iPhone Mobiles: iPhone 14 ಬಿಡುಗಡೆಯಾಗಿದ್ದರೂ ಕಡಿತ ಬೆಲೆಯೊಂದಿಗೆ ಲಭ್ಯವಾಗಲಿದೆ iPhone 13

ನೀವು iPhone 14 ಅಥವಾ iPhone 13 ಅನ್ನು ಖರೀದಿಸಬೇಕೇ? ಗ್ರಾಹಕರು ಎರಡನೇ ಆಯ್ಕೆಯನ್ನು ಆರಿಸಿಕೊಂಡರೆ ಆಶ್ಚರ್ಯವೇನಿಲ್ಲ, ಏಕೆಂದರೆ ಇದು ಭಾರಿ ಬೆಲೆ ಕಡಿತದೊಂದಿಗೆ (ಸುಮಾರು 10,000 ರೂ. ರಿಯಾಯಿತಿ) ಲಭ್ಯವಿದೆ.

iPhone Mobiles: iPhone 14 ಬಿಡುಗಡೆಯಾಗಿದ್ದರೂ ಕಡಿತ ಬೆಲೆಯೊಂದಿಗೆ ಲಭ್ಯವಾಗಲಿದೆ iPhone 13
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Sep 12, 2022 | 10:42 AM

iPhone 14 ಬಿಡುಗಡೆಯಾಗಿದ್ದರೂ, ಅದರ ಹಿಂದಿನ iPhone 13 ರ ಕಥೆ ಏನು ಎಂದು ಗ್ರಾಹಕರು ಯೋಚಿಸುತ್ತಿರುವುದು ಸುಳ್ಳಲ್ಲ, ಕೆಲವು ಗ್ರಾಹಕರಂತೂ ಹೊಸ ಮೊಬೈಲ್ ಬಂದಾಗ ಹಳೆಯ ಮೊಬೈಲ್ ಕಡಿಮೆಗೆ ಸಿಗುತ್ತದೆ ಎಂದು ಕಾಯುತ್ತಿರುತ್ತಾರೆ. ಅಂತಹ ಗ್ರಾಹಕರಿಗೆ ಹಾಗೂ ಕಿಡಿಮೆ ಬೆಲೆಯೊಂದಿಗೆ ಐಫೋನ್ ಖರೀದಿಸಬೇಕು ಎನ್ನುವವರಿಗೆ ಇದು ಉಪಯುಕ್ತ ಮಾಹಿತಿಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಐಫೋನ್ 13 ಮತ್ತು 14 ಸದ್ದು ಮಾಡುತ್ತಿದೆ. ಹೀಗಿದ್ದಾಗ ನೀವು iPhone 14 ಅಥವಾ iPhone 13 ಅನ್ನು ಖರೀದಿಸಬೇಕೇ? ಒಂದಷ್ಟು ಗ್ರಾಹಕರು ಎರಡನೆಯದ್ದನ್ನು ಆರಿಸಿಕೊಂಡರೆ ಆಶ್ಚರ್ಯವೇನಿಲ್ಲ. ಏಕೆಂದರೆ ಇದು ಭಾರಿ ಬೆಲೆ ಕಡಿತದೊಂದಿಗೆ ಲಭ್ಯವಿದೆ. ಅಂದರೆ ಸುಮಾರು 10,000 ರೂಪಾಯಿಯ ರಿಯಾಯಿತಿಯಲ್ಲಿ ಲಭ್ಯವಾಗಲಿದೆ.

ಪ್ರಸ್ತುತ, iPhone 13 ಬೇಸ್ 128GB ರೂಪಾಂತರಕ್ಕಾಗಿ 69,900 ರೂಪಾಯಿ ಆಗಿದೆ ಮತ್ತು ಹೊಸ ಮಾದರಿಯ iPhone 14ರ ಬೆಲೆ 79,900 ರೂ.ಗಳಿಂದ ಪ್ರಾರಂಭವಾಗುತ್ತದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಷಯಗಳು ಹೆಚ್ಚು ಆಕರ್ಷಕವಾಗಿವೆ. ಏಕೆಂದರೆ ಐಫೋನ್ 13 ಮಾರಾಟದ ಕೊಡುಗೆಗಳ ಗುಂಪಿನೊಂದಿಗೆ ಲಭ್ಯವಿದೆ. ಇದರರ್ಥ ನೀವು ಐಫೋನ್ 13 ಅನ್ನು ಅದರ MRP ದರಕ್ಕಿಂತ ಅಗ್ಗವಾಗಿ ಖರೀದಿಸಬಹುದು. ಹಾಗಿದ್ದರೆ ವಿಶೇಷಣಗಳನ್ನು ತಿಳಿದುಕೊಳ್ಳುವ ಮೂಲಕ ಗ್ರಾಹಕರು ಯಾವುದು ಖರೀದಿಸಿದರೆ ಉತ್ತಮ ಎಂದು ವಿಶ್ಲೇಷಿಸುವ ಸಮಯವಿದು.

ಐಫೋನ್ 14 ಮತ್ತು ಐಫೋನ್ 13 ಹೆಚ್ಚು-ಕಡಿಮೆ ಒಂದೇ ರೀತಿ ತೂಗುತ್ತದೆ. ಎರಡೂ ಸ್ಮಾರ್ಟ್‌ಫೋನ್‌ಗಳು 6.1 ಇಂಚಿನ ಪರದೆಯನ್ನು ಹೊಂದಿದ್ದು, ಹಿಂಭಾಗದಲ್ಲಿ ಅದೇ 12-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಗ್ರಾಹಕರು ಪಡೆಯಲಿದ್ದಾರೆ ಮತ್ತು ಮುಂಭಾಗದಲ್ಲಿ ಮತ್ತೆ 12 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ. ಅನೇಕರು ಅದೇ A15 ಬಯೋನಿಕ್ ಚಿಪ್‌ಸೆಟ್ ಬಗ್ಗೆ ಮಾತನಾಡಿದ್ದಾರೆ. ಆದರೂ ಹೊಸ ಐಫೋನ್ 14 ಪ್ರೊಸೆಸರ್ ಹೆಚ್ಚು ಕೋರ್‌ಗಳನ್ನು ಹೊಂದಿರುವುದರಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಸಮರ್ಥ ಕಾರ್ಯಕ್ಷಮತೆಯು ದೀರ್ಘ ಬ್ಯಾಟರಿ ಬಾಳಿಕೆಗೆ ಕಾರಣವಾಗಬಹುದು. ಎರಡೂ ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಪ್ರಮುಖವಾದ ಎಲ್ಲಾ 5G ಬ್ಯಾಂಡ್‌ಗಳನ್ನು ಬೆಂಬಲಿಸುತ್ತವೆ. ಇಲ್ಲಿ ಒಂದು ದೊಡ್ಡ ವ್ಯತ್ಯಾಸವೆಂದರೆ ಐಫೋನ್ 14 ಹೆಚ್ಚು ವರ್ಷಗಳ ಐಒಎಸ್ ನವೀಕರಣಗಳನ್ನು ಪಡೆಯುತ್ತದೆ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 am, Mon, 12 September 22

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್