iOS 16: ಇಂದು ಬಹುನಿರೀಕ್ಷಿತ iOS 16 ಆಪರೇಟಿಂಗ್‌ ಸಿಸ್ಟಂ ಬಿಡುಗಡೆ: ಹೊಸ ಅಪ್ಡೇಟ್​ನಲ್ಲಿ ಏನಿರಲಿದೆ?

ಆ್ಯಪಲ್‌ ಹೊಸ ಆಪರೇಟಿಂಗ್‌ ಸಿಸ್ಟಮ್‌ iOS 16 ಅನ್ನು ಬಿಡುಗಡೆ ಮಾಡಲು ತಯಾರಾಗಿದೆ. ಇಂದು ಹೊಸ ಅಪ್ಡೇಟ್​ನೊಂದಿಗೆ iOS 16 ಅನಾವರಣಗೊಳ್ಳಲಿದೆ.

iOS 16: ಇಂದು ಬಹುನಿರೀಕ್ಷಿತ iOS 16 ಆಪರೇಟಿಂಗ್‌ ಸಿಸ್ಟಂ ಬಿಡುಗಡೆ: ಹೊಸ ಅಪ್ಡೇಟ್​ನಲ್ಲಿ ಏನಿರಲಿದೆ?
iOS 16
Follow us
| Updated By: Vinay Bhat

Updated on: Sep 12, 2022 | 6:45 AM

ಟೆಕ್ ಲೋಕದ ದೈತ್ಯ ಕಂಪನಿ ಆ್ಯಪಲ್ (Apple) ಕಳೆದ ವಾರವಷ್ಟೆ ತನ್ನ ನೂತನ ಐಫೋನ್ 14 ಸರಣಿಯನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಐಫೋನ್ 14 (iPhone 14), ಐಫೋನ್ 14 ಪ್ಲಸ್‌, ಐಫೋನ್‌ 14 ಪ್ರೊ ಮತ್ತು ಐಫೋನ್‌ 14 ಪ್ರೊ ಮ್ಯಾಕ್ಸ್‌ ಹೀಗೆ ನಾಲ್ಕು ಸ್ಮಾರ್ಟ್​ಫೋನ್​ಗಳು (Smartphone) ಸೇರಿವೆ. ಇದರ ಬೆನ್ನಲ್ಲೇ ಇದೀಗ ಆ್ಯಪಲ್‌ನ ಹೊಸ ಆಪರೇಟಿಂಗ್‌ ಸಿಸ್ಟಮ್‌ iOS 16 ಅನ್ನು ಬಿಡುಗಡೆ ಮಾಡಲು ತಯಾರಾಗಿದೆ. ಇಂದು ಹೊಸ ಅಪ್ಡೇಟ್​ನೊಂದಿಗೆ iOS 16 ಅನಾವರಣಗೊಳ್ಳಲಿದೆ. ಇದರಲ್ಲಿ ವಿನೂತನವಾದ ಆಯ್ಕೆಗಳು ಇರಲಿದ್ದು ಸಾಕಷ್ಟು ವಿಶೇಷತೆಯಿಂದ ಕೂಡಿದೆ.

ಈ ಹೊಸ iOS ಆಯ್ದ ಐಫೋನ್​ಗಳ ಹೋಮ್ ಸ್ಕ್ರೀನ್, ಅಧಿಸೂಚನೆಗಳು ಮತ್ತು ಫೋಟೋಗಳ ಅಪ್ಲಿಕೇಶನ್ ನವೀಕೃತವಾಗಿರುತ್ತದೆ. ಬ್ಲೂಮ್‌ಬರ್ಗ್‌ನ ಆಪಲ್ ತಜ್ಞ ಮಾರ್ಕ್ ಗುರ್ಮನ್ ಪ್ರಕಾರ, ಆಪರೇಟಿಂಗ್ ಸಿಸ್ಟಮ್ ಸಾಧನದೊಂದಿಗೆ ಸಂವಹನ ನಡೆಸುವ ಹೊಸ ವಿಧಾನಗಳನ್ನು ಮತ್ತು ಕೆಲವು ತಾಜಾ ಆ್ಯಪಲ್ ಅಪ್ಲಿಕೇಶನ್‌ಗಳನ್ನು ಈ ಹೊಸ ಆವೃತ್ತಿಯ ಹೊಂದಿರುತ್ತದೆ ಎಂದಿದ್ದಾರೆ.

