತ ನೀಡಿದ್ದ ಭಾರ್ತಿ ಏರ್ಟೆಲ್ (Airtel) ಇದೀಗ ಬಂಪರ್ ಆಫರ್ ಒಂದನ್ನು ಪರಿಚಿಯಿಸಿದೆ. ಮೊನ್ನೆಯಷ್ಟೆ ಏರ್ಟೆಲ್ ನವೆಂಬರ್ 26 ರಿಂದ ತನ್ನ ಪ್ರಿಪೇಯ್ಡ್ ಪ್ಲಾನ್‌ಗಳ (Airtel Prepaid Plan) ದರ ಹೆಚ್ಚಳ ಮಾಡುವುದಾಗಿ ಹೇಳಿತ್ತು. ಅದರಂತೆ ಇಂದಿನಿಂದ ಹೊಸ ಬೆಲೆಗಳು ಅನ್ವಯ ಆಗಲಿವೆ. ಹೀಗಿರುವಾಗ ಏರ್ಟೆಲ್ನ ಪ್ರಿಪೇಯ್ಟ್ ಯೋಜನೆಗಳು ದರ ಏರಿಕೆ ಕಂಡ ಬೆನ್ನಲ್ಲೇ ಇದೀಗ ತನ್ನ ಗ್ರಾಹಕರಿಗೆ ಉಚಿತವಾಗಿ ಹೆಚ್ಚುವರಿ ಡೇಟಾ ನೀಡಲು ಮುಂದಾಗಿದೆ. ಹೌದು, ಏರ್ಟೆಲ್ ಪ್ರಿಪೇಯ್ಡ್ ಯೋಜನೆಗಳು ರೀಚಾರ್ಜ್ ಮಾಡುವ ಬಳಕೆದಾರರು ಪ್ರತಿದಿನ 500MB ಡೇಟಾವನ್ನು ಕಂಪನಿಯಿಂದ ಉಚಿತವಾಗಿ ಪಡೆಯಬಹುದು. ಆದರೆ, ಕಂಪನಿ ಇದಕ್ಕೊಂದು ಟ್ವಿಸ್ಟ್ ನೀಡಿದೆ. ಹಾಗಾದ್ರೆ ಆ ರಿಚಾರ್ಜ್ ಪ್ಲಾನ್ಗಳು (Airtel Data Plan) ಯಾವುವು ಏನದು ಟ್ವಿಸ್ಟ್ ಎಂಬುದನ್ನು ನೋಡೋಣ.
ಏರ್ಟೆಲ್ ತನ್ನ ನಾಲ್ಕು ಪ್ರಿಪೇಯ್ಡ್ ಯೋಜನೆಗಳ ಡೇಟಾ ಪ್ರಯೋಜನಗಳನ್ನು 500MB ಉಚಿತ ಡೇಟಾದೊಂದಿಗೆ ನವೀಕರಿಸಿದೆ. ಅಂದರೆ, ಏರ್ಟೆಲ್ನ ರೂ. 719, ರೂ. 299, ರೂ. 265 ಮತ್ತು ರೂ. 839 ಪ್ಲಾನ್‌ಗಳೊಂದಿಗೆ ರೀಚಾರ್ಜ್ ಮಾಡುವ ಬಳಕೆದಾರರು ಪ್ರತಿದಿನ 500MB ಡೇಟಾವನ್ನು ಕಂಪನಿಯಿಂದ ಉಚಿತವಾಗಿ ಪಡೆಯಲು ಸಾಧ್ಯವಾಗುತ್ತದೆ. ಆದರೆ, ಈ 500MB ಡೇಟಾ ಆಫರ್ ಅನ್ನು ಗ್ರಾಹಕರು ರಿಡೀಮ್ ಮಾಡಿಕೊಳ್ಳಬೇಕಿದೆ. ಅಂದರೆ ಈ ನಾಲ್ಕು ಯೋಜನೆಗಳಲ್ಲಿ ಒಂದು ಯೋಜನೆಯನ್ನು ರೀಚಾರ್ಜ್ ಮಾಡಿಕೊಂಡ ನಂತರ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಗ ಈ ಆ್ಯಪ್‌ನಲ್ಲಿ 500MB ಉಚಿತ ಡೇಟಾವನ್ನು ರಿಡೀಮ್ ಮಾಡಿಕೊಳ್ಳುವ ಅಯ್ಕೆ ಕಾಣಿಸಲಿದೆ. ಈ ಮೂಲಕ ಉಚಿತವಾಗಿ 500MB ಹೆಚ್ಚುವರಿ ದೈನಂದಿನ ಡೇಟಾವನ್ನು ಪಡೆಯಬಹುದಾಗಿದೆ.
ಏರ್ಟೆಲ್ನ ಜನಪ್ರಿಯ ಪ್ರಿಪೇಯ್ಡ್ ಪ್ಯಾನ್‌ಗಳಲ್ಲಿ 719 ರೂ. ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 1.5 GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಪ್ರತಿದಿನ 500GB ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.
ಇನ್ನು 299 ರೂ. ಪ್ಲಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 1.5 GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಪ್ರತಿದಿನ 500GB ಪ್ರಯೋಜನ ಲಭ್ಯವಾಗಲಿದೆ. ಜೊತೆಗೆ ಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.
839 ರೂಪಾಯಿಗಳ ಯೋಜನೆಯು ಬಳಕೆದಾರರಿಗೆ 2GB ದೈನಂದಿನ ಡೇಟಾವನ್ನು ನೀಡುತ್ತದೆ. ಜೊತೆಗೆ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಿಂದ 500MB ಹೆಚ್ಚುವರಿ ದೈನಂದಿನ ಡೇಟಾದೊಂದಿಗೆ, ಬಳಕೆದಾರರು ಒಟ್ಟು 2.5GB ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಇನ್ನು 265 ರೂ ಯೋಜನೆಯು 1GB ದೈನಂದಿನ ಡೇಟಾದೊಂದಿಗೆ ಲಭ್ಯವಿದೆ. ಜೊತೆಗ ಬೋನಸ್ 500MB ಡೇಟಾದೊಂದಿಗೆ ಪ್ರತಿದಿನ 1.5GB ದೈನಂದಿನ ಡೇಟಾದೊಂದಿಗೆ ಈ ಯೋಜನೆ ಲಭ್ಯವಿದೆ. ಈ ಎರಡೂ ಯೋಜನೆಗಳಲ್ಲಿಯೂ ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್‌ಗಳನ್ನು ಹೊಂದಿರುವುದನ್ನು ನಾವು ನೋಡಬಹುದು.
WhatsApp: ಕೆಲವೇ ದಿನಗಳಲ್ಲಿ ಬರುತ್ತಿದೆ ವಾಟ್ಸ್ಆ್ಯಪ್ ಹೊಸ ಅಪ್ಡೇಟ್: ನಿಮಗೆ ಸಿಗಲಿದೆ ಈ ಅಚ್ಚರಿಯ ಫೀಚರ್
(Airtel brings along benefits in the form of 500MB of additional data per day)