AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ಯಾರಾದರು ನಿಮ್ಮನ್ನ ಹೈಡ್ ಮಾಡಿ ವಾಟ್ಸ್​ಆ್ಯಪ್ ಸ್ಟೇಟಸ್ ಹಾಕಿದ್ದರೆ ಈ ಟ್ರಿಕ್​​ನಿಂದ ತಿಳಿಯಿರಿ

WhatsApp Tricks: ವಾಟ್ಸ್ಆ್ಯಪ್​ನಲ್ಲಿ ಸ್ಟೇಟಸ್ ಅಪ್ಲೋಡ್ ಮಾಡುವಾಗ ಯಾರಿಗೆ ಬೇಕು ಅವರಿಗೆ ಮಾತ್ರ ಕಾಣಿಸುವಂತೆ ಹಂಚಿಕೊಳ್ಳುವ ಆಯ್ಕೆ ಕೂಡ ಇದೆ. ಇದರಿಂದ ನಿಮ್ಮ ಸ್ನೇಹಿತರು ನಿಮಗೆ ಮಾತ್ರ ಕಾಣದಂತೆ ಹಾಗೂ ಉಳಿದವರೆಲ್ಲರಿಗೂ ಕಾಣುವಂತೆ ಸ್ಟೇಟಸ್ ಹಾಕಬಹುದು. ಹೀಗಿದ್ದಾಗ ಇದನ್ನು ನೋಡಲು ನಿಮಗೆ ವಾಟ್ಸ್​ಆ್ಯಪ್​ನಲ್ಲಿ ಸಾಧ್ಯವಿಲ್ಲ. ಆದರೆ, ಇದಕ್ಕೊಂದು ಟ್ರಿಕ್ ಇದೆ.

WhatsApp: ಯಾರಾದರು ನಿಮ್ಮನ್ನ ಹೈಡ್ ಮಾಡಿ ವಾಟ್ಸ್​ಆ್ಯಪ್ ಸ್ಟೇಟಸ್ ಹಾಕಿದ್ದರೆ ಈ ಟ್ರಿಕ್​​ನಿಂದ ತಿಳಿಯಿರಿ
WhatsApp Status Tricks
TV9 Web
| Edited By: |

Updated on: Feb 01, 2022 | 3:47 PM

Share

ಮೆಟಾ (Meta) ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ಇಂದು ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ಇದಕ್ಕೆ ಸೆಡ್ಡುಹೊಡೆಯುವಂತಹ ಯಾವುದೇ ಇತರೆ ಆ್ಯಪ್ ಬಂದರೂ ವಾಟ್ಸ್​ಆ್ಯಪ್ (WhatsApp) ತನ್ನ ಸ್ಥಾವನ್ನು ಇಷ್ಟರವರೆಗೆ ಬಿಟ್ಟುಕೊಟ್ಟಿಲ್ಲ. ಇದಕ್ಕಿಂತ ಆಕರ್ಷಕವಾದ ಫೀಚರ್​ಗಳು ಟೆಲಿಗ್ರಾಮ್ ಸೇರಿದಂತೆ ಇತರೆ ಮೆಸೇಜಿಂಗ್ ಆ್ಯಪ್​ಗಳಲ್ಲಿ ಇವೆ. ಆದರೆ, ವಾಟ್ಸ್​ಆ್ಯಪ್​ಗಿರುವಂತಹ ಕ್ರೇಜ್ ಮತ್ಯಾವುದಕ್ಕೂ ಇಲ್ಲ. ಇದಕ್ಕಾಗಿಯೇ ವಾಟ್ಸ್​ಆ್ಯಪ್ ಅನ್ನು ಹಿಂಬಾಲಿಸಿಕೊಂಡು ಅನೇಕ ಇತರೆ ಥರ್ಡ್ ಪಾರ್ಟಿ ಆ್ಯಪ್​ಗಳು ಕೂಡ ಹುಟ್ಟುಕೊಂಡಿವೆ. ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಅನುಕೂಲಕರ ಫೀಚರ್​​ಗಳನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್​ನಲ್ಲಿ ಸ್ಟೇಟಸ್ (WhatsApp Status) ಅಪ್ಲೋಡ್ ಮಾಡುವಾಗ ಯಾರಿಗೆ ಬೇಕು ಅವರಿಗೆ ಮಾತ್ರ ಕಾಣಿಸುವಂತೆ ಹಂಚಿಕೊಳ್ಳುವ ಆಯ್ಕೆ ಕೂಡ ಇದೆ.

