ಆಪಲ್ iOS 14.5 ಅಪ್​ಡೇಟ್ ಮಾಡಿಕೊಂಡು ಐಫೋನ್ 12 ಬಳಕೆದಾರರು 5G ನೆಟ್​ವರ್ಕ್ ಸಂಪರ್ಕ ಪಡೆಯಿರಿ

|

Updated on: Apr 28, 2021 | 6:19 PM

ಆಪಲ್​ನಿಂದ iOS 14.5 ಅಪ್​ಡೇಟ್ ಬಿಡುಗಡೆ ಮಾಡಲಾಗಿದ್ದು, ಇದನ್ನು ಡೌನ್​ಲೋಡ್​ ಮಾಡಿಕೊಳ್ಳುವ ಮೂಲಕ ಐಫೋನ್ 12 ಬಳಕೆದಾರರು 5G ನೆಟ್​ವರ್ಕ್ ಸಂಪರ್ಕ ಪಡೆಯಬಹುದು.

ಆಪಲ್ iOS 14.5 ಅಪ್​ಡೇಟ್ ಮಾಡಿಕೊಂಡು ಐಫೋನ್ 12 ಬಳಕೆದಾರರು  5G ನೆಟ್​ವರ್ಕ್ ಸಂಪರ್ಕ ಪಡೆಯಿರಿ
ಐಫೋನ್
Follow us on

ಆಪಲ್ ಕಂಪೆನಿಯಿಂದ ಎಲ್ಲ ಐಫೋನ್​ಗಳಿಗೆ iOS 14.5 ಅಪ್​ಡೇಟ್ ಬಿಡುಗಡೆ ಮಾಡಲಾಗಿದೆ. ಇದರಿಂದ 5G ನೆಟ್​ವರ್ಕ್​ಗೆ ಬದಲಾಗುವ ಸಾಮರ್ಥ್ಯ ಫೋನ್​ಗೆ ಬರುತ್ತದೆ. ಅಂದ ಹಾಗೆ iOS 14.5 ಅಪ್​ಡೇಟ್ ಮಾಡಿಕೊಳ್ಳುವ ಐಫೋನ್ 12 ಬಳಕೆದಾರರು ಈ ಹೊಸ ಫೀಚರ್ ಬಳಕೆಯನ್ನು ಶುರು ಮಾಡಬಹುದು. ಈ ಹೊಸ ಅಪ್​ಡೇಟ್​ನೊಂದಿಗೆ ಹೊಸ ತಲೆಮಾರಿನ ಐಫೋನ್ 12ರ ಇ-ಸಿಮ್ ಹಾಗೂ ಭೌತಿಕವಾದ SIM ಎರಡರ ಮೂಲಕವೂ 5G ನೆಟ್​ವರ್ಕ್ ಸಂಪರ್ಕವನ್ನು ಪಡೆಯಬಹುದು. ಈ ಹಿಂದೆ, ಎರಡು ಐಫೋನ್ 12ರಲ್ಲಿ ಎರಡು ಸಂಖ್ಯೆಯನ್ನು ಬಳಸುವ ಗ್ರಾಹಕರಿಗೆ LTE ಸೇವೆಗೆ ಲಾಕ್ ಆಗುತ್ತಿತ್ತು.

ಐಫೋನ್ XS ಮ್ಯಾಕ್ಸ್, XR ಈ ಎರಡು ಫೋನ್​ಗಳಲ್ಲಿ ಮೊದಲ ಬಾರಿಗೆ ಒಂದೇ ಸಾಧನದಲ್ಲಿ ಎರಡು ಸಂಖ್ಯೆಯನ್ನು ಬಳಸುವ ವೈಶಿಷ್ಟ್ಯದೊಂದಿಗೆ ಬಂದಿತು. ಇದರೊಂದಿಗೆ ಕೆಲಸ ಹಾಗೂ ವೈಯಕ್ತಿಕ ಹೀಗೆ ಎರಡು ಉದ್ದೇಶಗಳಿಗೆ ಸಿಮ್​ಗಳನ್ನು ಬಳಸಲು ಅನುಕೂಲ ಆಯಿತು. ಇನ್ನು ಆಪಲ್​ನಿಂದ ಐಫೋನ್​ 12ರಲ್ಲಿ ಸ್ಮಾರ್ಟ್ ಡೇಟಾ ಮೋಡ್ ಅನ್ನು ಉತ್ತಮಪಡಿಸಲಾಯಿತು. ಇದು ಸೆಟ್ಟಿಂಗ್ ಮೆನುದಲ್ಲಿರುವ ಸೆಲ್ಯುಲಾರ್ ಸೆಕ್ಷನ್​ನಲ್ಲಿ ಹಿಡನ್ ಆಯ್ಕೆಯಾಗಿರುತ್ತದೆ. ಇದು ತಾನಾಗಿಯೇ 5G ಮತ್ತು LTE ಆಯ್ಕೆಗಳಿಗೆ ತಾನಾಗಿಯೇ ಫೋನ್ ಬದಲಾಗುವಂತೆ ಮಾಡುತ್ತದೆ. ಅದು ಕೂಡ ಆಯಾ ಸಮಯದಲ್ಲಿ ಸಿಗುವ ಸೇವೆಯನ್ನು ಅವಲಂಬಿಸಿ, ಬದಲಾವಣೆ ಆಗುತ್ತದೆ. ಇದೀಗ iOS 14.5ರೊಂದಿಗೆ ಈ ಹಿಂದಿಗಿಂತ ಉತ್ತಮ ಬ್ಯಾಟರಿ ಲೈಫ್, ಪರ್ಫಾಮೆನ್ಸ್ ನೀಡಲಿದೆ.

ಮ್ಯಾಕ್​ರೂಮರ್ಸ್ ವರದಿ ಪ್ರಕಾರ, iOS 14.5 ಡೌನ್​ಲೋಡ್ ಮಾಡಿದಲ್ಲಿ T-Mobile ಬಳಕೆದಾರರು 5G ನೆಟ್​ವರ್ಕ್​ ಬಳಸಬಹುದು. ಮೆನುವಿನಲ್ಲಿ ಸ್ಮಾರ್ಟ್ ಡೇಟಾ ಮೋಡ್​ನಲ್ಲಿ T-Mobile ಬಳಕೆದಾರರು ಹೊಸ ಹಾಗೂ ವೇಗವಾದ 5G ಸ್ಟ್ಯಾಂಡ್ ಅಲೋನ್ ಮೋಡ್​ಗೆ ಈಗ ಬದಲಾಗಬಹುದು. ಇದಕ್ಕೂ ಮೊದಲು T-Mobile ಬಳಕೆದಾರರು, ಸ್ವಲ್ಪವಾದರೂ LTE ಅನ್ನು ಬಳಸದೆ 5G ಉಪಯೋಗಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: Apple products: ಆಪಲ್​ನಿಂದ ಹೊಸ ಐಪ್ಯಾಡ್​ ಪ್ರೋ ಸೇರಿ ಇನ್ನಷ್ಟು ಪ್ರಾಡಕ್ಟ್ ಬಿಡುಗಡೆ; ಭಾರತದಲ್ಲಿ ಯಾವುದರ ಬೆಲೆ ಎಷ್ಟು?

(Apple company rolled out iOS 14.5. iPhone 12 users by updating to this version, can access to 5G network. Here is the details)