ಇಂದು ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಕೊನೇ ದಿನ: ಈ ದುಬಾರಿ ಫೋನ್ ಕಡಿಮೆ ಬೆಲೆಗೆ ಲಭ್ಯ

Amazon Great Republic Day Sale 2024: ಇಂದು ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಕೊನೆಗೊಳ್ಳಲಿದೆ. ಕೊನೆಯ ದಿನವಾದ ಕಾರಣ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಇದೆ. ಮುಖ್ಯವಾಗಿ ಹಲವು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಅವುಗಳಲ್ಲಿ ಕೆಲ ಫೋನುಗಳ ವಿವರ ಇಲ್ಲಿದೆ.

ಇಂದು ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಕೊನೇ ದಿನ: ಈ ದುಬಾರಿ ಫೋನ್ ಕಡಿಮೆ ಬೆಲೆಗೆ ಲಭ್ಯ
Amazon Great Republic Day Sale
Follow us
|

Updated on: Jan 19, 2024 | 2:00 PM

ಜನವರಿ 13 ರಂದು ಪ್ರಾರಂಭವಾದ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 (Amazon Great Republic Day Sale) ಜನವರಿ 18 ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಇದನ್ನು ಜನವರಿ 19 ರವರೆಗೆ ವಿಸ್ತರಿಸಲಾಗಿದೆ. ಅಂದರೆ ಇಂದು ಕೊನೆಗೊಳ್ಳಲಿದೆ. ಈ ವಿಸ್ತರಣೆಯ ಸಂದರ್ಭ ಅನೇಕ ವಸ್ತುಗಳ ಮೇಲೆ ಬಂಪರ್ ರಿಯಾಯಿತಿ ನೀಡಲಾಗಿದೆ. ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಇದೆ. SBI ಕಾರ್ಡ್‌ದಾರರು ಕ್ರೆಡಿಟ್ ಮತ್ತು EMI ವಹಿವಾಟುಗಳ ಮೇಲೆ 10 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಮುಖ್ಯವಾಗಿ ಹಲವು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಅವುಗಳಲ್ಲಿ ಕೆಲ ಫೋನುಗಳ ವಿವರ ಇಲ್ಲಿದೆ.

ಹಾನರ್ 90 (12GB + 512GB)

ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 49,999 ರೂ. ಆಗಿದೆ. ಆದರೀಗ ಇದು ಕೇವಲ 30,999 ಕ್ಕೆ ಸೇಲ್ ಆಗುತ್ತಿದೆ. ಹೆಚ್ಚುವರಿಯಾಗಿ, ಗ್ರಾಹಕರು SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಫ್ಲಾಟ್ ₹ 2250 ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಈ ಸ್ಮಾರ್ಟ್‌ಫೋನ್ 200MP ಅಲ್ಟ್ರಾ-ಕ್ಲಿಯರ್ ಮುಖ್ಯ ಕ್ಯಾಮೆರಾ, 120Hz ಕ್ವಾಡ್-ಕರ್ವ್ಡ್ ಫ್ಲೋಟಿಂಗ್ AMOLED ಡಿಸ್‌ಪ್ಲೇ ಮತ್ತು 3840Hz PWM ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್7 Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು ಆಂಡ್ರಾಯ್ಡ್ 13 ಆಧಾರಿತ ಮ್ಯಾಜಿಕ್ OS 7.1 ನಲ್ಲಿ ಕಾರ್ಯನಿರ್ವಹಿಸುತ್ತದೆ

ಒನ್​ಪ್ಲಸ್ 11R 5G (GB RAM, 128GB ಸಂಗ್ರಹಣೆ)

ಈ ಸ್ಮಾರ್ಟ್‌ಫೋನ್ ಪ್ರಸ್ತುತ ರೂ. 39,999 ಕ್ಕೆ ಮಾರಾಟವಾಗುತ್ತಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಇಎಂಐ ಅಲ್ಲದ ವಹಿವಾಟಿನ ಮೇಲೆ ನೀವು ₹ 750 ವರೆಗೆ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಒನ್​ಪ್ಲಸ್ 11R 5G ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ, ಸೋನಿ IMX890, 8MP ಅಲ್ಟ್ರಾವೈಡ್ ಮತ್ತು ಮ್ಯಾಕ್ರೋ ಲೆನ್ಸ್‌ನೊಂದಿಗೆ 50MP ಮುಖ್ಯ ಕ್ಯಾಮೆರಾವನ್ನು ಒಳಗೊಂಡಿದೆ. 6.7-ಇಂಚಿನ 120Hz ಸೂಪರ್ ಫ್ಲೂಯಿಡ್ AMOLED ಡಿಸ್ಪ್ಲೇ , ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ, ಆಂಡ್ರಾಯ್ಡ್ 13 ಆಧಾರಿತ OxygenOSನಲ್ಲಿ ರನ್ ಆಗುತ್ತದೆ.

