Black Friday Sale 2021: ಭಾರತದಲ್ಲಿ ಬ್ಲ್ಯಾಕ್ ಫ್ರೈಡೇ ಸೇಲ್: ಸ್ಮಾರ್ಟ್​ಫೋನ್, ಲ್ಯಾಪ್​​ಟಾಪ್ ಮೇಲೆ ಭರ್ಜರಿ ಡಿಸ್ಕೌಂಟ್

ಬ್ಲ್ಯಾಕ್ ಫ್ರೈಡೇ ಸೇಲ್ ಇದೀಗ ಭಾರತದಲ್ಲಿ ಶುರುವಾಗಿದೆ. ರಿಲಾಯನ್ಸ್ ಡಿಜಿಟಲ್​ನಲ್ಲಿ ಈ ಮೇಳೆ ನವೆಂಬರ್ 29ರ ವರೆಗೆ ಇದ್ದರೆ, ಶವೋಮಿ ನ. 30ಕ್ಕೊರಗೆ ಆಚರಿಸುತ್ತಿದೆ. ಹಾಗಾದ್ರೆ ಯಾವುದರ ಮೇಲೆ ಹೆಚ್ಚು ಆಫರ್​ಗಳಿವೆ ಎಂಬುದನ್ನು ನೋಡೋಣ.

Black Friday Sale 2021: ಭಾರತದಲ್ಲಿ ಬ್ಲ್ಯಾಕ್ ಫ್ರೈಡೇ ಸೇಲ್: ಸ್ಮಾರ್ಟ್​ಫೋನ್, ಲ್ಯಾಪ್​​ಟಾಪ್ ಮೇಲೆ ಭರ್ಜರಿ ಡಿಸ್ಕೌಂಟ್
Black Friday Sale 2021
Follow us
TV9 Web
| Updated By: Vinay Bhat

Updated on: Nov 26, 2021 | 12:46 PM

ಬ್ಲ್ಯಾಕ್ ಫ್ರೈಡೇ ಸೇಲ್ (Black Friday Sale) ಇದೀಗ ಭಾರತದಲ್ಲಿ ಶುರುವಾಗಿದೆ. ಅಮೆರಿಕಲ್ಲಿ ಆಚರಿಸುವ ಥ್ಯಾಂಕ್ಸ್ ಗಿವಿಂಗ್ ಡೇ ಬಳಿಕ, ಪ್ರತೀ ವರ್ಷ ಈ ಬ್ಲ್ಯಾಕ್ ಫ್ರೈಡೇ ಸೇಲ್ ಬರುತ್ತದೆ. ಹೀಗಾಗಿ, ಈ ಬಾರಿ ನವೆಂಬರ್ 26 ರಂದು ಈ ಸೇಲ್ ಪ್ರಾರಂಭಗೊಂಡಿದೆ. ಈ ಸೇಲ್​ನಲ್ಲಿ ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ವಿವಿಧ ರಿಯಾಯಿತಿಗಳನ್ನು ಘೋಷಿಸಿವೆ. ಶವೋಮಿ (Xiaomi), ರಿಲಾಯನ್ಸ್ (Reliance) ತನ್ನ ಬ್ಲ್ಯಾಕ್ ಫ್ರೈಡೇ ಮಾರಾಟದ ಭಾಗವಾಗಿ ಅನೇಕ ಉತ್ಪನ್ನಗಳಲ್ಲಿ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಘೋಷಿಸಿದೆ. ಶವೋಮಿ ತನ್ನ ರೆಡ್ಮಿ (Redmi) ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ನೀಡುತ್ತಿವೆ. ರಿಲಾಯನ್ಸ್ ಡಿಜಿಟಲ್​ನಲ್ಲಿ (Reliance Digital) ಈ ಮೇಳೆ ನವೆಂಬರ್ 29ರ ವರೆಗೆ ಇದ್ದರೆ, ಶವೋಮಿ ನ. 30ಕ್ಕೊರಗೆ ಆಚರಿಸುತ್ತಿದೆ. ಹಾಗಾದ್ರೆ ಯಾವುದರ ಮೇಲೆ ಹೆಚ್ಚು ಆಫರ್​ಗಳಿವೆ ಎಂಬುದನ್ನು ನೋಡೋಣ.

ರೆಡ್ಮಿ ಬುಕ್ 15 ಇ-ಲರ್ನಿಂಗ್ ಎಡವಿಷನ್ 11ನೇ ತಲೆಮಾರಿನ ಕೋರ್ i3 ಯಿಂಧ ಆವೃತ್ತವಾಗಿದೆ. ಇದರ ಬೆಲೆ ಕೇವಲ 37,999 ರೂ. ಆಗಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ದಾರರಿಗೆ ಮತ್ತಷ್ಟು ಆಫರ್ ನೀಡಲಾಗಿದ್ದು 2,500 ರೂ. ಡಿಸ್ಕೌಂಟ್​ನಲ್ಲಿ ಸಿಗಲಿದೆ. ಇದರ ಜೊತೆಗೆ ರೆಡ್ಮಿ ಬುಕ್ 15 ಪ್ರೊ ಕೂಡ ಕೇವಲ 47,999 ರೂ. ಗೆ ಸೇಲ್ ಕಾಣುತ್ತಿದೆ. ಎಂಐ ಟಿವಿ 4A 43 ಯ ಬೆಲೆ ಈಗ 26,999 ರೂ. ಇದರ ಜೊತೆಗೆ ಬ್ಯಾಕಿಂಗ್ ಆಫರ್ ಕೂಡ ಇದೆ. ಶವೋಮಿಯ ಬೆಸ್ಟ್ ಸ್ಮಾರ್ಟ್​ಫೋನ್​ಗಳಾದ ಎಂಐ 11 ಲೈಟ್ ಎನ್​ಇ 21,499 ರೂ. ಗೆ ಮಾರಾಟ ಆಗುತ್ತಿದೆ. ಎಂಐ 11 ಎಕ್ಸ್ 22,499 ರೂ. ಮತ್ತು ಎಂಐ 11 ಎಕ್ಸ್ ಪ್ರೋ 31,499 ರೂ. ಗೆ ಖರೀದಿಸಬಹುದು. ಇವುಗಳ ವಿಶೇಷತೆ ಏನು ಎಂಬುದನ್ನು ನೋಡೋಣ.

ಶವೋಮಿ ಎಂಐ 11 ಲೈಟ್ 5G NE ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇದಲ್ಲದೆ 20 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.

ಎಂಐ 11X ಪ್ರೊ ಸ್ಮಾರ್ಟ್‌ಫೋನ್‌ 6.67-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿವೆ. ಇದು ಸ್ನಾಪ್‌ಡ್ರಾಗನ್ 888SoC ಪ್ರೊಸೆಸರ್‌ ಹೊಂದಿದೆ. ಇದು 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಎಚ್‌ಎಂ 2 ಸೆನ್ಸಾರ್‌ ಹೊಂದಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ. ಜೊತೆಗೆ 4,520mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 33W ವೇಗದ ಚಾರ್ಜಿಂಗ್ ಮತ್ತು 2.5W ನಲ್ಲಿ ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

200MP Smartphone: ಮೋಟೋ ಕಂಪನಿಯಿಂದ ಹೊಸ ಪ್ರಯೋಗ: ಬರುತ್ತಿದೆ 200MP ಕ್ಯಾಮೆರಾದ ಸ್ಮಾರ್ಟ್​ಫೋನ್

(Black Friday Sale in India Best deals you can get on Xiaomi Reliance Digital smartphones smart TVs and more)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