ನಾನೊಂದು ಐಫೋನ್ (iPhone) ಖರೀದಿಸಬೇಕು ಎಂಬುದು ಹೆಚ್ಚಿನ ಮೊಬೈಲ್ ಪ್ರಿಯರ ಕನಸು. ಆದರೆ, ಅದರ ಬೆಲೆ ಗಗನದೆತ್ತರಕ್ಕೆ ಇರುತ್ತದೆ. ಇಎಮ್ಐನಲ್ಲಿ ಖರೀದಿಸೋಣ ಎಂದರೂ ಅದಕ್ಕೆ ಅಷ್ಟೊಂದು ಹಣ ಕಟ್ಟಬೇಕಲ್ಲ ಎಂಬ ಕೊರಗು ಇದ್ದೇ ಇರುತ್ತದೆ. ಆದರೆ, ಪ್ರಸಿದ್ಧ ಇ ಕಾಮರ್ಸ್ ತಾಣಗಳಲ್ಲಿ ನಡೆಯುವ ಮೇಳದಲ್ಲಿ ಆಫರ್ ಮೂಲಕ ಐಫೋನ್ ಖರೀದಿಸೋಣ ಎಂದು ಕಾದುಕುಳಿತರೆ ಅದರಲ್ಲಿ ದೊಡ್ಡ ಮಟ್ಟದ ಡಿಸ್ಕೌಂಟ್ ಸಿಗುವುದಿಲ್ಲ. ಆದರೆ, ಇದೀಗ ಐಫೋನ್ ಖರೀದಿಸಬೇಕು ಎಂಬವರಿಗೆ ಆ್ಯಪಲ್ ಕಂಪನಿ ಗುಡ್ ನ್ಯೂಸ್ ನೀಡಿದೆ. ತನ್ನ ಐಫೋನ್ 13 (iPhone 13) ಮೇಲೆ ಅಮೆಜಾನ್ ಇಂಡಿಯಾದಲ್ಲಿ (Amazon India) ಬರೋಬ್ಬರಿ 11,000 ರೂ. ಅನ್ನು ಕಡಿತಗೊಳಿಸಿ ಮಾರಾಟ ಮಾಡುತ್ತಿದೆ. ವಿಶೇಷ ಎಂದರೆ ಈ ಬೆಲೆ ಕಡಿತ ಐಫೋನ್ 13 ರ ಎಲ್ಲಾ ಸ್ಟೋರೇಜ್ ರೂಪಾಂತರಗಳಿಗೆ ಲಭ್ಯವಿದೆ. ಹಾಗಾದ್ರೆ ಈ ಐಫೋನ್ 13 ವಿಶೇಷತೆ ಏನು?, ಏನಿದು ಆಫರ್ ಎಂಬುದನ್ನು ನೋಡೋಣ.
ಆ್ಯಪಲ್ ಕಂಪೆನಿ ಐಫೋನ್13 ಮೇಲೆ 5,000 ರೂ. ಗಳ ಬೆಲೆ ಕಡಿತವನ್ನು ಮಾಡಿದೆ. ಜೊತೆಗೆ ಅಮೆಜಾನ್ ಪ್ಲಾಟ್‌ಫಾರ್ಮ್ ICICI ಬ್ಯಾಂಕ್ ಮತ್ತು SBI ಕ್ರೆಡಿಟ್ ಕಾರ್ಡ್ ಮೂಲಕ ಐಫೋನ್13 ಖರೀದಿಸುವವರಿಗೆ 6,000 ರೂ. ಗಳ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಕೂಡ ನೀಡುತ್ತಿದೆ. ಇದರಿಂದ ನೀವು ಐಫೋನ್ 13 ಮೇಲೆ 11,000 ರೂಪಾಯಿಗಳವರೆಗೆ ಬಿಗ್ ಡಿಸ್ಕೌಂಟ್ ಪಡೆಯಬಹುದಾಗಿದೆ. ಇದರಿಂದ ಐಫೋನ್ 13 128GB ಸ್ಟೋರೇಜ್ ರೂಪಾಂತರವು ಈಗ 79,900 ರೂ.ಗಳ ಬದಲಾಗಿ 74,900 ರೂ. ಗಳಿಗೆ ಲಭ್ಯವಾಗಲಿದೆ. ಕ್ಯಾಶ್‌ಬ್ಯಾಕ್ ಆಫರ್ ಕೂಡ ದೊರೆತರೆ ಕೇವಲ 68,900 ರೂ. ಗಳಿಗೆ ಐಫೋನ್ ನಿಮ್ಮದಾಗಿಸಬಹುದು.
ಅಂತೆಯೆ ಐಫೋನ್ 13 256GB ಮತ್ತು 512GB ರೂಪಾಂತರಗಳು ಈಗ ಕ್ರಮವಾಗಿ 84,900ರೂ. (89,900ರೂ. ಬದಲಿಗೆ) ಮತ್ತು 1,04,900 (1,09,900ರೂ. ಬದಲಿಗೆ) ರೂ.ಗಳಿಗೆ ಲಭ್ಯವಾಗಲಿದೆ. ICICI ಬ್ಯಾಂಕ್ ಮತ್ತು SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 256GB ಮತ್ತು 512GB ರೂಪಾಂತರಗಳಿಗೆ ಕ್ಯಾಶ್‌ಬ್ಯಾಕ್ ಆಫರ್ ದೊರೆಯಲಿದೆ. ಆಗ ಈ ಇವುಗಳ ಬೆಲೆ ಕ್ರಮವಾಗಿ 78,900ರೂ. ಮತ್ತು 98,900ರೂ. ಬೆಲೆಗೆ ಖರೀದಿಸಬಹುದಾಗಿದೆ. ಆದರೆ 90 ದಿನಗಳ ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ನಂತರವಷ್ಟೆ ಕ್ಯಾಶ್‌ಬ್ಯಾಕ್ ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.
ಐಫೋನ್ 13 ವಿಶೇಷತೆ ಬಗ್ಗೆ ಗಮನಿಸುವುದಾದರೆ, ಇದು ಫೋನ್ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್ ಹೊಂದಿದ್ದು, 1200 ನಿಟ್ಸ್ ಬ್ರೈಟ್ನೆಸ್ನಿಂದ ಕೂಡಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ.
ಕ್ಯಾಮೆರಾಕ್ಕೆ ಫೇಮಸ್ ಆಗಿರುವ ಐಫೋನ್ 13 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಇದು ಐಆರ್ ಆಧಾರಿತ ಫೇಸ್ ಐಡಿಯನ್ನು ಹೊಂದಿದೆ ಮತ್ತು ಮಿಂಚಿನ ಕೇಬಲ್ ಮೂಲಕ ಚಾರ್ಜ್ ಮಾಡುವ ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿರುವುದು ವಿಶೇಷ.
Poco M4 Pro 4G: ಭಾರತದಲ್ಲಿ ಪೋಕೋ M4 ಪ್ರೊ ಭರ್ಜರಿ ಸೇಲ್: ಫೆ. 28ಕ್ಕೆ 4G ಸಾಮರ್ಥ್ಯದಲ್ಲಿ ಮತ್ತೊಮ್ಮೆ ರಿಲೀಸ್
Published On - 2:07 pm, Thu, 24 February 22