- Kannada News Photo gallery Amazon Great Republic Day Sale 2024 Live now check discounts offers on smartphones and others
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆರಂಭ: ಯಾವುದಕ್ಕೆ ಎಷ್ಟು ಡಿಸ್ಕೌಂಟ್?
Amazon Great Republic Day Sale 2024: ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಬಳಕೆದಾರರಿಗೆ ಇಂದಿನಿಂದ ಲಭ್ಯವಿದೆ. ಮಾರಾಟದ ಸಮಯದಲ್ಲಿ ಅಮೆಜಾನ್ ಗ್ರಾಹಕರಿಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಇತರ ಉತ್ಪನ್ನಗಳ ಮೇಲೆ ಹಲವಾರು ರಿಯಾಯಿತಿಗಳನ್ನು ನೀಡುತ್ತಿದೆ.
Updated on: Jan 14, 2024 | 6:55 AM

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಇದೀಗ ಪ್ರಾರಂಭವಾಗಿದೆ. ಗಣರಾಜ್ಯೋತ್ಸವದ ಮೊದಲು ನಡೆಯುವ ಈ ವಾರ್ಷಿಕ ಮಾರಾಟದ ಈವೆಂಟ್ ಅಮೆಜಾನ್ ಪ್ರೈಮ್ ಚಂದಾದಾರರಿಗೆ ನಿನ್ನೆಯೇ ಶುರುವಾಗಿದೆ. ಇತರ ಬಳಕೆದಾರರಿಗೆ ಇಂದಿನಿಂದ ಸೇಲ್ ಲಭ್ಯವಿದೆ. ಈ ಮೇಳದಲ್ಲಿ ವಿವಿಧ ಉತ್ಪನ್ನಗಳ ಮೇಲಿನ ರಿಯಾಯಿತಿಗಳ ಜೊತೆಗೆ, ಗ್ರಾಹಕರು ಮಾರಾಟದ ಸಮಯದಲ್ಲಿ ಅರ್ಹ ಬ್ಯಾಂಕ್ ಕಾರ್ಡ್ ವಹಿವಾಟುಗಳ ಮೇಲೆ ಹೆಚ್ಚುವರಿ ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು.

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಮಾರಾಟದ ಸಮಯದಲ್ಲಿ ಅಮೆಜಾನ್ ಗ್ರಾಹಕರಿಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಇತರ ಉತ್ಪನ್ನಗಳ ಮೇಲೆ ಹಲವಾರು ರಿಯಾಯಿತಿಗಳನ್ನು ನೀಡುತ್ತಿದೆ. ಮಾರಾಟದ ಸಮಯದಲ್ಲಿ ನೀವು ಹೆಚ್ಚುವರಿ 10 ಪ್ರತಿಶತ ತ್ವರಿತ ಡಿಸ್ಕೌಂಟ್ ಪಡೆಯಬಹುದು. ಜೊತೆಗೆ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಥವಾ ಇಎಂಐ ವಹಿವಾಟುಗಳಲ್ಲೂ ಆಫರ್ ಇದೆ.

ಮುಂಬರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನ ಲ್ಯಾಂಡಿಂಗ್ ಪುಟದ ಪ್ರಕಾರ, ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳನ್ನು ಶೇಕಡಾ 40 ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಿದೆ. ಅಲ್ಲದೆ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಪರಿಕರಗಳನ್ನು ಖರೀದಿಸಲು ಬಯಸುವ ಗ್ರಾಹಕರು ಈ ಉತ್ಪನ್ನಗಳನ್ನು 75 ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಪಡೆಯಬಹುದು.

ಅಂತೆಯೇ, ಸ್ಮಾರ್ಟ್ ಟಿವಿಗಳು ಮತ್ತು ವಾಷಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್‌ಗಳು ಮತ್ತು ಏರ್ ಕಂಡಿಷನರ್‌ಗಳಂತಹ ಗೃಹೋಪಯೋಗಿ ಉಪಕರಣಗಳನ್ನು ಮಾರಾಟದ ಸಮಯದಲ್ಲಿ 65 ಪ್ರತಿಶತದವರೆಗೆ ರಿಯಾಯಿತಿಯೊಂದಿಗೆ ಖರೀದಿಸಬಹುದು. ಈ ಉತ್ಪನ್ನಗಳ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಗ್ರಾಹಕರು ಅರ್ಹ ಹಳೆಯ ಸಾಧನಗಳು ಮತ್ತು ಉಪಕರಣಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದೆ.

ಈ ಮಾರಾಟ ಸಮಾರಂಭದಲ್ಲಿ ಹಾನರ್ 90 ಸ್ಮಾರ್ಟ್‌ಫೋನ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಇದರ 8/256GB ರೂಪಾಂತರಕ್ಕೆ 28,999 ಮತ್ತು 12/512GB ರೂಪಾಂತರಕ್ಕೆ 30,999 ರೂ. ಇದೆ. ಇದರ ಮೇಲೆ ಅಮೆಜಾನ್ ರೂ. 6,000 ರಿಯಾಯಿತಿ ನೀಡುತ್ತಿದೆ. ಈ ಮೂಲಕ 22,999 ರೂ. ಮತ್ತು 24,999 ರೂ. ಗಳಿಸಿಗೆ ಇದನ್ನು ಪಡೆಯಬಹುದು.




