Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಚಾರ್ಜ್ ಫುಲ್ ಮಾಡಿ ತೆಗೆದ ತಕ್ಷಣವೇ ಬ್ಯಾಟರಿ ಖಾಲಿಯಾಗುತ್ತದೆಯೇ?: ಈ ಸಲಹೆ ಅನುಸರಿಸಿ

ನಿಮ್ಮ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ ಅದರ ಬ್ಯಾಟರಿ ಬೇಗನೆ ಖಾಲಿಯಾದರೆ, ಅದಕ್ಕೆ ಹಲವು ಕಾರಣಗಳಿವೆ. ಫೋನ್‌ನ ಬ್ಯಾಟರಿ ಬೇಗ ಖಾಲಿಯಾಗಲು ಕಾರಣಗಳು ಮತ್ತು ಈ ಸಮಸ್ಯೆಯನ್ನು ಹೇಗೆ ತೊಡೆದುಹಾಕುವುದು ಮತ್ತು ಫೋನ್‌ನ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

Tech Tips: ಚಾರ್ಜ್ ಫುಲ್ ಮಾಡಿ ತೆಗೆದ ತಕ್ಷಣವೇ ಬ್ಯಾಟರಿ ಖಾಲಿಯಾಗುತ್ತದೆಯೇ?: ಈ ಸಲಹೆ ಅನುಸರಿಸಿ
Smartphone Battery
Follow us
Vinay Bhat
|

Updated on: Mar 23, 2025 | 11:18 AM

ಬೆಂಗಳೂರು (ಮಾ. 23): ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇಂದು ಇರುವ ಬಹುದೊಡ್ಡ ಕೆಲಸ ಎಂದರೆ ತಮ್ಮ ಸ್ಮಾರ್ಟ್​​ಫೋನ್‌ಗಳನ್ನು ಚಾರ್ಜ್ ಮಾಡುವುದು. ಏಕೆಂದರೆ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ದಿನನಿತ್ಯದ ಹೆಚ್ಚಿನ ಕೆಲಸಗಳು ಫೋನ್ ಮೂಲಕವೇ ನಡೆಯುವುದರಿಂದ ಸ್ವಲ್ಪ ಸಮಯದವರೆಗೆ ಅದನ್ನು ದೂರವಿಡುವುದು ತುಂಬಾ ಕಷ್ಟ. ಸಾಮಾನ್ಯವಾಗಿ ನೀವು ಸ್ಮಾರ್ಟ್‌ಫೋನ್ ಅನ್ನು ಚಾರ್ಜ್‌ಗೆ ಹಾಕಿದರೆ, ಫೋನ್ ಚಾರ್ಜ್ ಆಗುತ್ತದೆ, ಆದರೆ ಇದಾದ ಬಳಿಕ ಅನೇಕರು ಸಮಸ್ಯೆಯನ್ನು ಅನುಭವಿಸುತ್ತಾರೆ. ಅದೇನೆಂದರೆ ಫೋನ್ ಬೇಗನೆ ಡಿಸ್ಚಾರ್ಜ್ ಆಗುತ್ತದೆ. ಅಂದರೆ ಚಾರ್ಜ್ ಫುಲ್ ಆಗಿ ತೆಗೆದ ತಕ್ಷಣ ಚಾರ್ಜ್ ಖಾಲಿ ಯಾಗಲು ಶುರು ಮಾಡುತ್ತದೆ. ಈ ಸಮಸ್ಯೆ ನೀವು ಅನುಭವಿಸುತ್ತಿದ್ದರೆ, ಈ ಸುದ್ದಿ ಮಾತ್ರ. ಇದನ್ನು ನಿಭಾಯಿಸಲು ಕೆಲವು ಮಾರ್ಗಗಳನ್ನು ನಾವು ನಿಮಗೆ ಹೇಳುತ್ತೇವೆ.

ನಿಮ್ಮ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡಿದ ನಂತರ ಅದರ ಬ್ಯಾಟರಿ ಬೇಗನೆ ಖಾಲಿಯಾದರೆ, ಅದಕ್ಕೆ ಹಲವು ಕಾರಣಗಳಿವೆ. ಫೋನ್‌ನ ಬ್ಯಾಟರಿ ಬೇಗ ಖಾಲಿಯಾಗಲು ಕಾರಣಗಳು ಮತ್ತು ಈ ಸಮಸ್ಯೆಯನ್ನು ಹೇಗೆ ತೊಡೆದುಹಾಕುವುದು ಮತ್ತು ಫೋನ್‌ನ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

ಬ್ಯಾಟರಿ ಡಿಸ್ಚಾರ್ಜ್ ಆಗಲು ಇವು ಕಾರಣಗಳು:

ಹೊಸ ಫೋನ್ ಆದಾಗ, ಅದರ ಬ್ಯಾಟರಿ ಗಂಟೆಗಳ ಕಾಲ ಬಾಳಿಕೆ ಬರುತ್ತದೆ. ಆದರೆ ಅದು ಹಳೆಯದಾಗುತ್ತಿದ್ದಂತೆ. ಇದರ ಬ್ಯಾಟರಿ ಬೇಗನೆ ಡಿಸ್ಚಾರ್ಜ್ ಆಗಲು ಪ್ರಾರಂಭಿಸುತ್ತದೆ. ಇದರ ಹಿಂದಿನ ಒಂದು ಕಾರಣವೆಂದರೆ ಬ್ಯಾಟರಿ ಹಳೆಯದಾಗಿರುವುದು. ಇದರೊಂದಿಗೆ, ಕೆಲವು ಅಪ್ಲಿಕೇಶನ್‌ಗಳು ಫೋನ್‌ನ ಹಿನ್ನೆಲೆಯಲ್ಲಿ ಚಾಲನೆಯಲ್ಲಿರುತ್ತವೆ, ಇದರಿಂದಾಗಿ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಹೆಚ್ಚಿನ ಬ್ರೈಟ್​ನೆಸ್ ಮತ್ತು ನೋಟಿಫಿಕೇಷನ್ ಆನ್ ಆಗಿರುವುದರಿಂದ ಕೂಡ ಫೋನ್ ಬೇಗನೆ ಡಿಸ್ಚಾರ್ಜ್ ಆಗುತ್ತದೆ.

