ಭಾರತದಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರುವ ಕುತೂಹಲ ಕೆರಳಿಸಿರುವ ಮೂರು ಸ್ಮಾರ್ಟ್ಫೋನ್ಗಳ ಬೆಲೆಯನ್ನು ಪ್ರಸಿದ್ಧ ಇ ಕಾಮರ್ಸ್ ತಾಣ ಅಮೆಜಾನ್ (Amazon) ಆಕಸ್ಮಿಕವಾಗಿ ಬಹಿರಂಗ ಪಡಿಸಿದೆ. ಇದೀಗ ಮೊಟೊರೊಲಾ ರೇಜರ್ 40 (Motorola Razr 40), ಐಕ್ಯೂ ನಿಯೋ 7 ಪ್ರೊ ಮತ್ತು ರಿಯಲ್ ಮಿ ನಾರ್ಜೊ 60 (Realme Narzo 60) ಸ್ಮಾರ್ಟ್ಫೋನ್ನ ಬೆಲೆ ಬಿಡುಗಡೆಗು ಮುನ್ನವೇ ಸೋರಿಕೆ ಆಗಿದೆ. ಅಮೆಜಾನ್ನಲ್ಲಿ ಜುಲೈ 15 ರಿಂದ ಪ್ರೈಮ್ ಡೇ ಸೇಲ್ ಶುರುವಾಗಲಿದೆ. ಇದರ ನಡುವೆ ಅಮೆಜಾನ್ ತಪ್ಪಿ ಈ ಮೂರು ಫೋನ್‌ಗಳ ಬೆಲೆಯನ್ನು ಲೀಕ್ ಮಾಡಿದೆ ಎಂದು ಹೇಳಲಾಗಿದೆ. ಹಾಗಾದರೆ ರೇಜರ್ 40, ನಿಯೋ 7 ಪ್ರೊ ಮತ್ತು ನಾರ್ಜೊ 60 ಬೆಲೆ ಎಷ್ಟು ಎಂಬುದನ್ನು ನೋಡೋಣ.
ಜುಲೈ 4 ರಂದು ಭಾರತದಲ್ಲಿ ಬಿಡುಗಡೆ ಆಗಲಿರುವ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್ಫೋನ್ನ ಆರಂಭಿಕ ಬೆಲೆ 33,999 ರೂ. ಎಂದು ತಿಳಿದುಬಂದಿದೆ. ಅಂತೆಯೆ ಜುಲೈ 6 ರಂದು ಅನಾವರಣಗೊಳ್ಳಲಿರುವ ರಿಯಲ್ ಮಿ ನಾರ್ಜೊ 60 ಫೋನ್ ಬಜೆಟ್ ಬೆಲೆಗೆ ಲಭ್ಯವಿದ್ದು ಇದರ ಆರಂಭಿಕ ದರ 17,999 ರೂ.. ಇನ್ನು ಜುಲೈ 3 ರಂದು ರಿಲೀಸ್ ಆಗಿರುವ ಮೊಟೊರೊಲಾ ಎಡ್ಜ್ 40 ರೇಜರ್ ಆರಂಭಿಕ ಬೆಲೆ 59,999 ರೂ. ಎಂದು ಅಮೆಜಾನ್ ತಿಳಿಸಿದೆ.
Unihertz Jelly Star: ಚೀನಾದಿಂದ ವಿಶ್ವದ ಅತ್ಯಂತ ಚಿಕ್ಕ ಸ್ಮಾರ್ಟ್‌ಫೋನ್ ಜೆಲ್ಲಿ ಸ್ಟಾರ್ ಬಿಡುಗಡೆ
ಈ ಫೋನ್‌ಗಳ ಫೀಚರ್ಸ್ ಕೂಡ ಸೋರಿಕೆ ಆಗಿದೆ. ಐಕ್ಯೂ ನಿಯೋ 7 ಪ್ರೊ 6.78 ಇಂಚಿನ FHD+ ಸ್ಯಾಮ್‌ಸಂಗ್ E5 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜೆನ್ 1 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಟೆಕ್ನಾಲಜಿ ಜೊತೆಗೆ ಸ್ಯಾಮ್‌ಸಂಗ್ GN5 ಸೆನ್ಸರ್ ಆಯ್ಕೆಯ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ. 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAhಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದೆ ಎಂದು ಹೇಳಲಾಗುತ್ತಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಸಪೋರ್ಟ್ ಮಾಡಲಿದೆ.
ಮತ್ತೊಂದೆಡೆ ಮೊಟೊರೊಲಾ ಎಡ್ಜ್ 40 ರೇಜರ್ ಜೊತೆಗೆ ರೇಜರ್ 40 ಆಲ್ಟ್ರಾ ಅನ್ನು ಕೂಡ ಬಿಡುಗಡೆ ಮಾಡುತ್ತಿದೆ. ಮೊಟೊರೊಲಾ ಈಗಾಗಲೇ ಎರಡು ಫೋನ್‌ಗಳ ಸಂಪೂರ್ಣ ವಿಶೇಷತೆಗಳನ್ನು ಬಹಿರಂಗಪಡಿಸಿದೆ. ಎರಡು ಫೋನ್‌ಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಕವರ್ ಡಿಸ್ ಪ್ಲೇಯ ಗಾತ್ರ. ಎಡ್ಜ್ 40 ರೇಜರ್ ಸಾಮಾನ್ಯ ಮಾದರಿಯು ಸ್ನಾಪ್‌ಡ್ರಾಗನ್ 7 Gen 1 ನೊಂದಿಗೆ ಬರುತ್ತದೆ, ಆದರೆ 40 ಆಲ್ಟ್ರಾದಲ್ಲಿ ಸ್ನಾಪ್‌ಡ್ರಾಗನ್ 8+ Gen 1 SoC ನೀಡಲಾಗಿದೆ. ಎರಡೂ ಫೋನ್‌ಗಳು 6.9-ಇಂಚಿನ ಡಿಸ್ ಪ್ಲೇ ಹೊಂದಿದೆ.
ರಿಯಲ್ ಮಿ ನಾರ್ಜೊ 60 5G ಸ್ಮಾರ್ಟ್‌ಫೋನ್ 6.43-ಇಂಚಿನ ಪೂರ್ಣ HD + AMOLED ಡಿಸ್ ಪ್ಲೇಯೊಂದಿಗೆ ಬರುತ್ತದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ 2-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್ ಜೊತೆಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಬಹುದು. 33W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