Amazon: ಅಮೆಜಾನ್ ಸೇಲ್ ಮುಕ್ತಾಯವಾಗಿದ್ದರೂ ಬಂಪರ್ ಡಿಸ್ಕೌಂಟ್​ಗೆ ಸಿಗುತ್ತಿದೆ ಈ ಫೋನ್​ಗಳು

| Updated By: Vinay Bhat

Updated on: Feb 01, 2022 | 1:30 PM

ನಿನ್ನೆಯಷ್ಟೆ ಅಮೆಜಾನ್​ನಲ್ಲಿ ಮೊಬೈಲ್‌ ಸೇವಿಂಗ್ಸ್‌ ಡೇಸ್ 2022 ಸೇಲ್‌ (Mobile Saving Days) ಮುಕ್ತಾಯಗೊಂಡಿದೆ. ಇದಾಗಿಯೂ ಸದ್ಯ ನೂತನ ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ.

Amazon: ಅಮೆಜಾನ್ ಸೇಲ್ ಮುಕ್ತಾಯವಾಗಿದ್ದರೂ ಬಂಪರ್ ಡಿಸ್ಕೌಂಟ್​ಗೆ ಸಿಗುತ್ತಿದೆ ಈ ಫೋನ್​ಗಳು
Amazon Smartphone Offer
Follow us on

ಜನಪ್ರಿಯ ಅಮೆಜಾನ್ (Amazon) ಪ್ಲಾಟ್‌ಫಾರ್ಮ್ ಏನಾದರೊಂದು ವಿಶೇಷ ಸೇಲ್‌ ಆಯೋಜಿಸುತ್ತಲೇ ಇರುತ್ತದೆ. ಮುಖ್ಯವಾಗಿ ಎಲೆಕ್ಟ್ರಾನಿಕ್ ಹಾಗೂ ಗ್ಯಾಡ್ಜೆಟ್ಸ್‌ಗಳಿಗೆ ವಿಶೇಷ ರಿಯಾಯಿತಿ ಸೇಲ್‌ ಅನ್ನು ಆಯೋಜಿಸಿ ಗಮನ ಸೆಳೆಯುತ್ತದೆ. ನಿನ್ನೆಯಷ್ಟೆ ಅಮೆಜಾನ್​ನಲ್ಲಿ ಮೊಬೈಲ್‌ ಸೇವಿಂಗ್ಸ್‌ ಡೇಸ್ 2022 ಸೇಲ್‌ (Mobile Saving Days) ಮುಕ್ತಾಯಗೊಂಡಿದೆ. ಇದಾಗಿಯೂ ಸದ್ಯ ನೂತನ ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಅಮೆಜಾನ್ ಪ್ಲಾಟ್‌ಫಾರ್ಮ್​​ನಲ್ಲಿ ಎಲ್ಲ ಮಾಡೆಲ್‌ಗಳ ಮೊಬೈಲ್‌ಗಳಿಗೂ ಆಕರ್ಷಕ ಕೊಡುಗೆ ಲಭ್ಯ ಮಾಡಿರುತ್ತದೆ. ಆ ಪೈಕಿ ಇತ್ತೀಚಿಗೆ ಬಿಡುಗಡೆ ಆಗಿರುವ ನೂತನ ಸ್ಮಾರ್ಟ್‌ಫೋನ್‌ಗಳ (Smartphone) ಮೇಲಂತೂ ಬಂಪರ್ ಬೆಸ್ಟ್‌ ಆಫರ್ ನೀಡಿರುತ್ತದೆ. ಹೆಚ್‌ಡಿ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌, ಆಕರ್ಷಕ ಕ್ಯಾಮೆರಾ, ಬಲಿಷ್ಠ ಬ್ಯಾಟರಿಯ ಫೋನುಗಳಿಗೂ ರಿಯಾಯಿತಿ ನೀಡಿದೆ. ಹಾಗಾದರೇ ಅಮೆಜಾನ್ ತಾಣದಲ್ಲಿ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿರುವ ಅತ್ಯುತ್ತಮ ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.

