AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon: ಆಕಸ್ಮಿಕವಾಗಿ ಮೂರು ಸ್ಮಾರ್ಟ್​ಫೋನ್​ಗಳ ಬೆಲೆ ಬಹಿರಂಗ ಪಡಿಸಿದ ಅಮೆಜಾನ್: ಗ್ರಾಹಕರಲ್ಲಿ ಅಚ್ಚರಿ

ಅಮೆಜಾನ್​ನಲ್ಲಿ ಜುಲೈ 15 ರಿಂದ ಪ್ರೈಮ್ ಡೇ ಸೇಲ್ ಶುರುವಾಗಲಿದೆ. ಇದರ ನಡುವೆ ಅಮೆಜಾನ್ ತಪ್ಪಿ ಈ ಮೂರು ಫೋನ್​ಗಳ ಬೆಲೆಯನ್ನು ಲೀಕ್ ಮಾಡಿದೆ ಎಂದು ಹೇಳಲಾಗಿದೆ. ಹಾಗಾದರೆ ರೇಜರ್ 40, ನಿಯೋ 7 ಪ್ರೊ ಮತ್ತು ನಾರ್ಜೊ 60 ಬೆಲೆ ಎಷ್ಟು ಎಂಬುದನ್ನು ನೋಡೋಣ. ಜುಲೈ 4 ರಂದು ಭಾರತದಲ್ಲಿ ಬಿಡುಗಡೆ ಆಗಲಿರುವ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ಫೋನ್​ನ ಆರಂಭಿಕ ಬೆಲೆ 33,999 ರೂ. ಎಂದು ತಿಳಿದುಬಂದಿದೆ.

Amazon: ಆಕಸ್ಮಿಕವಾಗಿ ಮೂರು ಸ್ಮಾರ್ಟ್​ಫೋನ್​ಗಳ ಬೆಲೆ ಬಹಿರಂಗ ಪಡಿಸಿದ ಅಮೆಜಾನ್: ಗ್ರಾಹಕರಲ್ಲಿ ಅಚ್ಚರಿ
Motorola Razr 40, iQOO Neo 7 Pro and Realme Narzo 60
Vinay Bhat
| Edited By: |

Updated on:Oct 09, 2026 | 2:36 PM

Share

ಮುಖ್ಯಾಂಶಗಳು

  • ಮೂರು ಸ್ಮಾರ್ಟ್​ಫೋನ್​ಗಳ ಬೆಲೆ ಬಹಿರಂಗ
  • ಅಮೆಜಾನ್ ಆಕಸ್ಮಿಕವಾಗಿ ಬೆಲೆ ಬಹಿರಂಗ ಪಡಿಸಿದೆ
  • ಜುಲೈ 15 ರಿಂದ ಪ್ರೈಮ್ ಡೇ ಸೇಲ್ ಶುರುವಾಗಲಿದೆ

ಭಾರತದಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರುವ ಕುತೂಹಲ ಕೆರಳಿಸಿರುವ ಮೂರು ಸ್ಮಾರ್ಟ್​ಫೋನ್​ಗಳ ಬೆಲೆಯನ್ನು ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ (Amazon) ಆಕಸ್ಮಿಕವಾಗಿ ಬಹಿರಂಗ ಪಡಿಸಿದೆ. ಇದೀಗ ಮೊಟೊರೊಲಾ ರೇಜರ್ 40 (Motorola Razr 40), ಐಕ್ಯೂ ನಿಯೋ 7 ಪ್ರೊ ಮತ್ತು ರಿಯಲ್ ಮಿ ನಾರ್ಜೊ 60 (Realme Narzo 60) ಸ್ಮಾರ್ಟ್​ಫೋನ್​ನ ಬೆಲೆ ಬಿಡುಗಡೆಗು ಮುನ್ನವೇ ಸೋರಿಕೆ ಆಗಿದೆ. ಅಮೆಜಾನ್​ನಲ್ಲಿ ಜುಲೈ 15 ರಿಂದ ಪ್ರೈಮ್ ಡೇ ಸೇಲ್ ಶುರುವಾಗಲಿದೆ. ಇದರ ನಡುವೆ ಅಮೆಜಾನ್ ತಪ್ಪಿ ಈ ಮೂರು ಫೋನ್​ಗಳ ಬೆಲೆಯನ್ನು ಲೀಕ್ ಮಾಡಿದೆ ಎಂದು ಹೇಳಲಾಗಿದೆ. ಹಾಗಾದರೆ ರೇಜರ್ 40, ನಿಯೋ 7 ಪ್ರೊ ಮತ್ತು ನಾರ್ಜೊ 60 ಬೆಲೆ ಎಷ್ಟು ಎಂಬುದನ್ನು ನೋಡೋಣ.