iOS 16 ನಲ್ಲಿ ಫೋಟೋಗಳನ್ನು ಲಾಕ್ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳುವಂತೆ ಮಾಡಬಹುದು. ಜೊತೆಗೆ ಫಾಂಟ್ ಶೈಲಿಗಳನ್ನು ಬದಲಾಯಿಸುವ ಆಯ್ಕೆಯ ವಿಜೆಟ್​ಗಳನ್ನು ಒದಗಿಸಲಾಗಿದೆ. IOS 16 ಇತ್ತೀಚೆಗೆ ಕಳುಹಿಸಿದ ಸಂದೇಶವನ್ನು ಸಂಪಾದಿಸುವ ಅಥವಾ ಅಳಿಸುವ ವೈಶಿಷ್ಟ್ಯವನ್ನು ಹೊಂದಿದೆ. ಫೋಟೋಗಳು ಮತ್ತು ವಿಷಯಾಧಾರಿತ ಸ್ಟೋರೇಜ್‌ಗಳೊಂದಿಗೆ ವಾಲ್‌ಪೇಪರ್‌ ಗ್ಯಾಲರಿಯನ್ನು ಬಳಕೆದಾರರು ಪ್ರವೇಶಿಸಬಹುದು. ಇದು ಬಳಕೆದಾರರಿಗೆ ಸಮಯ ಮತ್ತು ದಿನಾಂಕಕ್ಕಾಗಿ ಫಾಂಟ್‌ಗಳನ್ನು ಕಸ್ಟಮೈಸ್ ಮಾಡಲು ಅವಕಾಶ ನೀಡಲಿದೆ.

ಇದನ್ನೂ ಓದಿ
Image
iPhone 13: ಸೆ. 23ಕ್ಕೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಐಫೋನ್ 13 ಮೇಲೆ ಬಂಪರ್ ಡಿಸ್ಕೌಂಟ್
Image
iPhone 14: 2-3 ತಿಂಗಳಲ್ಲಿ ಭಾರತದಲ್ಲೇ ತಯಾರಾಗಲಿದೆ ಐಫೋನ್ 14: ಮಹತ್ವದ ಹೆಜ್ಜೆಯಿಟ್ಟ ಆ್ಯಪಲ್
Image
Google Pixel 6a: ಫ್ಲಿಪ್​ಕಾರ್ಟ್​ನಿಂದ ಬಂಪರ್ ಆಫರ್: ಕೇವಲ 27,699 ರೂ. ಗೆ ಖರೀದಿಸಿ ಗೂಗಲ್ ಪಿಕ್ಸೆಲ್ 6a
Image
Motorola Edge 30 Fusion: 50MP ಕ್ಯಾಮೆರಾ, 68W ಫಾಸ್ಟ್ ಚಾರ್ಜರ್: ಬಹುನಿರೀಕ್ಷಿತ ಮೋಟೋ ಎಡ್ಜ್‌ 30 ಫ್ಯೂಷನ್‌ ಬಿಡುಗಡೆ

