AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್: ಸಾವಿರಾರು ಪ್ರಾಡಕ್ಟ್​​ಗಳು ಅತಿ ಕಡಿಮೆ ಬೆಲೆಗೆ ಮಾರಾಟ

ಅಮೇಜಾನ್​ನಲ್ಲಿ (Amazon) ಅಮೆಜಾನ್‌ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್ ನಡೆಯುತ್ತಿದ್ದರೆ ಇತ್ತ ಫ್ಲಿಪ್​ಕಾರ್ಟ್​ನಲ್ಲಿ ಇಂದಿನಿಂದ ಬಿಗ್‌ ಸೇವಿಂಗ್‌ ಡೇಸ್‌ (Flipkart Big Saving Days sale) ಸೇಲ್​ಗೆ ಪ್ರಾರಂಭಗೊಂಡಿದೆ. ಇದೇ ಮಾರ್ಚ್ 12 ರಂದು ಈ ಬಹುನಿರೀಕ್ಷಿತ ಸೇಲ್  ಲೈವ್ ಆಗಿದ್ದು, ಮಾರ್ಚ್‌ 17 ರವರೆಗೆ ನಡೆಯಲಿದೆ.

Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಸೇವಿಂಗ್ ಡೇಸ್: ಸಾವಿರಾರು ಪ್ರಾಡಕ್ಟ್​​ಗಳು ಅತಿ ಕಡಿಮೆ ಬೆಲೆಗೆ ಮಾರಾಟ
Flipkart
TV9 Web
| Edited By: |

Updated on: Mar 12, 2022 | 6:27 AM

Share

ಪ್ರಸಿದ್ಧ ಇ ಕಾಮರ್ಸ್​ ತಾಣಗಳಲ್ಲಿ ಭರ್ಜರಿ ಮೇಳಗಳು ಆರಂಭವಾಗಿದೆ. ಅತ್ತ ಅಮೇಜಾನ್​ನಲ್ಲಿ (Amazon) ಅಮೆಜಾನ್‌ ಫ್ಯಾಬ್‌ ಫೋನ್ಸ್‌ ಫೆಸ್ಟ್‌ ಸೇಲ್ ನಡೆಯುತ್ತಿದ್ದರೆ ಇತ್ತ ಫ್ಲಿಪ್​ಕಾರ್ಟ್​ನಲ್ಲಿ ಇಂದಿನಿಂದ ಬಿಗ್‌ ಸೇವಿಂಗ್‌ ಡೇಸ್‌ (Flipkart Big Saving Days sale) ಸೇಲ್​ಗೆ ಪ್ರಾರಂಭಗೊಂಡಿದೆ. ಇದೇ ಮಾರ್ಚ್ 12 ರಂದು ಈ ಬಹುನಿರೀಕ್ಷಿತ ಸೇಲ್  ಲೈವ್ ಆಗಿದ್ದು, ಮಾರ್ಚ್‌ 17 ರವರೆಗೆ ನಡೆಯಲಿದೆ. ಮಾರಾಟದ ಸಮಯದಲ್ಲಿ, ಖರೀದಿದಾರರಿಗೆ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಬಿಗ್‌ ಆಫರ್‌ಗಳನ್ನು ನೀಡಲಾಗಿದೆ. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್​ ಟೈಮ್ ಎನ್ನಬಹುದು. ಯಾಕಂದ್ರೆ ಈ ಸೇಲ್​ನಲ್ಲಿ ಮೊಬೈಲ್​ಗಳ ಮೇಲೆ ಸೇರಿದಂತೆ ಹೆಚ್ಚುವರಿಯಾಗಿ ಹಲವಾರು ಉತ್ಪನ್ನಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ಒದಗಿಸಲು ಫ್ಲಿಪ್​ಕಾರ್ಟ್ ಮುಂದಾಗಿದೆ. ಖರೀದಿದಾರರು ರಿಯಲ್ ಮಿ, ಒಪ್ಪೋ, ಸ್ಯಾಮ್​ಸಂಗ್, ಆ್ಯಪಲ್ ಕಂಪನಿ ಸೇರಿದಂತೆ ಅನೇಕ ಸ್ಮಾರ್ಟ್​ಫೋನ್​ಗಳು (Smartphone) ಊಹಿಸಲಾಗದ ರೀತಿಯ ಡಿಸ್ಕೌಂಟ್ ಪಡೆದುಕೊಳ್ಳಬಹುದು.

