Infinix X3: ಭಾರತದಲ್ಲಿ ಕೇವಲ 11,999 ರೂ. ಗೆ ಬಿಡುಗಡೆ ಆಗಿದೆ ಇನ್ಫಿನಿಕ್ಸ್ X3 ಸ್ಮಾರ್ಟ್​ ಟಿವಿ

ಇನ್ಫಿನಿಕ್ಸ್​ ಕಂಪನಿ ಅಚ್ಚರಿ ಎಂಬಂತೆ ಅತ್ಯಂತ ಕಡಿಮೆ ಬೆಲೆಗೆ ಎರಡು ಮಾದರಿಯಲ್ಲಿ ಹೊಸ ಸ್ಮಾರ್ಟ್​ ಟಿವಿಯೊಂದನ್ನು ಲಾಂಚ್ ಮಾಡಿದೆ. ದೇಶದಲ್ಲಿ ತನ್ನ ನೂತನ ಆಂಡ್ರಾಯ್ಡ್ X3 (Infinix X3) ಸ್ಮಾರ್ಟ್ ಟಿವಿ ಸರಣಿಯನ್ನು ಪರಿಚಯಿಸಿದೆ.

Infinix X3: ಭಾರತದಲ್ಲಿ ಕೇವಲ 11,999 ರೂ. ಗೆ ಬಿಡುಗಡೆ ಆಗಿದೆ ಇನ್ಫಿನಿಕ್ಸ್ X3 ಸ್ಮಾರ್ಟ್​ ಟಿವಿ
Infinix X3 smart tv
Follow us
TV9 Web
| Updated By: Vinay Bhat

Updated on: Mar 11, 2022 | 2:53 PM

ಭಾರತದಲ್ಲೀಗ ಸ್ಮಾರ್ಟ್​ಫೋನ್​ಗಳ (smartphone) ಜೊತೆ ಸ್ಮಾರ್ಟ್​ ಟಿವಿಗಳ ಹಾವಳಿ ಕೂಡ ಜೋರಾಗಿದೆ. ಪ್ರಸಿದ್ಧ ಮೊಬೈಲ್ ತಯಾರಿಕ ಸಂಸ್ಥೆ ಸ್ಮಾರ್ಟ್​ ಟಿವಿಗಳನ್ನು ಕೂಡ ಬಿಡುಗಡೆ ಮಾಡುತ್ತಿದೆ. ಇದರ ನಡುವೆ ಇನ್ಫಿನಿಕ್ಸ್​ ಕಂಪನಿ ಅಚ್ಚರಿ ಎಂಬಂತೆ ಅತ್ಯಂತ ಕಡಿಮೆ ಬೆಲೆಗೆ ಎರಡು ಮಾದರಿಯಲ್ಲಿ ಹೊಸ ಸ್ಮಾರ್ಟ್​ ಟಿವಿಯೊಂದನ್ನು ಲಾಂಚ್ ಮಾಡಿದೆ. ದೇಶದಲ್ಲಿ ತನ್ನ ನೂತನ ಆಂಡ್ರಾಯ್ಡ್ X3 (Infinix X3) ಸ್ಮಾರ್ಟ್ ಟಿವಿ ಸರಣಿಯನ್ನು ಪರಿಚಯಿಸಿದೆ. ಹೊಸ ಇನ್ಫಿನಿಕ್ಸ್ ಆಂಡ್ರಾಯ್ಡ್ X3 ಸ್ಮಾರ್ಟ್ ಟಿವಿ ಸರಣಿಯಲ್ಲಿ 32-ಇಂಚಿನ ಮತ್ತು 43-ಇಂಚಿನ ಎರಡು ಸ್ಮಾರ್ಟ್‌ಟಿವಿಗಳನ್ನು (Smart TV)ಕಂಪೆನಿ ಪರಿಚಯಿಸಿದ್ದು, ಈ ಎರಡೂ ಟಿವಿಗಳು ಅತ್ಯಂತ ಅಗ್ಗದ ಬೆಲೆಯಲ್ಲಿ ಸಾಕಷ್ಟು ಫೀಚರ್ಸ್ ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಿವೆ.

ಇನ್ಫಿನಿಕ್ಸ್​ X3 32 ಇಂಚಿನ ಬೆಲೆ 11,999 ರೂ. ನಿಗದಿ ಮಾಡಲಾಗಿದೆ. 43 ಇಂಚಿನ ಟಿವಿಗೆ 19,999 ರೂ. ಇನ್ಫಿನಿಕ್ಸ್ X3 ಸ್ಮಾರ್ಟ್ ಟಿವಿ ಎರಡೂ ಮಾಡೆಲ್‌ಗಳು ಇದೇ ಮಾರ್ಚ್ 12 ಮತ್ತು ಮಾರ್ಚ್ 16 ರ ನಡುವೆ ದೇಶದ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಮೂಲಕ ಮುಂಗಡ ಬುಕಿಂಗ್‌ಗೆ ಲಭ್ಯವಿರುತ್ತವೆ ಎಂದು ಕಂಪೆನಿ ತಿಳಿಸಿದೆ. ಇನ್ನು ಆಂಡ್ರಾಯ್ಡ್ X3 ಸ್ಮಾರ್ಟ್‌ಟಿವಿಗಳ ಜೊತೆ ಬಿಡುಗಡೆಯ ಕೊಡುಗೆಯಾಗಿ 1,499 ರೂ. ಬೆಲೆ ಹೊಂದಿರುವ Infinix Snokor (iRocker) ಟ್ರೂ ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಬಡ್‌ಗಳನ್ನು ಕೇವಲ 1 ರೂಪಾಯಿಗೆ ನೀಡುವುದಾಗಿ ಕಂಪನಿ ತಿಳಿಸಿದೆ.