ಇದನ್ನೂ ಓದಿ
Image
ಒಂದಲ್ಲ-ಎರಡಲ್ಲ ಭಾರತದಲ್ಲಿ ಬರೋಬ್ಬರಿ 99 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್
Image
ಸ್ಮಾರ್ಟ್ ಟಿವಿಗೆ ಎಕ್ಸ್​ಪೈರಿ ಡೇಟ್ ಇದೆಯೇ?: ಅದನ್ನು ಯಾವಾಗ ಬದಲಾಯಿಸಬೇಕು?
Image
ಸಂಚಾರ್ ಸಾಥಿ ಪೋರ್ಟಲ್​ನಲ್ಲಿ 200 ಕದ್ದ ಮೊಬೈಲ್ ಫೋನ್‌ಗಳು ಪತ್ತೆ
Image
ಐಪಿಎಲ್ ಆರಂಭವನ್ನು ವಿಶೇಷ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್

WhatsApp Ban: ಒಂದಲ್ಲ.. ಎರಡಲ್ಲ..: ಭಾರತದಲ್ಲಿ ಬರೋಬ್ಬರಿ 99 ಲಕ್ಷ ವಾಟ್ಸ್ಆ್ಯಪ್ ಖಾತೆ ಬ್ಯಾನ್

ಈ ರೀತಿ ಮಾಡಿದರೆ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ:

  • ಫೋನ್ ಹಿನ್ನೆಲೆಯಲ್ಲಿ ತೆರೆದಿರುವ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿ.
  • ಅಗತ್ಯವಿಲ್ಲದಿದ್ದರೆ ಮೊಬೈಲ್ ಡೇಟಾವನ್ನು ಆನ್‌ ನಲ್ಲಿ ಇಡಬೇಡಿ.
  • ಅಲ್ಲದೆ, ಲೊಕೇಷನ್ ಸರ್ವಿಸ್ ಆಫ್ ಮಾಡಿ. ಇದು ಬ್ಯಾಟರಿಯನ್ನು ಉಳಿಸುತ್ತದೆ.
  • ಇದಲ್ಲದೆ, ಫೋನ್ ಬಳಸದೇ ಇರುವಾಗ ಡಿಸ್​ಪ್ಲೇ ಬ್ರೈಟ್​ನೆಸ್ ಕಡಿಮೆ ಇರಿಸಿ.
  • ನಿಮ್ಮ ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ನವೀಕರಿಸುತ್ತಿರಿ.
  • ನೀವು ವೈ-ಫೈ ನೆಟ್‌ವರ್ಕ್ ಅನ್ನು ಕಂಡುಕೊಂಡರೆ, ಮೊಬೈಲ್ ಡೇಟಾ ಬದಲಿಗೆ ಅದನ್ನು ಬಳಸಿ.

ಚಾರ್ಜಿಂಗ್ ವಿಷಯಕ್ಕೆ ಬಂದರೆ, ತಮ್ಮ ಫೋನ್​ನಲ್ಲಿ ಬ್ಯಾಟರಿ ಸ್ವಲ್ಪ ಖಾಲಿಯಾದ ತಕ್ಷಣ ಅದನ್ನು ಚಾರ್ಜಿಂಗ್‌ಗೆ ಹಾಕುವುದನ್ನು ನಾವು ನಮ್ಮ ಸುತ್ತಲೂ ನೋಡುತ್ತೇವೆ. ನಿಮಗೂ ಈ ಅಭ್ಯಾಸವಿದ್ದರೆ ನಿಮ್ಮ ಫೋನ್ ಬೇಗ ಕೆಟ್ಟು ಹೋಗಬಹುದು. ಫೋನಿನಲ್ಲಿ ಶೇ. 20 ಚಾರ್ಜ್ ಉಳಿದಿರುವಾಗ ಫೋನ್ ಚಾರ್ಜ್ ಮಾಡಬೇಕು ಮತ್ತು ಶೇ. 80 ಚಾರ್ಜ್ ಆದ ತಕ್ಷಣ ಹೊರತೆಗೆಯಬೇಕು. ಬ್ಯಾಟರಿಯನ್ನು ಸಂಪೂರ್ಣವಾಗಿ ಡಿಸ್ಚಾರ್ಜ್ ಮಾಡುವುದನ್ನು ತಪ್ಪಿಸಿ. ನೀವು 45-75 ನಿಯಮವನ್ನು ಸಹ ಅನುಸರಿಸಬಹುದು. ಅಂದರೆ, ಫೋನ್‌ನ ಬ್ಯಾಟರಿ ಶೇ. 45 ಅಥವಾ ಅದಕ್ಕಿಂತ ಕಡಿಮೆ ಇದ್ದಾಗ, ನೀವು ಚಾರ್ಜ್‌ ಹಾಕಬಹುದು ಮತ್ತು ಅದು ಶೇ. 75 ರಷ್ಟು ತಲುಪಿದಾಗ ಚಾರ್ಜಿಂಗ್ ಅನ್ನು ತೆಗೆದುಹಾಕಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ಹರಿಯಾಣದ ಸೋನಿಪತ್ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?