ಹೌದು, ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್ ಹಂಚಿಕೊಳ್ಳುವ ಮುನ್ನ ಸೆಟ್ಟಿಂಗ್​ಗೆ ಹೋಗಿ ಅಲ್ಲಿ ನಾವು ಅಪ್ಲೋಡ್ ಮಾಡುವ ಸ್ಟೇಟಸ್ ಎಲ್ಲರಿಗೆ ಕಾಣಬೇಕಾ? ಅಥವಾ ಕೆಲವರಿಗೆ ಮಾತ್ರ ಕಾಣುವಂತೆ ಮಾಡಬೇಕಾ ಎಂಬ ಆಯ್ಕೆಯಿದೆ. ಇದರಿಂದ ನಿಮ್ಮ ಸ್ನೇಹಿತರು ನಿಮಗೆ ಮಾತ್ರ ಕಾಣದಂತೆ ಹಾಗೂ ಉಳಿದವರೆಲ್ಲರಿಗೂ ಕಾಣುವಂತೆ ಸ್ಟೇಟಸ್ ಹಾಕಬಹುದು. ಹೀಗಿದ್ದಾಗ ಇದನ್ನು ನೋಡಲು ನಿಮಗೆ ವಾಟ್ಸ್​ಆ್ಯಪ್​ನಲ್ಲಿ ಸಾಧ್ಯವಿಲ್ಲ. ಆದರೆ, ಇದಕ್ಕೊಂದು ಟ್ರಿಕ್ ಇದೆ. ಹೀಗೆ ಮಾಡಿದರೆ ನಿಮ್ಮನ್ನ ಹೈಡ್ ಮಾಡಿ ನಿಮ್ಮ ಸ್ನೇಹಿತರು ಸ್ಟೇಟಸ್ ಹಾಕಿದರೆ ಅದನ್ನು ನೋಡಬಹುದು.

ಆದರೆ, ಈ ಆಯ್ಕೆ ನೇರವಾಗಿ ವಾಟ್ಸ್​ಆ್ಯಪ್​ನಲ್ಲಿಲ್ಲ. ಬದಲಾಗಿ ಇದಕ್ಕೆ ಮೊದಲು ನೀವು ಥರ್ಡ್ ಪಾರ್ಟಿ ಆ್ಯಪ್​ವೊಂದನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು. ಅದೇ ಜಿಬಿ ವಾಟ್ಸ್ಆ್ಯಪ್ (GBWhatsApp). ಈ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಇನ್​ಸ್ಟಾಲ್ ಮಾಡಿದ ಬಳಿಕ ಆ್ಯಪ್ ಐಕಾಲ್ ಮೇಲೆ ಕ್ಲಿಕ್ ಮಾಡಿ. ಓಪನ್ ಆದ ಕೂಡಲೆ ಬಲ ಬದಿಯಲ್ಲಿರುವ ಮೂರು ಡಾಟ್ ಮೇಲೆ ಒತ್ತಿ. ಈ ಸಂದರ್ಭ ಕೆಳಗಡೆ ಹೈಡ್ ವೀವ್ ಸ್ಟೇಟಸ್ (Hide View Status) ಎಂಬ ಆಯ್ಕೆ ಕಾಣುತ್ತದೆ. ಇದನ್ನು ಒತ್ತಿದರೆ ನಿಮ್ಮನ್ನ ಹೈಡ್ ಮಾಡಿ ಸ್ಟೇಟಸ್ ಹಾಕಿದವರು ಯಾರು?, ಯಾವ ಸ್ಟೇಟಸ್ ಹಾಕಿದ್ದಾರೆ ಎಂಬುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮನ್ನ ಬ್ಲಾಕ್ ಮಾಡಿರುವವರ ಸ್ಟೇಟಸ್ ಕೂಡ ಇದರಲ್ಲಿ ನೋಡಬಹುದು.

