ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ಭರ್ಜರಿ ಮೇಳಗಳು ಆರಂಭವಾಗಿದೆ. ಅತ್ತ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ (Flipkart Big Saving Days sale) ಸೇಲ್ ಶುರುವಾಗಿದ್ದರೆ ಇತ್ತ ಅಮೇಜಾನ್ನಲ್ಲಿ ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ (Amazon Fab Phones Fest) ನಡೆಯುತ್ತಿ ಪ್ರಾರಂಭಗೊಂಡಿದೆ. ಈಗಾಗಲೇ ಈ ಸೇಲ್ ಲೈವ್ ಆಗಿದ್ದು ಮಾರ್ಚ್ 14 ರವರೆಗೆ ನಡೆಯಲಿದೆ. ಮಾರಾಟದ ಸಮಯದಲ್ಲಿ, ಖರೀದಿದಾರರಿಗೆ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಬಿಗ್ ಆಫರ್‌ಗಳನ್ನು ನೀಡಲಾಗಿದೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್ ಟೈಮ್ ಎನ್ನಬಹುದು. ಯಾಕಂದ್ರೆ ಈ ಸೇಲ್ನಲ್ಲಿ ಮೊಬೈಲ್ಗಳ ಮೇಲೆ ಸೇರಿದಂತೆ ಹೆಚ್ಚುವರಿಯಾಗಿ ಹಲವಾರು ಉತ್ಪನ್ನಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ಒದಗಿಸಲು ಅಮೆಜಾನ್ ಮುಂದಾಗಿದೆ. ಖರೀದಿದಾರರು ರಿಯಲ್ ಮಿ, ಸ್ಯಾಮ್ಸಂಗ್, ರೆಡ್ಮಿ ಸೇರಿದಂತೆ ಅನೇಕ ಸ್ಮಾರ್ಟ್‌ಫೋನ್‌ಗಳು (Smartphone) ಊಹಿಸಲಾಗದ ರೀತಿಯ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಹಾಗಾದರೇ ಅಮೆಜಾನ್‌ನಲ್ಲಿ ಭಾರೀ ಡಿಸ್ಕೌಂಟ್ ಪಡೆದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೋ A74 5G ಫೋನ್ 1,080 x 2,400 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.43 ಇಂಚಿನ HD + ಗುಣಮಟ್ಟದ AMOLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 480 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದರೊಂದಿಗೆ ಕ್ವಾಡ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಅವುಗಳು ಕ್ರಮವಾಗಿ 48 ಮೆಗಾ ಪಿಕ್ಸಲ್, 8 ಮೆಗಾ ಪಿಕ್ಸಲ್, 2 ಮೆಗಾ ಪಿಕ್ಸಲ್ ಮತ್ತು 2 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸಾಮರ್ಥ್ಯ ದಲ್ಲಿದೆ. ಫೋನ್ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ. ಇದರ ಬೆಲೆ 17,990 ರೂ.
ಗ್ಯಾಲಕ್ಸಿ S20 FE 5G ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಯನ್ನು ಹೊಂದಿದೆ. ಇದು ಆಕ್ಟಾ ಕೋರ್ ಎಕ್ಸಿನೋಸ್ 990 SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲ ದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ, ಇದರಲ್ಲಿ ಮುಖ್ಯ ಕ್ಯಾಮೆರಾ 12 ಮೆಗಾ ಪಿಕ್ಸೆಲ್ ಸೆನ್ಸಾರ್ ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ. ಹಾಗೆಯೇ ಈ ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 15W ಫಾಸ್ಟ್ ಚಾರ್ಜಿಂಗ್ ಪಡೆದಿದೆ. ಇದರ ಬೆಲೆ 36,990 ರೂ.
ರಿಯಲ್‌ಮಿ ನಾರ್ಜೊ 50A ಸ್ಮಾರ್ಟ್‌ಫೋನ್ 6.5 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೋ G85 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಓಎಸ್ ಆಧಾರಿತ ರಿಯಲ್‌ಮಿ ಯುಐ 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 6,000mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದರ ಬೆಲೆ 11,499 ರೂ.
ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್ ಅನ್ನು ಹೊಂದಿದೆ. ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM + 64 GB ಮತ್ತು 6GB + 128 GB ಆಗಿವೆ. ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಹಾಗೆಯೇ 5,020 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರ ಬೆಲೆ 17,499 ರೂ.
ಒನ್‌ಪ್ಲಸ್ ನಾರ್ಡ್ CE 5G ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 750G SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಆಕ್ಸಿಜನ್ ಒಎಸ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ 4,500 mAh ಬ್ಯಾಟರಿ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಜೊತೆಗೆ 30W Warp ಚಾರ್ಜ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.
ರೆಡ್ಮಿ ನೋಟ್ 10T 5G ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಸಾಮರ್ಥ್ಯ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಹಾಗೆಯೇ ಇದು 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇದರ ಬೆಲೆ 13,990 ರೂ.
Realme C35: ಸೇಲ್ ಕಾಣುತ್ತಿದೆ ಅತಿ ಕಡಿಮೆ ಬೆಲೆಯ ರಿಯಲ್ ಮಿ C35: ಬಜೆಟ್ ಪ್ರಿಯರು ಕಣ್ಮುಚ್ಚಿ ಖರೀದಿಸಬಹುದು
Huawei Nova 9 SE: ಬಿಡುಗಡೆ ಆಗಿದೆ 108MP ಕ್ಯಾಮೆರಾದ ಮತ್ತೊಂದು ಹೊಸ ಸ್ಮಾರ್ಟ್‌ಫೋನ್: ಬೆಲೆ ಕೇವಲ …