Babar Azam: ವಿಶ್ವ ದಾಖಲೆ ಬರೆದ ಬಾಬರ್: ಈಗ್ಲೂ ಕಿಂಗ್ ಕೊಹ್ಲಿಯೇ ನಂಬರ್ 1
Babar Azam Records: ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 57 ರನ್ ಬಾರಿಸುವುದರೊಂದಿಗೆ ಬಾಬರ್ ಆಝಂ ಟಿ20 ಕ್ರಿಕೆಟ್ನಲ್ಲಿ 3500 ರನ್ ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 3500 ರನ್ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
Updated on: Jan 14, 2024 | 7:02 AM

ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಬಾಬರ್ ಆಝಂ ಚುಟುಕು ಕ್ರಿಕೆಟ್ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಅದು ಕೂಡ ರೋಹಿತ್ ಶರ್ಮಾ ಹಾಗೂ ಮಾರ್ಟಿನ್ ಗಪ್ಟಿಲ್ ಅವರನ್ನು ಹಿಂದಿಕ್ಕುವ ಮೂಲಕ ದಾಖಲೆ ಬರೆದಿರುವುದು ವಿಶೇಷ.

ನ್ಯೂಝಿಲೆಂಡ್ ವಿರುದ್ಧದ ಪಂದ್ಯದಲ್ಲಿ 57 ರನ್ ಬಾರಿಸುವುದರೊಂದಿಗೆ ಬಾಬರ್ ಆಝಂ ಟಿ20 ಕ್ರಿಕೆಟ್ನಲ್ಲಿ 3500 ರನ್ ಪೂರೈಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತೀ ವೇಗವಾಗಿ 3500 ರನ್ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆ ನ್ಯೂಝಿಲೆಂಡ್ನ ಮಾರ್ಟಿನ್ ಗಪ್ಟಿಲ್ ಹೆಸರಿನಲ್ಲಿತ್ತು. ಟಿ20 ಕ್ರಿಕೆಟ್ನಲ್ಲಿ 118 ಇನಿಂಗ್ಸ್ಗಳ ಮೂಲಕ ಗಪ್ಟಿಲ್ 3500 ರನ್ ಪೂರೈಸಿದ್ದರು. ಈ ಮೂಲಕ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಇದೀಗ ಬಾಬರ್ ಆಝಂ 99 ಇನಿಂಗ್ಸ್ಗಳ ಮೂಲಕ ಈ ಸಾಧನೆ ಮಾಡಿದ್ದಾರೆ. 105 ಟಿ20 ಪಂದ್ಯಗಳಲ್ಲಿ 99 ಬಾರಿ ಬ್ಯಾಟ್ ಬೀಸಿರುವ ಬಾಬರ್ 3 ಶತಕ ಹಾಗೂ 31 ಅರ್ಧಶತಕಗಳೊಂದಿಗೆ ಒಟ್ಟು 3542 ರನ್ ಕಲೆಹಾಕಿ ಅತೀ ವೇಗವಾಗಿ 3500+ ರನ್ ಕಲೆಹಾಕಿದ ವಿಶ್ವದ 2ನೇ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 3500 ರನ್ ಪೂರೈಸಲು ತೆಗೆದುಕೊಂಡಿದ್ದು ಕೇವಲ 96 ಇನಿಂಗ್ಸ್ಗಳನ್ನು ಮಾತ್ರ. ಈ ಮೂಲಕ ಚುಟುಕು ಕ್ರಿಕೆಟ್ನಲ್ಲಿ ಅತೀ ವೇಗವಾಗಿ 3500 ರನ್ ಪೂರೈಸಿದ ವಿಶ್ವ ದಾಖಲೆಯನ್ನು ಕಿಂಗ್ ಕೊಹ್ಲಿ ನಿರ್ಮಿಸಿದ್ದಾರೆ.

ಹಾಗೆಯೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಸಾಧಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 126 ಇನಿಂಗ್ಸ್ಗಳ ಮೂಲಕ 3500 ರನ್ ಪೂರೈಸಿರುವ ಹಿಟ್ಮ್ಯಾನ್, ವಿರಾಟ್ ಕೊಹ್ಲಿ, ಬಾಬರ್ ಆಝಂ ಹಾಗೂ ಮಾರ್ಪಿನ್ ಗಪ್ಟಿಲ್ ನಂತರದ ಸ್ಥಾನವನ್ನು ಅಲಂಕರಿಸಿದ್ದಾರೆ.
























