ಆನ್ಲೈನ್ ಇ ಕಾಮರ್ಸ್ ತಾಣಗಳನ್ನು ಹೆಚ್ಚಾಗಿ ಬಳಸುವ ಬಳಕೆದಾರರಿಗೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಫ್ಲಿಪ್ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇ ಸೇಲ್ ಆಯೋಜನೆ ಮಾಡುವ ಬಗ್ಗೆ ತಿಳಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್ (Amazon) ಕೂಡ ತನ್ನ ವಾರ್ಷಿಕ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival sale) ಆರಂಭಿಸುವುದಾಗಿ ಘೋಷಿಸಿದೆ. ಈ ಸೇಲ್ ಇದೇ ಸೆಪ್ಟೆಂಬರ್ 23 ರಿಂದ ಲೈವ್ ಆಗಲಿದೆ ಎಂದು ಅಮೆಜಾನ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಧಿಕೃತವಾಗಿ ದೃಢಪಡಿಸಿದೆ. ಇದರಲ್ಲಿ ಐಫೋನ್ 13 (iPhone 13) ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಆಗಲಿದೆಯಂತೆ.
ಇತ್ತೀಚೆಗಷ್ಟೆ ಐಫೋನ್ ಹೊಸ ಆವೃತ್ತಿ ಐಫೋನ್ 14 ಅನಾವರಣಗೊಂಡಿತ್ತು. ಹೀಗಾಗಿ ಐಫೋನ್ 13 ಬ್ಯಾಂಕ್ ಆಫರ್ಗಳನ್ನು ಪಡೆದುಕೊಂಡು ಕೇವಲ 54,000 ರೂ. ಗೆ ಖರೀದಿಗೆ ಸಿಗಲಿದೆಯಂತೆ. ಇನ್ನು ಈ ಸೇಲ್‌ನಲ್ಲಿ ಹಲವು ಗ್ಯಾಜೆಟ್ಸ್‌ಗಳು, ಸ್ಮಾರ್ಟ್ ಡಿವೈಸ್‌ಗಳ ಮೇಲೆ ಹೆಚ್ಚಿನ ಡಿಸ್ಕೌಂಟ್ ದೊರೆಯಲಿದೆ. ಕ್ಯಾಶ್‌ಬ್ಯಾಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳು, ನೋ ಕಾಸ್ಟ್ ಇಎಂಐ ಆಫರ್‌ಗಳು ಸೇರಿದಂತೆ ಹಲವು ರೀತಿಯಲ್ಲಿ ರಿಯಾಯಿತಿ ಪಡೆಯಬಹುದು.
ಇನ್ನು ಈ ಬಾರಿಯ ಸೇಲ್‌ನಲ್ಲಿ ಎಸ್‌ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಅಮೆಜಾನ್‌ನಲ್ಲಿ ಮೊದಲ ಬಾರಿಗೆ ಶಾಪಿಂಗ್ ಮಾಡುವವರು 10% ಪ್ಲಾಟ್ ಕ್ಯಾಶ್‌ಬ್ಯಾಕ್ ಆಫರ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ. ಪ್ರತಿಬಾರಿಯಂತೆ ಈ ಬಾರಿ ಕೂಡ ಪ್ರೈಮ್ ಸದಸ್ಯರಿಗೆ ಆರಂಭಿಕ ಪ್ರವೇಶ ಕೂಡ ದೊರೆಯಲಿದೆ.
ಇದೇ ಸಮಯದಲ್ಲಿ ಶೀಯೋಮಿ ರೆಡ್ಮಿ 11 ಪ್ರೈಮ್ 5G ಮತ್ತು ಐಕ್ಯೂ Z6 ಲೈಟ್ 5G ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ ಎಂದು ಕೂಡ ಹೇಳಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಅಮೆಜಾನ್ ಎಸ್‌ಬಿಐ ಬ್ಯಾಂಕ್ ಕಾರ್ಡ್‌ಗಳು ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೇಲೆ ಕಾರ್ಡ್ ರಿಯಾಯಿತಿಗಳನ್ನು ನೀಡಲಿದೆ. SBI ಕಾರ್ಡ್ ಹೊಂದಿರುವವರು 10% ತ್ವರಿತ ರಿಯಾಯಿತಿಯನ್ನು ಪಡೆಯುವುದಕ್ಕೆ ಅವಕಾಶ ಸಿಗಲಿದೆ. ಅಲ್ಲದೆ ಅಮೆಜಾನ್ ಪೇ ICICI ಬ್ಯಾಂಕ್ ಕ್ಯಾಶ್‌ಬ್ಯಾಕ್ ಕೂಡ ದೊರೆಯಲಿದೆ.
ಇನ್ನು ಈ ಸೇಲ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ ಎಂದು ಹೇಳಲಾಗಿದೆ. ಲಾಂಚ್ ಆಫರ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿಸುವುದಕ್ಕೆ ನಿಮಗೆ ಅವಕಾಶ ಸಿಗಲಿದೆ. ಹಾಗೆಯೇ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಉತ್ತಮ ರಿಯಾಯಿತಿ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.
ಪ್ರಸಿದ್ಧ ಐಕ್ಯೂ, ಒನ್‌ಪ್ಲಸ್, ಶವೋಮಿ ಮತ್ತು ರಿಯಲ್ ಮಿ ಬ್ರ್ಯಾಂಡ್‌ಗಳ ಫೋನ್‌ಗಳು ಭರ್ಜರಿ ಡಿಸ್ಕೌಂಟ್ನಲ್ಲಿ ಖರೀದಿಗೆ ಸಿಗಲಿದೆಯಂತೆ. ಇದಲ್ಲದೆ ಹೆಚ್ಚುವರಿಯಾಗಿ ಅಮೆಜಾನ್ ತಾಣದಲ್ಲಿ 60 ಕ್ಕೂ ಹೆಚ್ಚು ಹೊಸ ಡಿವೈಸ್‌ಗಳು ಲಾಂಚ್ ಆಗಲಿದೆ ಎನ್ನಲಾಗಿದೆ. ಇದರ ಜೊತೆಗೆ ಮೊಬೈಲ್ ಫೋನ್ ಪರಿಕರಗಳು, ಸ್ಮಾರ್ಟ್ ವಾಚ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಸ್ಮಾರ್ಟ್ ಟಿವಿಗಳು ಸೇರಿದಂತೆ ಗೃಹೋಪಯೋಗಿ ಉಪಕರಣಗಳ ಮೇಲೆ ರಿಯಾಯಿತಿಗಳು ದೊರೆಯಲಿವೆ.