
ನೀವು ಉತ್ತಮ ಕ್ಯಾಮೆರಾ, ಅತ್ಯುತ್ತಮ ಪರ್ಫಾರ್ಮೆನ್ಸ್, ಭರ್ಜರಿ ಬ್ಯಾಟರಿ ಒಳಗೊಂಡ ಸ್ಮಾರ್ಟ್ಫೋನ್ ಖರೀದಿಸಬೇಕು ಎಂದಿದ್ದರೆ ಹೊಸ ಮೊಬೈಲ್ ಅನ್ನೇ ನೋಡಬೇಕಾಗಿಲ್ಲ. ಯಾಕಂದ್ರೆ ಪ್ರಸಿದ್ಧ ಇ ಕಾರ್ಮಸ್ ತಾಣವಾದ ಅಮೆಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival sale) ನಡೆಯುತ್ತಿದ್ದು ಬಂಪರ್ ಆಫರ್ನೊಂದಿಗೆ ಮೊಬೈಲ್ಗಳು ಮಾರಾಟವಾಗುತ್ತಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 20 ಸ್ಮಾರ್ಟ್ಫೋನ್ ಮೇಲೆ 41,010 ರೂ. ಡಿಸ್ಕೌಂಟ್ ಮಾಡಲಾಗಿದ್ದು, ಕೇವಲ 44,990 ರೂ. ಗೆ ಮಾರಾಟವಾಗುತ್ತಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 38,009 ರೂ. ರಿಯಾಯಿತಿ ಘೋಷಿಸಲಾಗಿದೆ. ಇದು ಈಗ ಕೇವಲ 36,990 ರೂ. ಗೆ ಖರೀದಿಗೆ ಸಿಗುತ್ತಿದೆ.

ಒನ್ಪ್ಲಸ್ 8ಟಿ ಫೋನ್ ಮೇಲೂ 4000 ರೂ. ಡಿಸ್ಕೌಂಟ್ ನೀಡಲಾಗಿದೆ. ಇದನ್ನು ನೀವು 38,999 ರೂ. ಗೆ ಖರೀದಿಸಬಹುದು.

ಆ್ಯಪಲ್ ಪ್ರಿಯರಿಗಾಗಿ ಐಫೋನ್ 11 ಮೇಲೆ 9,901 ರೂ. ರಿಯಾಯಿತಿ ಘೋಷಿಸಲಾಗಿದೆ. ಇದು ಈಗ ಕೇವಲ 39,999 ರೂ. ಗೆ ಮಾರಾಟವಾಗುತ್ತಿದೆ.

ವಿವೋ ಎಕ್ಸ್ 60 ಪ್ರೊ ಸ್ಮಾರ್ಟ್ಫೋನ್ ಕೂಡ ಕೇವಲ 48,990 ರೂ. ಗೆ ಮಾರಾಟ ಕಾಣುತ್ತಿದೆ. ಇದರ ಮೇಲೆ 6000 ರೂ. ಡಿಸ್ಕೌಂಟ್ ನೀಡಲಾಗಿದೆ.

ಶವೋಮಿ ಕಂಪನಿಯ ಎಂಐ 10ಟಿ ಪ್ರೊ ಸ್ಮಾರ್ಟ್ಫೋನ್ ನಿಮ್ಮ ಕೈಗೆ 36,999 ರೂ. ಗೆ ಸಿಗಲಿದ. ಇದರ ಮೇಲೆ 11,000 ರೂ. ರಿಯಾಯಿತಿ ನೀಡಲಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್51 ಮೇಲೆ 9,000 ರೂ. ಡಿಸ್ಕೌಂಟ್ ಘೋಷಿಸಲಾಗಿದೆ. ಈ ಸ್ಮಾರ್ಟ್ಫೋನ್ ಈಗ 19,999 ರೂ. ಗೆ ಲಭ್ಯವಾಗುತ್ತಿದೆ.

ರೆಡ್ಮಿ ನೋಟ್ 9 ಪ್ರೊ ಸ್ಮಾರ್ಟ್ಫೋನ್ ಮೇಲು 900 ರೂ. ಡಿಸ್ಕೌಂಟ್ ನೀಡಲಾಗಿದ್ದು, ಇದು ಈಗ 15,900 ರೂ. ಗೆ ಖರೀದಿಸಬಹುದು.