ಫ್ಲಿಪ್​ಕಾರ್ಟ್ ಬಿಗ್‌ ಸೇವಿಂಗ್‌ ಡೇಸ್​ನಲ್ಲಿ ಸ್ಮಾರ್ಟ್ ವಾಚ್‌ಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿಗಳನ್ನು ಘೋಷಿಸಿದೆ. ಟ್ರಿಮ್ಮರ್‌ಗಳು ಮತ್ತು ಶೇವರ್‌ಗಳ ಮೇಲೆ ಶೇಕಡಾ 70 ರಷ್ಟು ರಿಯಾಯಿತಿ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ನೀಡಿದೆ. ಒನ್​ಪ್ಲಸ್, ಬೋಟ್, ಜೆಬಿಎಲ್, ರಿಯಲ್ ಮಿ ಮತ್ತು ಹೆಚ್ಚಿನ ಬ್ರಾಂಡ್‌ಗಳಿಂದ ಪೋರ್ಟಬಲ್ ಸ್ಪೀಕರ್‌ಗಳು ಮತ್ತು ಹೆಡ್‌ಫೋನ್‌ಗಳು 80 ಪ್ರತಿಶತದಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ತಮ್ಮ ಹೋಳಿ ಶಾಪಿಂಗ್ ಅಗತ್ಯಗಳನ್ನು ಪೂರೈಸಲು, ಬಳಕೆದಾರರು ಹೋಳಿ ಹಬ್ಬಕ್ಕೆ ಬಟ್ಟೆಗಳನ್ನು 80 ಪ್ರತಿಶತದಷ್ಟು ರಿಯಾಯಿತಿಯಲ್ಲಿ ಖರೀದಿಸಬಹುದು. ಜೊತೆಗೆ ಮನೆ ಮತ್ತು ಅಡುಗೆಗೆ ಅಗತ್ಯ ವಸ್ತುಗಳ ಬೆಲೆ 99 ರೂ. ನಿಂದ ಪ್ರಾರಂಭವಾಗುತ್ತವೆ.

ಸ್ಮಾರ್ಟ್​ಫೋನ್ ವಿಚಾರಕ್ಕೆ ಬರುವುದಾದರೆ, ಮೋಟೋರೊಲಾ ಎಡ್ಜ್‌ 20 ಪ್ರೊ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ 32,999 ರೂ. ಗಳಿಗೆ ಲಭ್ಯವಾಗಲಿದೆ. ಈ ಫೋನ್‌ನ ಮೂಲ ಬೆಲೆ 36,999 ರೂ. ಆಗಿದೆ. ಇದಲ್ಲದೆ ಬ್ಯಾಂಕ್ ಆಫರ್‌ ಮೂಲಕ 32,249ರೂ. ಗಳಿಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 870SoC ಪ್ರೊಸೆಸರ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ f/1.9 ಲೆನ್ಸ್ ಹೊಂದಿದೆ. ಜೊತೆಗೆ 4,500mAh ಬ್ಯಾಟರಿಯನ್ನು ಒದಗಿಸಿದ್ದು, 30W ಟರ್ಬೊಪವರ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇದರ ಜೊತೆಗೆ ಮೋಟೋರೊಲಾ ಎಡ್ಜ್‌ 20 ಫೋನ್‌ ಡಿಸ್ಕೌಂಟ್‌ನಲ್ಲಿ 25,999 ರೂ. ಗಳಿಗೆ ದೊರೆಯಲಿದೆ. ಈ ಫೋನ್‌ನ ಮೂಲ ಬೆಲೆ 29,999 ರೂ. ಆಗಿದೆ. ಇದಲ್ಲದೆ ಬ್ಯಾಂಕ್‌ ಆಫರ್‌ ಮೂಲಕ ಈ ಸ್ಮಾರ್ಟ್‌ಫೋನ್‌ 25,249 ರೂ. ಗಳಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್​ನಿಂದ ಕೂಡಿದೆ.

Infinix X3: ಭಾರತದಲ್ಲಿ ಕೇವಲ 11,999 ರೂ. ಗೆ ಬಿಡುಗಡೆ ಆಗಿದೆ ಇನ್ಫಿನಿಕ್ಸ್ X3 ಸ್ಮಾರ್ಟ್​ ಟಿವಿ

Samsung Galaxy S22 series: ದುಬಾರಿ ಬೆಲೆಯ ಗ್ಯಾಲಕ್ಸಿ S22 ಸರಣಿಯ ಮೂರು ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯ

Follow Us
TV9 Web
TV9 Web

TV9 Kannada

Read More
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