SA20: ಮುಂಬೈ ಆರಂಭಿಕರ ಸಿಡಿಲಬ್ಬರದ ಬ್ಯಾಟಿಂಗ್ಗೆ ಪತರುಗುಟ್ಟಿದ ಸೂಪರ್ ಕಿಂಗ್ಸ್; 244 ರನ್ ಟಾರ್ಗೆಟ್..!
SA20: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ MI ಕೇಪ್ ಟೌನ್ ತಂಡ ಆರಂಭಿಕರಿಬ್ಬರ ಸಿಡಿಲಬ್ಬರದ ಬ್ಯಾಟಿಂಗ್ನ ಆಧಾರದ ಮೇಲೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 243 ರನ್ ಕಲೆಹಾಕಿದೆ. ಈ ಮೂಲಕ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ 244 ರನ್ ಟಾರ್ಗೆಟ್ ನೀಡಿದೆ.
SA20 ಲೀಗ್ನ ಮೊದಲ ಡಬಲ್-ಹೆಡರ್ ಪಂದ್ಯ ಈ ಶನಿವಾರದಂದು ನಡೆಯುತ್ತಿದೆ. ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಡಬಲ್‌ಹೆಡರ್‌ನ ಮೊದಲ ಗೇಮ್‌ನಲ್ಲಿ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ಮತ್ತು MI ಕೇಪ್ ಟೌನ್ ತಂಡಗಳು ಮುಖಾಮುಖಿಯಾಗಿವೆ.
1 / 7
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ MI ಕೇಪ್ ಟೌನ್ ತಂಡ ಆರಂಭಿಕರಿಬ್ಬರ ಸಿಡಿಲಬ್ಬರದ ಬ್ಯಾಟಿಂಗ್ನ ಆಧಾರದ ಮೇಲೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 243 ರನ್ ಕಲೆಹಾಕಿದೆ. ಈ ಮೂಲಕ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ 244 ರನ್ ಟಾರ್ಗೆಟ್ ನೀಡಿದೆ.
2 / 7
MI ಕೇಪ್ ಟೌನ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ ಹಾಗೂ ರಯಾನ್ ರಿಕೆಲ್ಟನ್ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಕೇವಲ 15. 3 ಓವರ್ಗಳಲ್ಲೇ 200 ರನ್ಗಳ ಜೊತೆಯಾಟ ನಡೆಸಿದರು.
3 / 7
ಈ ವೇಳೆ ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ ಕೇವಲ 50 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 104 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ MI ಕೇಪ್ ಟೌನ್ ತಂಡದ ಮೊದಲ ವಿಕೆಟ್ ಪತನವಾಯಿತು.
4 / 7
ಹಾಗೆಯೇ ಮತ್ತೊಬ್ಬ ಆರಂಭಿಕ ರಯಾನ್ ರಿಕೆಲ್ಟನ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 49 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 98 ರನ್ ಕಲೆಹಾಕಿದರು. ಆದರೆ ಕೇವಲ 2 ರನ್ಗಳಿಂದ ಶತಕ ವಂಚಿತರಾದರು.