32-ಇಂಚಿನ ಟಿವಿ HD ಪರದೆಯೊಂದಿಗೆ ಬರುತ್ತದೆ. ಆದರೆ 43-ಇಂಚಿನ ಟಿವಿ ಪೂರ್ಣ HD ರೆಸಲ್ಯೂಶನ್‌ನೊಂದಿಗೆ ಬರುತ್ತದೆ. 32-ಇಂಚಿನ ಟಿವಿ 93 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬಂದರೆ 43-ಇಂಚಿನ ಟಿವಿ 96 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದೆ. X3 ಸ್ಮಾರ್ಟ್ ಟಿವಿಗಳು ಆಂಟಿ-ಬ್ಲೂ ರೇ ತಂತ್ರಜ್ಞಾನದಿಂದ ಚಾಲಿತವಾಗಿದ್ದು, ಅವುಗಳಿಂದ ಹೊರಸೂಸುವ ಹಾನಿಕಾರಕ ನೀಲಿ ಕಿರಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಒಂದು ಅವಧಿಯಲ್ಲಿ ಕಣ್ಣುಗಳ ಮೇಲೆ ಪರಿಣಾಮ ಬೀರುವ ಗಂಭೀರ ಹಾನಿಯನ್ನು ತಪ್ಪಿಸುತ್ತದೆ.

ಇನ್ನು ಈ ಎರಡೂ ಟಿವಿಗಳು 122 ಪರ್ಸೆಂಟ್ sRGB ಗ್ಯಾಮೆಟ್ ಕವರೇಜ್ ಮತ್ತು HDR10 ಬೆಂಬಲವನ್ನು ಹೊಂದಿವೆ. ನಾಲ್ಕು ಕಾರ್ಟೆಕ್ಸ್ A55 ಕೋರ್‌ಗಳೊಂದಿಗೆ ಕ್ವಾಡ್ ಕೋರ್ Realtek RTD2841 ಪ್ರೊಸೆಸರ್‌ನಿಂದ ಚಾಲಿತವಾಗಿವೆ ಮತ್ತು 1GB RAM ಮತ್ತು 8GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.ಎರಡೂ ಟಿವಿಗಳು 122 ಪರ್ಸೆಂಟ್ sRGB ಗ್ಯಾಮೆಟ್ ಕವರೇಜ್ ಮತ್ತು HDR10 ಬೆಂಬಲವನ್ನು ಪಡೆದುಕೊಂಡಿದೆ. ನಾಲ್ಕು ಕಾರ್ಟೆಕ್ಸ್ A55 ಕೋರ್‌ಗಳೊಂದಿಗೆ ಕ್ವಾಡ್ ಕೋರ್ Realtek RTD2841 ಪ್ರೊಸೆಸರ್‌ನಿಂದ ಚಾಲಿತವಾಗಿವೆ ಮತ್ತು 1GB RAM ಮತ್ತು 8GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.

ಇದಲ್ಲದೆ ಸ್ಟಿರಿಯೊ ಸ್ಪೀಕರ್ ಸೆಟಪ್ ಅನ್ನು ಹೊಂದಿವೆ ಎಂದು ಇನ್ಫಿನಿಕ್ಸ್ ಕಂಪೆನಿ ತಿಳಿಸಿದೆ. ಇದರಲ್ಲಿ 32-ಇಂಚಿನ ಮಾದರಿಯು 20W ಒಟ್ಟು ಔಟ್‌ಪುಟ್‌ನೊಂದಿಗೆ ಎರಡು ಬಾಕ್ಸ್ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಆದರೆ 43-ಇಂಚಿನ ಮಾದರಿಯು 36W ಒಟ್ಟು ಔಟ್‌ಪುಟ್‌ನೊಂದಿಗೆ ಎರಡು ಬಾಕ್ಸ್ ಸ್ಪೀಕರ್‌ಗಳು ಮತ್ತು ಎರಡು ಟ್ವೀಟರ್‌ಗಳನ್ನು ಒಳಗೊಂಡಿದೆ ಎಂದು ಕಂಪೆನಿ ತಿಳಿಸಿದೆ. ಎರಡೂ ಪರದೆಯ ಗಾತ್ರಗಳು ಡಾಲ್ಬಿ ಆಡಿಯೊವನ್ನು ಬೆಂಬಲಿಸುತ್ತವೆ. ಟಿವಿಯಲ್ಲಿನ ಸಂಪರ್ಕ ಆಯ್ಕೆಗಳಲ್ಲಿ ಮೂರು HDMI ಪೋರ್ಟ್‌ಗಳು, ಎರಡು USB ಪೋರ್ಟ್‌ಗಳು, ಈಥರ್ನೆಟ್ ಪೋರ್ಟ್, ಮಿನಿ YPbPr ವೀಡಿಯೊ ಔಟ್‌ಪುಟ್ ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ.

Samsung Galaxy S22 series: ದುಬಾರಿ ಬೆಲೆಯ ಗ್ಯಾಲಕ್ಸಿ S22 ಸರಣಿಯ ಮೂರು ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯ

OnePlus 9R: ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ ಒನ್​ಪ್ಲಸ್ 9R: ಖರೀದಿಸಲು ಸೂಕ್ತವೇ?