Airtel: ಏರ್ಟಲ್​ನಿಂದ ಹಾಟ್​ಸ್ಟಾರ್, ಅಮೆಜಾನ್ ಪ್ರೈಮ್ ಉಚಿತ ಚಂದಾದಾರಿಕೆ: ಈ ಆಫರ್ ಮಿಸ್ ಮಾಡ್ಬೇಡಿ

ಏರ್ಟೆಲ್ ಕೇವಲ ಡೇಟಾ, ಅನಿಯಮಿತ ಕರೆ ಮಾತ್ರವಲ್ಲದೆ ಓಟಿಟಿ ಪ್ರವೇಶಿಸಲು ಚಂದಾದಾರಿಕೆಯನ್ನು ಕೂಡ ನೀಡುತ್ತಿದೆ. ಡಿಸ್ನಿ+ ಹಾಟ್​​ಸ್ಟಾರ್, ಅಮೆಜಾನ್ ಪ್ರೈಮ್ ಸೇರಿದಂತೆ ಕೆಲ ಓಟಿಟಿ ಚಂದಾದಾರಿಕೆಯನ್ನು ತನ್ನ ಪ್ಲಾನ್​ನೊಂದಿಗೆ ಉಚಿತವಾಗಿ ನೀಡುತ್ತಿದೆ.

Airtel: ಏರ್ಟಲ್​ನಿಂದ ಹಾಟ್​ಸ್ಟಾರ್, ಅಮೆಜಾನ್ ಪ್ರೈಮ್ ಉಚಿತ ಚಂದಾದಾರಿಕೆ: ಈ ಆಫರ್ ಮಿಸ್ ಮಾಡ್ಬೇಡಿ
Amazon Airtel and Hot Star
Edited By:

Updated on: Sep 05, 2022 | 2:29 PM

ಟೆಲಿಕಾಂ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರ್ತಿ ಏರ್ಟೆಲ್ (Airtel) ಸಂಸ್ಥೆ 5G ಮೂಲಕ ಧೂಳೆಬ್ಬಿಸಲು ತಯಾರಾಗುತ್ತಿದೆ. ಇದರ ನಡುವೆ ತನ್ನ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ನೀಡುತ್ತಾ ಬರುತ್ತಿದ್ದು ಜಿಯೋವನ್ನು (JIO) ಹಿಂದಿಕ್ಕಿ ನಂಬರ್ ಒನ್ ಪಟ್ಟಕ್ಕೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಏರ್ಟೆಲ್ ಕೇವಲ ಡೇಟಾ, ಅನಿಯಮಿತ ಕರೆ ಮಾತ್ರವಲ್ಲದೆ ಓಟಿಟಿ ಪ್ರವೇಶಿಸಲು ಚಂದಾದಾರಿಕೆಯನ್ನು ಕೂಡ ನೀಡುತ್ತಿದೆ. ಡಿಸ್ನಿ+ ಹಾಟ್​​ಸ್ಟಾರ್, ಅಮೆಜಾನ್ ಪ್ರೈಮ್ (Amazon Prime) ಸೇರಿದಂತೆ ಕೆಲ ಓಟಿಟಿ ಚಂದಾದಾರಿಕೆಯನ್ನು ಏರ್ಟೆಲ್ ತನ್ನ ಪ್ಲಾನ್​ನೊಂದಿಗೆ ಉಚಿತವಾಗಿ ನೀಡುತ್ತಿದೆ. ಇದರಲ್ಲಿ ಪ್ರಿಪೇಯ್ಡ್​ಗಿಂತ ಪೋಸ್ಟ್​ಪೇಯ್ಡ್ ಯೋಜನೆ ಎಲ್ಲರ ಗಮನ ಸೆಳೆದಿದೆ.

499 ರೂ. ಯೋಜನೆ: ಏರ್ಟೆಲ್ ಪೋಸ್ಟ್​ಪೇಯ್ಡ್​ನ ಈ ಯೋಜನೆ ಒಂದು ತಿಂಗಳದ್ದಾಗಿದ್ದು ಒಟ್ಟು 75GB ಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯಿಸ್ ಕರೆ ಸೌಲಭ್ಯ ನೀಡಲಾಗಿದ್ದು, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಅಷ್ಟೇ ಅಲ್ಲದೆ 6 ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಮತ್ತು ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ.