ಆದರೆ, ಇದೊಂದು ಥರ್ಡ್ ಪಾರ್ಟಿ ಆ್ಯಪ್ ಆಗಿದ್ದು ಬಳಕೆ ಮಾಡುವ ಮುನ್ನ ಎಚ್ಚರವಹಿಸಿ. ಈ ಆ್ಯಪ್ ನಿಮ್ಮ ಖಾಸಗಿ ಮಾಹಿತಿಯನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೆ ಈ ಆಯ್ಕೆ ಜಿಬಿ ವಾಟ್ಸ್ಆ್ಯಪ್​ನ ನೂತನ ಆವೃತ್ತಿಯಲ್ಲಿ ಕೊಂಚ ಬದಲಾವಣೆ ಹೊಂದಿದೆ.

ಇದೇ ವಾಟ್ಸ್​ಆ್ಯಪ್​ನಲ್ಲಿ ನೀವು ನಿಮ್ಮ ಕಾಂಟ್ಯಾಕ್ಟ್​ನಲ್ಲಿರುವ ಸ್ನೇಹಿತರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ಅವರಿಗೆ ತಿಳಿಯದಂತೆ ವೀಕ್ಷಿಸಬಹುದಾಗಿದೆ.  ಇದಕ್ಕಾಗಿ ನಿಮ್ಮ ಫೋನಿನಲ್ಲಿನ ವಾಟ್ಸ್ಆ್ಯಪ್ ಅಪ್ಲಿಕೇಶನ್​ಗೆ ಹೋಗಿ ಸೆಟ್ಟಿಂಗ್ ಮೆನು ತೆರೆಯಿರಿ. ನಂತರ ಪ್ರೈವಸಿ ಸೆಟ್ಟಿಂಗ್ ಕೆಳಗೆ ಸ್ಕ್ರಾಲ್ ಮಾಡಿ. ನೀವು ಅಲ್ಲಿ ಕೆಲವು ಆಯ್ಕೆಗಳನ್ನು ನೋಡಲು ಸಾಧ್ಯವಾಗುತ್ತದೆ. ಸ್ಕ್ರೀನ್ ಕೆಳಭಾಗದಲ್ಲಿರುವ Read receipts ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ. ಅದನ್ನು ಸಕ್ರಿಯಗೊಳಿಸಿದ ನಂತರ, ನಿಮ್ಮ ಕಾಂಟ್ಯಾಕ್ಟ್​ನಲ್ಲಿರುವ ಬಳಕೆದಾರರ ವಾಟ್ಸ್ಆ್ಯಪ್ ಸ್ಟೇಟಸ್ ಅನ್ನು ನೀವು ವೀಕ್ಷಿಸಿದ್ದಿರಾ ಅಥವಾ ಇಲ್ಲವೇ ಎಂಬುದು ಅವರಿಗೆ ತಿಳಿಯುವುದಿಲ್ಲ. ನಿಮ್ಮ ಹೆಸರು ಅಲ್ಲಿ ಕಾಣುವುದಿಲ್ಲ.

Motorola Edge 30 Pro: ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಸಖತ್ ಸೌಂಡ್ ಮಾಡ್ತಿದೆ ಮೋಟೋ ಎಡ್ಜ್ 30 ಪ್ರೊ

Amazon: ಅಮೆಜಾನ್ ಸೇಲ್ ಮುಕ್ತಾಯವಾಗಿದ್ದರೂ ಬಂಪರ್ ಡಿಸ್ಕೌಂಟ್​ಗೆ ಸಿಗುತ್ತಿದೆ ಈ ಫೋನ್​ಗಳು

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