ಬೆಂಗಳೂರು (ಮಾ. 23): ಏರ್‌ಟೆಲ್ (Airtel) ದೇಶದ ಎರಡನೇ ಅತಿದೊಡ್ಡ ದೂರಸಂಪರ್ಕ ಕಂಪನಿಯಾಗಿದೆ. ಪ್ರಸ್ತುತ ಕಂಪನಿಯು ದೇಶಾದ್ಯಂತ ಸುಮಾರು 38 ಕೋಟಿ ಬಳಕೆದಾರರನ್ನು ಹೊಂದಿದೆ. ಸಂಪರ್ಕ ಮತ್ತು ನೆಟ್‌ವರ್ಕ್ ಬಗ್ಗೆ ಮಾತನಾಡುವಾಗಲೆಲ್ಲಾ ಏರ್‌ಟೆಲ್ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಏರ್‌ಟೆಲ್ ಕಾಲಕಾಲಕ್ಕೆ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗ ಐಪಿಎಲ್ 2025 ಪ್ರಾರಂಭವಾಗುವ ಹೊತ್ತಿಗೆ, ಏರ್‌ಟೆಲ್ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಯಾವುದು ಈ ಹೊಸ ಪ್ಲ್ಯಾನ್?, ಇದರಲ್ಲಿ ಏನೆಲ್ಲ ಪ್ರಯೋಜನ ಇದೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಕ್ರಿಕೆಟ್ ಪ್ರಿಯರ ಅನುಕೂಲಕ್ಕಾಗಿ, ಏರ್‌ಟೆಲ್ ಇತ್ತೀಚೆಗೆ ತನ್ನ ಪೋರ್ಟ್‌ಫೋಲಿಯೊಗೆ 100 ಮತ್ತು 195 ರೂ. ಗಳ ಎರಡು ಹೊಸ ಯೋಜನೆಗಳನ್ನು ಸೇರಿಸಿತ್ತು. ಈಗ ಕಂಪನಿಯು ಮತ್ತೊಂದು ಅಗ್ಗದ ಮತ್ತು ಕೈಗೆಟುಕುವ ಯೋಜನೆಯನ್ನು ತಂದಿದೆ. ಏರ್‌ಟೆಲ್ ಈಗ ತನ್ನ ಪಟ್ಟಿಗೆ 301 ರೂ. ಗಳ ಬೆಲೆಯ ಶಕ್ತಿಶಾಲಿ ಯೋಜನೆಯನ್ನು ಸೇರಿಸಿದೆ. ಈ ರೀಚಾರ್ಜ್ ಯೋಜನೆಯಲ್ಲಿ ನೀವು ಪಡೆಯುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಏರ್‌ಟೆಲ್‌ನ ಈ ರೀಚಾರ್ಜ್ ಯೋಜನೆಯು ಇತರ ಬಿಡುಗಡೆ ಮಾಡಿದ ಯೋಜನೆಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಕಂಪನಿಯು ಈ ಯೋಜನೆಯನ್ನು ಜಿಯೋ ಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ತಂದಿದೆ. ಇದರಲ್ಲಿ, OTT ಪ್ರವೇಶದ ಪ್ರಯೋಜನ ಮಾತ್ರವಲ್ಲದೆ, ಅನಿಯಮಿತ ಉಚಿತ ಕರೆ, ಡೇಟಾ ಮತ್ತು ಎಸ್ ಎಮ್ ಎಸ್ ನಂತಹ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ. ಏರ್‌ಟೆಲ್ 301 ರೂ. ವಿನ ಯೋಜನೆಯಲ್ಲಿ 28 ದಿನಗಳ ಮಾನ್ಯತೆಯನ್ನು ನೀಡುತ್ತಿದೆ.