ಶಿಯೋಮಿ ಎಂಐ 11 ಲೈಟ್ NE 5G ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 6 GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯನ್ನು ಹೊಂದಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇದಲ್ಲದೆ 20 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ. ಇದರ ಮೂಲಬೆಲೆ 33,999 ರೂ. ಆದರೆ, ಸದ್ಯ ಆಫರ್​​ನಲ್ಲಿ ಕೇವಲ 26,999 ರೂ. ಗೆ ಸೇಲ್ ಆಗುತ್ತಿದೆ.

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಅನ್ನು ಹೊಂದಿದೆ. ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6 GB RAM + 64GB ಮತ್ತು 6GB + 128 GB ಆಗಿವೆ.‌ ಹಾಗೆಯೇ ಈ ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಹಾಗೆಯೇ 5,020 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಡಾರ್ಕ್‌ ನೈಟ್‌, ಗ್ಲಾಸಿಲ್‌ ಬ್ಲೂ ಹಾಗೂ ವಿಂಟೆಜ್ ಬ್ರಾನ್ಜ್ ಬಣ್ಣಗಳ ಆಯ್ಕೆ ಇದೆ. ಇದರ ಮೂಲಬೆಲೆ 19,999 ರೂ. ಆದರೆ, ಸದ್ಯ ಆಫರ್​​ನಲ್ಲಿ ಕೇವಲ 17,999 ರೂ. ಗೆ ಸೇಲ್ ಆಗುತ್ತಿದೆ.

ರೆಡ್ಮಿ ನೋಟ್ 10s ಸ್ಮಾರ್ಟ್‌ ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ AMOLED ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20: 9 ರಚನೆಯ ಅನುಪಾತ ವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದರ ಮೂಲಬೆಲೆ 16,999 ರೂ. ಆದರೆ, ಸದ್ಯ ಆಫರ್​​ನಲ್ಲಿ ಕೇವಲ 14,999 ರೂ. ಗೆ ಸೇಲ್ ಆಗುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಸ್ಮಾರ್ಟ್‌ ಫೋನ್‌ ಆಕ್ಟಾ ಕೋರ್‌ ಎಕ್ಸಿನೋಸ್‌ 850SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ನಲ್ಲಿ ಒನ್ ಯುಐ ಕೋರ್‌ ಬೆಂಬಲ ದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಇದು ಡ್ಯುಯಲ್ ಸಿಮ್ (ನ್ಯಾನೋ) ಸ್ಲಾಟ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ 4GB RAM + 64 GB ಮತ್ತು 6GB RAM + 128 GB ವೇರಿಯೆಂಟ್‌ ಆಯ್ಕೆಯ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವನ್ನು ಹೊಂದಿದೆ. ಹಾಗೆಯೇ ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಈ ಸ್ಮಾರ್ಟ್‌ ಫೋನ್‌ 6,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಮೂಲಬೆಲೆ 12,999 ರೂ. ಆದರೆ, ಸದ್ಯ ಆಫರ್​​ನಲ್ಲಿ ಕೇವಲ 11,499 ರೂ. ಗೆ ಸೇಲ್ ಆಗುತ್ತಿದೆ.

ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ 1,080×2,400 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.43 ಇಂಚಿನ Fluid AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಹೊಂದಿದೆ. ಅದರೊಂದಿಗೆ ಆಂಡ್ರಾಯ್ಡ್‌ ಆಕ್ಸಿಜೆನ್ 11.3 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ. ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ 65W Warp ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಇದರ ಮೂಲಬೆಲೆ 29,999 ರೂ. ಆಗಿದೆ.

ಮೊಬೈಲ್​ನಲ್ಲೇ ವೋಟರ್ ಐಡಿ ಡೌನ್​ಲೋಡ್ ಮಾಡೋದು ಹೇಗೆ? ಇಲ್ಲಿದೆ ಸರಳ ವಿಧಾನ