ಮೊಬೈಲ್​ನಲ್ಲೇ ವೋಟರ್ ಐಡಿ ಡೌನ್​ಲೋಡ್ ಮಾಡೋದು ಹೇಗೆ? ಇಲ್ಲಿದೆ ಸರಳ ವಿಧಾನ

ಮೊಬೈಲ್​ನಲ್ಲೇ ವೋಟರ್ ಐಡಿ ಡೌನ್​ಲೋಡ್ ಮಾಡೋದು ಹೇಗೆ? ಇಲ್ಲಿದೆ ಸರಳ ವಿಧಾನ
ಸಾಂದರ್ಭಿಕ ಚಿತ್ರ

ಮತದಾರನು ತನ್ನ ಫೋನ್​ನಲ್ಲೇ ಇ-ಇಪಿಐಸಿಯನ್ನು ಡೌನ್​ಲೋಡ್ ಮಾಡಿಟ್ಟುಕೊಳ್ಳಬಹುದು ಅಥವಾ ಡಿಜಿ ಲಾಕರ್‌ನಲ್ಲಿ ಅಪ್‌ಲೋಡ್ ಮಾಡಿಡಬಹುದು.

TV9kannada Web Team

| Edited By: Zahir PY

Jan 31, 2022 | 5:40 PM

ಭಾರತೀಯರ ಗುರುತಿನ ಚೀಟಿಗಳಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಪಾಸ್‌ಪೋರ್ಟ್ ಪ್ರಮುಖವಾದವು. ಮತದಾರರ ಗುರುತಿನ ಚೀಟಿಯು ಮತವನ್ನು ಚಲಾಯಿಸಲು ಮಾತ್ರವಲ್ಲದೆ, ಇನ್ನಿತರ ಪುರಾವೆಗಳಿಗೆ ಅತ್ಯವಶ್ಯಕ. ಇದೀಗ ಸಾರ್ವತ್ರಿಕ ಚುನಾವಣೆ 2022 ಹತ್ತಿರದಲ್ಲಿದೆ. ಕೊರೋನಾ ಕಾರಣದಿಂದ ಸರ್ಕಾರಿ ಕಚೇರಿಗಳ ಸೇವೆಯಲ್ಲೂ ವಿಳಂಬವಾಗುತ್ತಿದೆ. ಆದರೆ ನೀವು ಮತದಾರರ ಗುರುತಿನ ಚೀಟಿಯನ್ನು ಪಡೆಯಬೇಕಿದ್ದರೆ, ಫೋನ್‌ನಲ್ಲೇ ಡೌನ್‌ಲೋಡ್ ಮಾಡಬಹುದು . ಇದಕ್ಕಾಗಿ ಭಾರತೀಯ ಚುನಾವಣಾ ಆಯೋಗವು ಕಳೆದ ವರ್ಷ ಇ-ಇಪಿಐಸಿ (ಎಲೆಕ್ಟ್ರಾನಿಕ್ ಎಲೆಕ್ಟೋರಲ್ ಫೋಟೋ ಐಡಿ ಕಾರ್ಡ್) ಸೇವೆಯನ್ನು ಆರಂಭಿಸಿದೆ.

ಮುಂದಿನ ತಿಂಗಳು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ವಿಧಾನಸಭಾ ಚುನಾವಣೆಗಳು ಆರಂಭವಾಗಲಿದ್ದು, ಮತದಾನ ಪ್ರಕ್ರಿಯೆಯಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಳ್ಳಲು ಮತದಾರರು ಸೇವೆಯನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. e-EPIC ನಿಮ್ಮ ಭೌತಿಕ ಮತದಾರರ ID ಕಾರ್ಡ್‌ನ ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (PDF) ಆಗಿದೆ. ಇದನ್ನು ನಿಮ್ಮ ಮೊಬೈಲ್​ನಲ್ಲಿ ಒಂದೇ ಕ್ಲಿಕ್‌ನಲ್ಲಿ ಡೌನ್‌ಲೋಡ್ ಮಾಡಬಹುದು .

e-EPIC ನ ಪ್ರಯೋಜನಗಳು: ಮತದಾರನು ತನ್ನ ಫೋನ್​ನಲ್ಲೇ ಇ-ಇಪಿಐಸಿಯನ್ನು ಡೌನ್​ಲೋಡ್ ಮಾಡಿಟ್ಟುಕೊಳ್ಳಬಹುದು ಅಥವಾ ಡಿಜಿ ಲಾಕರ್‌ನಲ್ಲಿ ಅಪ್‌ಲೋಡ್ ಮಾಡಿಡಬಹುದು. ಮತದಾರರ ಗುರುತಿನ ಚೀಟಿಯ ಡಿಜಿಟಲ್ ಆವೃತ್ತಿಯನ್ನು ಐಡಿಯಾಗಿ, ವಿಳಾಸದ ಪ್ರಮಾಣಪತ್ರ ಅಥವಾ ಯಾವುದೇ ಇತರ ಪರಿಶೀಲನೆ ಪ್ರಕ್ರಿಯೆಯಲ್ಲಿ ಬಳಸಬಹುದು. ಹೀಗೆ ಡಿಜಿಟಲ್ ಆವೃತ್ತಿಯ ಐಡಿ ಕಾರ್ಡ್ ಪಡೆಯಲು ನೀವು ಮಾಡಬೇಕಿರುವುದು ಇಷ್ಟೇ…

ಡಿಜಿಟಲ್ ವೋಟರ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ? ಹಂತ 1: https://voterportal.eci.gov.in ವೆಬ್​ಸೈಟ್​ಗೆ ಭೇಟಿ ನೀಡಿ.

ಹಂತ 2: ಅಲ್ಲಿ ಡೌನ್‌ಲೋಡ್ e-EPIC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 3: ನಿಮ್ಮ ಇ-EPIC ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ ಒಂದು-ಬಾರಿಯ ಪಾಸ್‌ವರ್ಡ್ (OTP) ಅನ್ನು ನೀಡಿ.

ಹಂತ 4: ಡೌನ್‌ಲೋಡ್ ಎಪಿಕ್ (EPIC ) ಮೇಲೆ ಕ್ಲಿಕ್ ಮಾಡಿ.

ದೇಶದ ಪ್ರತಿಯೊಬ್ಬ ಮತದಾರರು EPIC ಸಂಖ್ಯೆಯನ್ನು ಹೊಂದಿದ್ದಾರೆ. ಈ ಸರಳ ಹಂತಗಳೊಂದಿಗೆ e-EPIC ಕಾರ್ಡ್ ಅನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದು.

ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸುವುದು ಹೇಗೆ? ಹಂತ 1: KYC ಅನ್ನು ಪೂರ್ಣಗೊಳಿಸಲು e-KYC ಮೇಲೆ ಕ್ಲಿಕ್ ಮಾಡಿ.

ಹಂತ 2: ಫೇಸ್ ಲೈವ್​ನೆಸ್ ವೆರಿಫಿಕೇಶನ್​ ಮಾಡಿ. (KYC ಅನ್ನು ಪೂರ್ಣಗೊಳಿಸಲು ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್/ಲ್ಯಾಪ್‌ಟಾಪ್ ಅಗತ್ಯ.)

ಹಂತ 3: KYC ಪೂರ್ಣಗೊಳಿಸಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ.

ಹಂತ 4: ಇದಾದ ಬಳಿಕ ನೀವು e-EPIC ಅನ್ನು ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ:  IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(How to download voter ID on phone know the step by step process)

Follow us on

Related Stories

Most Read Stories

Click on your DTH Provider to Add TV9 Kannada