999 ರೂ. ಯೋಜನೆ: ಏರ್ಟೆಲ್ ಪೋಸ್ಟ್​ಪೇಯ್ಡ್​ನ ಈ ಯೋಜನೆ ಒಂದು ತಿಂಗಳದ್ದಾಗಿದ್ದು ಒಟ್ಟು 100GB ಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯಿಸ್ ಕರೆ ಸೌಲಭ್ಯ ನೀಡಲಾಗಿದ್ದು, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಅಷ್ಟೇ ಅಲ್ಲದೆ 6 ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ ಮತ್ತು ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ.

ಇದನ್ನೂ ಓದಿ
Amazon: ಬೆಂಗಳೂರಿನಲ್ಲಿ ಅಮೆಜಾನ್​ನಿಂದ ಆಹಾರ ಮೇಳ: ಭರ್ಜರಿ ಆಫರ್ ಜೊತೆಗೆ ಶೇ.60ರಷ್ಟು ಡಿಸ್ಕೌಂಟ್
Tech Tips: ಲ್ಯಾಪ್​ಟಾಪ್ ಸ್ಲೋ ಆಗಿದೆಯೆ?: ಹಾಗಿದ್ರೆ ಈ ಟ್ರಿಕ್ ಉಪಯೋಗಿಸಿ ಸೂಪರ್ ಫಾಸ್ಟ್ ಮಾಡಿ
Realme C33: ಒಂದೇ ದಿನ ಬಾಕಿ: ಭಾರತಕ್ಕೆ ಅಪ್ಪಳಿಸುತ್ತಿದೆ ಭರ್ಜರಿ ಬ್ಯಾಟರಿ, ಕ್ಯಾಮೆರಾದ ಹೊಸ ರಿಯಲ್ ಮಿ ಸ್ಮಾರ್ಟ್​ಫೋನ್
Tech Tips: ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಸೆಂಡ್ ಮಾಡುವ ಟ್ರಿಕ್ ನಿಮಗೆ ಗೊತ್ತೇ?

1,199 ರೂ. ಯೋಜನೆ: ಏರ್ಟೆಲ್ ಪೋಸ್ಟ್​ಪೇಯ್ಡ್​ನ ಈ ಯೋಜನೆ ಒಂದು ತಿಂಗಳದ್ದಾಗಿದ್ದು ಒಟ್ಟು 150GB ಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯಿಸ್ ಕರೆ ಸೌಲಭ್ಯ ನೀಡಲಾಗಿದ್ದು, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಇದರಲ್ಲಿ ಮೂರು ಓಟಿಟಿಗೆ ಪ್ರವೇಶ ನೀಡಲಾಗಿದೆ. 6 ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆ ಮತ್ತು ನೆಟ್​ಫ್ಲಿಕ್ಸ್ ಒಂದು ತಿಂಗಳ ಉಚಿತ ಚಂದಾದಾರಿಕೆ ನೀಡುತ್ತದೆ.

1,599 ರೂ. ಯೋಜನೆ: ಏರ್ಟೆಲ್ ಪೋಸ್ಟ್​ಪೇಯ್ಡ್​ನ ಈ ಯೋಜನೆ ಒಂದು ತಿಂಗಳದ್ದಾಗಿದ್ದು ಒಟ್ಟು 250GB ಯೊಂದಿಗೆ ಬರುತ್ತದೆ. ಇದರಲ್ಲಿ ಅನಿಯಮಿತ ವಾಯಿಸ್ ಕರೆ ಸೌಲಭ್ಯ ನೀಡಲಾಗಿದ್ದು, ದಿನಕ್ಕೆ 100 ಎಸ್​ಎಮ್​ಎಸ್​ ಉಚಿತ ಕೂಡ ಇದೆ. ಇದರಲ್ಲಿ ಕೂಡ ಮೂರು ಓಟಿಟಿಗೆ ಪ್ರವೇಶ ನೀಡಲಾಗಿದೆ. 6 ತಿಂಗಳ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಒಂದು ವರ್ಷದ ಡಿಸ್ನಿ+ ಹಾಟ್​​ಸ್ಟಾರ್ ಚಂದಾದಾರಿಕೆ ಮತ್ತು ನೆಟ್​ಫ್ಲಿಕ್ಸ್ ಒಂದು ತಿಂಗಳ ಉಚಿತ ಚಂದಾದಾರಿಕೆ ನೀಡುತ್ತದೆ.

Published On - 2:29 pm, Mon, 5 September 22