ಜುಲೈ 4 ರಂದು ಭಾರತದಲ್ಲಿ ಬಿಡುಗಡೆ ಆಗಲಿರುವ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್​ಫೋನ್​ನ ಆರಂಭಿಕ ಬೆಲೆ 33,999 ರೂ. ಎಂದು ತಿಳಿದುಬಂದಿದೆ. ಅಂತೆಯೆ ಜುಲೈ 6 ರಂದು ಅನಾವರಣಗೊಳ್ಳಲಿರುವ ರಿಯಲ್ ಮಿ ನಾರ್ಜೊ 60 ಫೋನ್ ಬಜೆಟ್ ಬೆಲೆಗೆ ಲಭ್ಯವಿದ್ದು ಇದರ ಆರಂಭಿಕ ದರ 17,999 ರೂ.. ಇನ್ನು ಜುಲೈ 3 ರಂದು ರಿಲೀಸ್ ಆಗಿರುವ ಮೊಟೊರೊಲಾ ಎಡ್ಜ್ 40 ರೇಜರ್ ಆರಂಭಿಕ ಬೆಲೆ 59,999 ರೂ. ಎಂದು ಅಮೆಜಾನ್ ತಿಳಿಸಿದೆ.

ಈ ಫೋನ್​ಗಳ ಫೀಚರ್ಸ್ ಕೂಡ ಸೋರಿಕೆ ಆಗಿದೆ. ಐಕ್ಯೂ ನಿಯೋ 7 ಪ್ರೊ 6.78 ಇಂಚಿನ FHD+ ಸ್ಯಾಮ್‌ಸಂಗ್‌ E5 ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್‌ 1 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿ ಜೊತೆಗೆ ಸ್ಯಾಮ್‌ಸಂಗ್‌ GN5 ಸೆನ್ಸರ್‌ ಆಯ್ಕೆಯ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ. 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAhಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದೆ ಎಂದು ಹೇಳಲಾಗುತ್ತಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಸಪೋರ್ಟ್ ಮಾಡಲಿದೆ.

ಇದನ್ನೂ ಓದಿ
Image
Realme GT 2: ರಿಯಲ್​ಮಿ ಫೋನ್ ಖರೀದಿಗೆ ಬೆಸ್ಟ್ ಆಫರ್ ನೀಡುತ್ತಿದೆ ಫ್ಲಿಪ್​ಕಾರ್ಟ್
Image
Samsung Galaxy S20 FE: ₹74,999 ಮೌಲ್ಯದ ಗ್ಯಾಲಕ್ಸಿ S20 FE ಫೋನ್ ₹27,959ಕ್ಕೆ ಮಾರಾಟ
Image
Taara: ಭಾರತದಲ್ಲಿ ಬೆಳಕಿನ ಕಿರಣ ಬಳಸಿ ಅತ್ಯಂತ ವೇಗದ, ಅಗ್ಗದ ಇಂಟರ್ನೆಟ್ ಸೌಲಭ್ಯ
Image
WhatsApp Storage: ವಾಟ್ಸ್​ಆ್ಯಪ್ ಸ್ಟೋರೇಜ್ ಫುಲ್ ಆದರೆ ಏನು ಮಾಡ್ಬೇಕು ಗೊತ್ತಾ?

ಮತ್ತೊಂದೆಡೆ ಮೊಟೊರೊಲಾ ಎಡ್ಜ್ 40 ರೇಜರ್ ಜೊತೆಗೆ ರೇಜರ್ 40 ಆಲ್ಟ್ರಾ ಅನ್ನು ಕೂಡ ಬಿಡುಗಡೆ ಮಾಡುತ್ತಿದೆ. ಮೊಟೊರೊಲಾ ಈಗಾಗಲೇ ಎರಡು ಫೋನ್‌ಗಳ ಸಂಪೂರ್ಣ ವಿಶೇಷತೆಗಳನ್ನು ಬಹಿರಂಗಪಡಿಸಿದೆ. ಎರಡು ಫೋನ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಕವರ್ ಡಿಸ್ ಪ್ಲೇಯ ಗಾತ್ರ. ಎಡ್ಜ್ 40 ರೇಜರ್ ಸಾಮಾನ್ಯ ಮಾದರಿಯು ಸ್ನಾಪ್‌ಡ್ರಾಗನ್ 7 Gen 1 ನೊಂದಿಗೆ ಬರುತ್ತದೆ, ಆದರೆ 40 ಆಲ್ಟ್ರಾದಲ್ಲಿ ಸ್ನಾಪ್​ಡ್ರಾಗನ್ 8+ Gen 1 SoC ನೀಡಲಾಗಿದೆ. ಎರಡೂ ಫೋನ್‌ಗಳು 6.9-ಇಂಚಿನ ಡಿಸ್ ಪ್ಲೇ ಹೊಂದಿದೆ.

ರಿಯಲ್ ಮಿ ನಾರ್ಜೊ 60 5G ಸ್ಮಾರ್ಟ್​ಫೋನ್​ 6.43-ಇಂಚಿನ ಪೂರ್ಣ HD + AMOLED ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಚಿಪ್‌ಸೆಟ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಜೊತೆಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಬಹುದು. 33W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:37 am, Thu, 29 June 23

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