ಇನ್ನು ಈ ಹೊಸ ಅಪ್ಡೇಟ್​ನಲ್ಲಿ ನೋಟಿಫಿಕೇಶನ್‌ಗಳು ಮತ್ತು ಆಲರ್ಟ್‌ಗಳನ್ನು ಡಿಸ್‌ಪ್ಲೇ ಡೌನ್‌ಸೈಡ್‌ನಲ್ಲಿ ಕಾಣಬಹುದಾಗಿದೆ. ಇದರಿಂದ ಟ್ಯಾಪ್‌ ಮಾಡುವುದು ಹಾಗೂ ವೀಕ್ಷಿಸುವುದು ಸುಲಭವಾಗಲಿದೆ. ಲೈವ್ ಆಕ್ಟಿವಿಟಿಸ್‌ ಎಂಬ ಹೊಸ ಟೂಲ್‌ ಮೂಲಕ ಬಳಕೆದಾರರು ಲಾಕ್ ಸ್ಕ್ರೀನ್‌ನಿಂದ ರಿಯಲ್‌ ಟೈಂ ನಡೆಯುತ್ತಿರುವ ಕಂಟೆಂಟ್‌ ಅನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ವಿಶೇಷವಾಗಿ ಲಾಕ್ ಸ್ಕ್ರೀನ್‌ನಿಂದ ಸ್ವೈಪ್ ಮಾಡುವ ಮೂಲಕ ಫೋಕಸ್ ಮೋಡ್ ಅನ್ನು ಪ್ರವೇಶಿಸಬಹುದಾಗಿದೆ. ಇದರಲ್ಲಿ ನೀವು ಸೆಂಡ್‌ ಮಾಡಿದ ಮೆಸೇಜ್‌ ಅನ್ನು ಎಡಿಟ್‌ ಮಾಡುವುದಕ್ಕೆ ಮತ್ತು ಡಿಲೀಟ್‌ ಮಾಡುವುದಕ್ಕೆ ಅವಕಾಶ ಕೂಡ ಸಿಗಲಿದೆ.

ಫೋಟೋ ಲೈಬ್ರರಿಯಲ್ಲಿ ಹೊಸ ಆಯ್ಕೆ ಬರಲಿದ್ದು ಇದರಲ್ಲಿ ನೀವು ನಿರ್ದಿಷ್ಟ ವ್ಯಕ್ತಿಗಳ ಫೋಟೋಗಳನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ. ಬಳಕೆದಾರರು ಕ್ಯಾಮೆರಾದಿಂದಲೇ ಫೋಟೋಗಳನ್ನು ನೇರವಾಗಿ ಶೇರ್‌ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಐಫೋನ್‌ 14, ಐಫೋನ್‌ 14 ಪ್ಲಸ್‌, ಐಫೋನ್‌ 14 ಪ್ರೊ, ಐಫೋನ್‌ 14 ಪ್ರೊ ಮ್ಯಾಕ್ಸ್‌, ಐಫೋನ್‌ 13, ಐಫೋನ್‌ 13 ಮಿನಿ, ಐಫೋನ್‌ 13 ಪ್ರೊ, ಐಫೋನ್‌ 13 ಪ್ರೊ ಮ್ಯಾಕ್ಸ್‌, ಐಫೋನ್‌ 12, ಐಫೋನ್‌ 12 ಮಿನಿ, ಐಫೋನ್‌ 12 ಪ್ರೊ ನಲ್ಲಿ ಲಭ್ಯವಾಗಲಿದೆ. ಇದಲ್ಲದೆ ಐಫೋನ್‌ 12 ಪ್ರೊ ಮ್ಯಾಕ್ಸ್‌, ಐಫೋನ್‌ 11, ಐಫೋನ್‌ 11 ಪ್ರೊ, ಐಫೋನ್‌ 11 ಪ್ರೊ ಮ್ಯಾಕ್ಸ್‌, ಐಫೋನ್‌ XS, ಐಫೋನ್‌ XS ಮ್ಯಾಕ್ಸ್‌, ಐಫೋನ್‌ XR, ಐಫೋನ್‌ X, ಐಫೋನ್‌ 8, ಐಫೋನ್‌ 8 ಪ್ಲಸ್‌, ಮತ್ತು ಐಫೋನ್‌ SE ಗಳಲ್ಲಿ iOS 16 ಕಾರ್ಯನಿರ್ವಹಿಸಲಿದೆ.