Tech Tips: ಚಾರ್ಜ್ ಫುಲ್ ಮಾಡಿ ತೆಗೆದ ತಕ್ಷಣವೇ ಬ್ಯಾಟರಿ ಖಾಲಿಯಾಗುತ್ತದೆಯೇ?: ಈ ಸಲಹೆ ಅನುಸರಿಸಿ
ಈ ಯೋಜನೆಯಡಿಯಲ್ಲಿ ಏರ್‌ಟೆಲ್ ಬಳಕೆದಾರರು 28 ದಿನಗಳವರೆಗೆ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆ ಮಾಡಬಹುದು. ಇದರೊಂದಿಗೆ, ಗ್ರಾಹಕರಿಗೆ ಎಲ್ಲಾ ನೆಟ್‌ವರ್ಕ್‌ಗಳಿಗೆ ಪ್ರತಿದಿನ 100 ಉಚಿತ ಎಸ್ ಎಮ್ ಎಸ್ ಸಹ ನೀಡಲಾಗುತ್ತದೆ. ಈ ಮಾಸಿಕ ಪ್ರಿಪೇಯ್ಡ್ ಯೋಜನೆಯ ಡೇಟಾ ಪ್ರಯೋಜನಗಳ ಕುರಿತು ಹೇಳುವುದಾದರೆ, ಸಂಪೂರ್ಣ ಮಾನ್ಯತೆಯ ಅವಧಿಯಲ್ಲಿ ಒಟ್ಟು 28GB ಡೇಟಾವನ್ನು ನೀಡಲಾಗುತ್ತದೆ. ಅಂದರೆ ನೀವು ಪ್ರತಿದಿನ 1GB ಡೇಟಾವನ್ನು ಬಳಸಬಹುದು.
ನೀವು ಐಪಿಎಲ್ 2025 ರ ಪಂದ್ಯಗಳನ್ನು ಆನಂದಿಸಲು ಅಥವಾ ನಿಮ್ಮ ನೆಚ್ಚಿನ ತಂಡದ ಪಂದ್ಯವನ್ನು ಲೈವ್ ವೀಕ್ಷಿಸಲು ಬಯಸಿದರೆ, ಕಂಪನಿಯು ಈ ಸೌಲಭ್ಯವನ್ನು ಸಹ ಒದಗಿಸುತ್ತದೆ. ಇದರಲ್ಲಿ ಕಂಪನಿಯು ಜಿಯೋ ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ಸಹ ನೀಡುತ್ತದೆ. ಯೋಜನೆಯ ಮಾನ್ಯತೆ 28 ದಿನಗಳು ಆಗಿದ್ದರೂ, OTT ಚಂದಾದಾರಿಕೆ ಮೂರು ತಿಂಗಳವರೆಗೆ ಇರುತ್ತದೆ ಎಂಬಹುದು ಗಮನಿಸಬೇಕಾಗದ ಸಂಗತಿ.
ಜಿಯೋ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ 90 ದಿನಗಳ ಮಾನ್ಯತೆಯನ್ನು ನೀಡುತ್ತಿದೆ. ಇದು 899 ರೂಗಳಿಗೆ ಬರುತ್ತದೆ. ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ಮಾಡಬಹುದು. ಪ್ರತಿದಿನ 100 ಉಚಿತ SMS ಅನ್ನು ಸಹ ಪಡೆಯುತ್ತೀರಿ. ಒಟ್ಟು 180GB ಡೇಟಾವನ್ನು ನೀಡಲಾಗುತ್ತದೆ. ಅಂದರೆ ನೀವು ಪ್ರತಿದಿನ 2GB ಯಷ್ಟು ಹೆಚ್ಚಿನ ವೇಗದ ಡೇಟಾವನ್ನು ಬಳಸಬಹುದು. ಐಪಿಎಲ್ 2025 ರ ದೃಷ್ಟಿಯಿಂದ, ಉಚಿತ ಒಟಿಟಿ ಚಂದಾದಾರಿಕೆಯನ್ನು ಸಹ ನೀಡಿದೆ. ಜಿಯೋ ಹಾಟ್‌ಸ್ಟಾರ್‌ಗೆ 90 ದಿನಗಳವರೆಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