ಇದನ್ನೂ ಓದಿ
Image
ನಿಮ್ಮ ವೋಟಾರ್ ಐಡಿ ಕಳೆದುಹೋಯಿತೇ?: ಮರಳಿ ಪಡೆಯುವುದು ಹೇಗೆ?
Image
ಯೂಟ್ಯೂಬ್ ಚಾನಲ್​ಗೆ ಚಂದಾದಾರರನ್ನು ಹೆಚ್ಚಿಸೋದು ಹೇಗೆ?
Image
ನಿಮ್ಮ ಸ್ಮಾರ್ಟ್​ಫೋನ್​ಗೆ ವೈರಸ್ ಅಟ್ಯಾಕ್ ಆಗದಿರಲು ಈ ಸಲಹೆ ತಪ್ಪದೆ ಪಾಲಿಸಿ
Image
ಸ್ಮಾರ್ಟ್​ಫೋನ್​ಗೆ ಸ್ಕ್ರೀನ್ ಗಾರ್ಡ್ ಹಾಕಿಸಿದ್ದೀರಾ?

ಸ್ಯಾಮ್​ಸಂಗ್​ನ ಮತ್ತೆರಡು ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಇಳಿಕೆ: ಯಾವ ಫೋನ್?

ಐಕ್ಯೂ 12 5G (12GB RAM, 256GB ಸಂಗ್ರಹಣೆ)

ಈ ಸ್ಮಾರ್ಟ್‌ಫೋನ್ ರೂ. 52,999 ಕ್ಕೆ ಲಭ್ಯವಿದೆ. ನೀವು SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಫ್ಲಾಟ್ ₹ 2250 ತ್ವರಿತ ರಿಯಾಯಿತಿಯನ್ನು ಪಡೆಯಬಹುದು . 4nm TSMC ಮೂಲಕ ಸ್ನಾಪ್​ಡ್ರಾಗನ್ 8 Gen 3 ಪ್ರೊಸೆಸರ್, Adreno 750 GPU, LPDDR5X RAM ಮತ್ತು UFS 4.0 ಸಂಗ್ರಹಣೆಯನ್ನು ಹೊಂದಿದೆ. ಇದರ ಕ್ಯಾಮೆರಾ ಸೆಟಪ್ 50MP ಆಸ್ಟ್ರೋಗ್ರಫಿ, 50MP ಅಲ್ಟ್ರಾ-ವೈಡ್ ಮತ್ತು 64MP ಪೆರಿಸ್ಕೋಪ್ ಟೆಲಿಫೋಟೋ ಜೊತೆಗೆ 100X ಡಿಜಿಟಲ್ ಜೂಮ್ ಅನ್ನು ಒಳಗೊಂಡಿದೆ. 6.78 ಇಂಚಿನ 144Hz LTPO AMOLED ಡಿಸ್ಪ್ಲೇ, 120W ವೇಗದ ಚಾರ್ಜರ್ ಇದೆ.

ಮೋಟೋ ರೇಜರ್ 40 ಆಲ್ಟ್ರಾ (8GB RAM, 256GB ಸಂಗ್ರಹಣೆ)

ಈ ಸ್ಮಾರ್ಟ್‌ಫೋನ್ ರೂ. 69,999 ಕ್ಕೆ ಲಭ್ಯವಿದೆ. ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ನೀಡಲಾಗಿದೆ. 6.9 FHD+ ಪೋಲೆಡ್ ಮುಖ್ಯ ಡಿಸ್ಪ್ಲೇ ಹೊಂದಿದೆ. ಕ್ಯಾಮೆರಾ ಸೆಟಪ್ OIS ಜೊತೆಗೆ 12MP ಮುಖ್ಯ ಕ್ಯಾಮೆರಾ, 13MP ಅಲ್ಟ್ರಾ-ವೈಡ್/ಮ್ಯಾಕ್ರೋ, 12MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸಾಧನವು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್, IP52 ನೀರು-ನಿವಾರಕ ವಿನ್ಯಾಸ, 30W ಟರ್ಬೋಪವರ್ ಚಾರ್ಜಿಂಗ್‌ನೊಂದಿಗೆ 3800mAh ಬ್ಯಾಟರಿ ಮತ್ತು 5W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಆ್ಯಪಲ್ ಐಫೋನ್ 13 (256GB)

ಈ ಸ್ಮಾರ್ಟ್‌ಫೋನ್ 6.1 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇ, 12 ಎಂಪಿ ವೈಡ್ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾಗಳೊಂದಿಗೆ ಡ್ಯುಯಲ್-ಕ್ಯಾಮೆರಾ ಸೆಟಪ್ ಹೊಂದಿದೆ. 4 ಕೆ ಡಾಲ್ಬಿ ವಿಷನ್ ಎಚ್‌ಡಿಆರ್ ರೆಕಾರ್ಡಿಂಗ್ ಮತ್ತು ನೈಟ್ ಮೋಡ್‌ನೊಂದಿಗೆ 12 ಎಂಪಿ ಟ್ರೂಡೆಪ್ತ್ ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ. ಇದು A15 ಬಯೋನಿಕ್ ಚಿಚಪ್​ನಿಂದ ಕೂಡಿದೆ. ಇದನ್ನು ಅಮೆಜಾನ್​ನಲ್ಲಿ ರೂ. 61,999 ಕ್ಕೆ ಖರೀದಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