Oppo F21s Pro: ಪವರ್ಫುಲ್ ಮೈಕ್ರೊ ಲೆನ್ಸ್ ಕ್ಯಾಮೆರಾ: ರೋಚಕತೆ ಸೃಷ್ಟಿಸಿದ ಒಪ್ಪೋ F21s ಪ್ರೊ ಸರಣಿ
ಒಪ್ಪೋ F21s ಮತ್ತು ಒಪ್ಪೋ F21s ಪ್ರೊ ಹೀಗೆ ಈ ಸರಣಿಯಲ್ಲಿ ಒಟ್ಟು ಎರಡು ಸ್ಮಾರ್ಟ್ಫೋನ್ಗಳು ಒಳಗೊಂಡಿರಲಿದೆ. ಈ ಎರಡೂ ಫೋನ್ಗಳು 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯಿಂದ ಕೂಡಿರಲಿದೆ.
ಚೀನಾ ಮೂಲದ ಪ್ರಸಿದ್ಧ ಮೊಬೈಲ್ ಕಂಪನಿ ಒಪ್ಪೋ (Oppo) ಈಗೀಗ ಅಪರೂಪಕ್ಕಷ್ಟೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಕ್ಯಾಮೆರಾಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಒಪ್ಪೋ ಇದೀಗ ಆಕರ್ಷಕವಾದ ಹೊಸ ಸ್ಮಾರ್ಟ್ಫೋನ್ ಒಂದನ್ನು ಪರಿಚಯಿಸಲು ಹೊರಟಿದೆ. ಅದುವೆ ಒಪ್ಪೋ ಎಫ್ 21ಎಸ್ ಸರಣಿ (Oppo F21s Pro Series). ಈ ಫೋನ್ ಭಾರತದಲ್ಲಿ ಇದೇ ಸೆಪ್ಟಂಬರ್ 15 ರಂದು ಅನಾವರಣಗೊಳ್ಳಲಿದೆ. ಈಗಾಗಲೇ ಟೆಕ್ ಪ್ರಿಯರ ನಿದ್ದೆ ಕದ್ದಿರುವ ಈ ಸ್ಮಾರ್ಟ್ಫೋನ್ (Smartphone) ಬರೋಬ್ಬರಿ 30x ಜೂಮ್ ಸಪೋರ್ಟ್ ಮಾಡುತ್ತದ್ದಂತೆ. ಅಲ್ಲದೆ ಆಕರ್ಷಕವಾದ ಮೈಕ್ರೊ ಲೆನ್ಸ್ ಕ್ಯಾಮೆರಾ ನೀಡಲಾಗಿದೆ. ಕಂಪನಿ ಈ ಫೋನಿನ ಬೆಲೆ ಹಾಗೂ ಎಲ್ಲ ಫೀಚರ್ಗಳನ್ನು ಬಹಿರಂಗ ಪಡಿಸಿಲ್ಲ. ಮೂಲಗಳ ಪ್ರಕಾರ ಕೆಲ ವಿಶೇಷತೆಗಳು ತಿಳಿದುಬಂದಿದೆ.
ಒಪ್ಪೋ F21s ಮತ್ತು ಒಪ್ಪೋ F21s ಪ್ರೊ ಹೀಗೆ ಈ ಸರಣಿಯಲ್ಲಿ ಒಟ್ಟು ಎರಡು ಸ್ಮಾರ್ಟ್ಫೋನ್ಗಳು ಒಳಗೊಂಡಿರಲಿದೆ. ಈ ಎರಡೂ ಫೋನ್ಗಳು 8GB RAM ಮತ್ತು 128GB ಸ್ಟೋರೇಜ್ ಆಯ್ಕೆಯಿಂದ ಕೂಡಿರಲಿದೆ ಎನ್ನಲಾಗಿದೆ. ಇದರಲ್ಲಿರುವ ಸ್ಪೋರ್ಟ್ಸ್ ಟ್ರಿಪಲ್ ರಿಯರ್ ಕ್ಯಾಮೆರಾ ಪ್ರಮುಖ ಹೈಲೇಟ್ ಆಗಿದ್ದು ಸೆಲ್ಫೀ ಕ್ಯಾಮೆರಾ ಸೋನಿ IMX709 ಸೆನ್ಸಾರ್ನಿಂದ ಕೂಡಿರಲಿದೆಯಂತೆ.
Create new perspective and experience the extraordinary beauty in everyday objects around you with up to 30X magnification. Made possible with the powerful Segment 1st Microlens Camera on the OPPO F21s Pro. Launching on 15th September.#OPPOF21sProSeries #BeautyInEverything
— OPPO India (@OPPOIndia) September 12, 2022
64 ಮೆಗಾಫಿಕ್ಸೆಲ್ ಸಾಮರ್ಥ್ಯದ ಮುಖ್ಯ ಕ್ಯಾಮೆರಾ ಇರುವುದು ಬಹುತೇಕ ಖಚಿತವಾಗಿದೆ. ಎಲ್ಇಡಿ ಫ್ಲ್ಯಾಶ್ ಕೂಡ ನೀಡಲಾಗಿದೆ. ಈ ಫೋನ್ 7.66mm ನಷ್ಟು ಥಿಕ್ನೆಸ್ ಹೊಂದಿದೆ. ಆಕರ್ಷಕ ಡಿಸೈನ್ನೊಂದಿಗೆ ಲಾಂಚ್ ಆಗಲಿದೆ. ಸ್ನಾಪ್‌ಡ್ರಾಗನ್ 680 ಪ್ರೊಸೆಸರ್ ಇರಲಿದೆ ಎಂಬ ಮಾತಿದ್ದು, 6.43 ಇಂಚಿನ ಅಮೋಲೆಡ್ ಡಿಸ್ ಪ್ಲೇ ಅಳವಡಿಸಲಾಗಿದೆಯಂತೆ. 5000mAh ಸಾಮರ್ಥ್ಯದ ಬ್ಯಾಟರಿಗೆ 33W ಸೂಪರ್ವೋಕ್ ಫಾಸ್ಟ್ ಚಾರ್ಜರ್ ನೀಡಲಾಗಿದೆ.
ಒಪ್ಪೋ ಕಂಪನಿ ಕಳೆದ ಎಪ್ರಿಲ್ನಲ್ಲಿ ಒಪ್ಪೋ F21 ಪ್ರೊ ಸ್ಮಾರ್ಟ್ಫೋನನ್ನು ಅನಾವರಣ ಮಾಡಿತ್ತು. ಇದು 1,080*2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ನಿಂದ ಕೂಡಿದೆ. ಇದು ಆಕ್ಟಾ–ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 12 ನಲ್ಲಿ ಕಲರ್OS 12.1 ಜೊತೆಗೆ ರನ್ ಆಗುತ್ತದೆ.
ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ Sony IMX709 ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು,33W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS- AGPS ಮತ್ತು USB ಟೈಪ್-C ಪೋರ್ಟ್ ಸೇರಿವೆ.