Samsung Galaxy S22 Series: 12 ಗಂಟೆಗಳಲ್ಲಿ 70 ಸಾವಿರ ಬುಕಿಂಗ್: ಊಹಿಸಲಾಗದ ರೀತಿಯಲ್ಲಿ ಗ್ಯಾಲಕ್ಸಿಯ ಈ ಫೋನ್​ಗೆ ಬೇಡಿಕೆ

Samsung Galaxy S22, Galaxy S22+, Galaxy S22 Ultra pre-booking: ಫೆಬ್ರವರಿ 23 ರಿಂದ ಈ ಮೂರೂ ಫೋನಿನ ಪ್ರೀ ಬುಕ್ಕಿಂಗ್ ಭಾರತದಲ್ಲಿ ಪ್ರಾರಂಭವಾಗಿದೆ. ಮುಂಗಡ ಬುಕ್ಕಿಂಗ್ ಆರಂಭವಾಗಿದ್ದೇ ತಡ ದಾಖಲೆ ಎಂಬಂತೆ ಕೇವಲ 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 70,000 ಕ್ಕೂ ಹೆಚ್ಚು ಪ್ರಿ ಬುಕ್ಕಿಂಗ್ಗಳನ್ನು ಸ್ವೀಕರಿಸಿದೆ ಸ್ಯಾಮ್ಸಂಗ್ ಹೇಳಿದೆ.

TV9 Web
| Updated By: Vinay Bhat

Updated on:Feb 24, 2022 | 3:13 PM

ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಟೆಕ್ ಕಂಪನಿ ಸ್ಯಾಮ್ಸಂಗ್ ಈ ವರ್ಷದ ಬಹುನಿರೀಕ್ಷಿತ ಸ್ಯಾಮ್ಸಂಗ್ ಗ್ಯಾಲಕ್ಸಿ S22 (Samsung Galaxy S22 Series) ಸ್ಮಾರ್ಟ್​​ಫೋನ್​​ ಸರಣಿಯನ್ನು ಭಾರತದಲ್ಲಿ ಮೊನ್ನೆಯಷ್ಟೆ ಅನಾವರಣ ಮಾಡಿತ್ತು. ಇದರಲ್ಲಿ ಗ್ಯಾಲಕ್ಸಿ S22, ಗ್ಯಾಲಕ್ಸಿ S22 ಪ್ಲಸ್ ಮತ್ತು ಗ್ಯಾಲಕ್ಸಿ S22 ಅಲ್ಟ್ರಾ (Samsung Galaxy S22 Ultra) ಹೀಗೆ ಮೂರು ಮಾದರಿಯ ಫೋನ್​ಗಳಿಂದ ಕೂಡಿದೆ.

1 / 8
ನಿನ್ನೆಯಷ್ಟೆ ಅಂದರೆ ಫೆಬ್ರವರಿ 23 ರಿಂದ ಈ ಮೂರೂ ಫೋನಿನ ಪ್ರೀ ಬುಕ್ಕಿಂಗ್ ಭಾರತದಲ್ಲಿ ಪ್ರಾರಂಭವಾಗಿದೆ. ಮುಂಗಡ ಬುಕ್ಕಿಂಗ್ ಆರಂಭವಾಗಿದ್ದೇ ತಡ ದಾಖಲೆ ಎಂಬಂತೆ ಕೇವಲ 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 70,000 ಕ್ಕೂ ಹೆಚ್ಚು ಪ್ರಿ ಬುಕ್ಕಿಂಗ್​ಗಳನ್ನು ಸ್ವೀಕರಿಸಿದೆ ಸ್ಯಾಮ್ಸಂಗ್ ಹೇಳಿದೆ.

2 / 8
Galaxy S22 Ultra, Galaxy S22+ ಮತ್ತು Galaxy S22 ಅನ್ನು ಫೆಬ್ರವರಿ 23 ರಿಂದ ಮಾರ್ಚ್ 10 ರವರೆಗೆ ಪ್ರಮುಖ ಚಿಲ್ಲರೆ ಮಳಿಗೆಗಳು, Samsung Exclusive ಸ್ಟೋರ್​ಗಳು, Samsung ಆನ್​ಲೈನ್ ಸ್ಟೋರ್ ಮತ್ತು Amazon.in ನಲ್ಲಿ ಮುಂಗಡ ಬುಕ್ ಮಾಡಬಹುದು. ಭಾರತದಲ್ಲಿ ಬಿಡುಗಡೆಯಾದ Galaxy S22 ಸರಣಿಯು ಮಾರ್ಚ್ 11, 2022 ರಿಂದ ಮಾರಾಟವಾಗಲಿದೆ.

3 / 8
ಸ್ಯಾಮ್ಸಂಗ್ ಗ್ಯಾಲಕ್ಸಿ S22: ಈ ಸ್ಮಾರ್ಟ್​​ಫೋನ್​​ 6.1 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್ ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ 4nm ಸ್ನಾಪ್ ಡ್ರಾಗನ್ 8 Gen 1 SoC ಪ್ರೊಸೆಸರ್ ಬೆಂಬಲ ಪಡೆದುಕೊಂಡಿದೆ. ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಫೋನ್ 3,700mAh ಬ್ಯಾಟರಿ ಬ್ಯಾಕ್ಅಪ್ ಪಡೆದಿದೆ.

4 / 8
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಪ್ಲಸ್: ಇದು 6.6 ಇಂಚಿನ ಪೂರ್ಣ ಹೆಚ್ಡಿ ಪ್ಲಸ್ ಡೈನಾಮಿಕ್ AMOLED 2X ಡಿಸ್​ ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ 4nm SoC ಪ್ರೊಸೆಸರ್ ಬೆಂಬಲ ಹೊಂದಿದ್ದು, ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಅವು ಕ್ರಮವಾಗಿ 10 ಎಂಪಿ + 50 ಎಂಪಿ + 10 ಎಂಪಿ ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಹಾಗೆಯೇ ಈ ಫೋನ್ 4,500 mAh ಬ್ಯಾಟರಿ ಬ್ಯಾಕ್ಅಪ್ ಪಡೆದಿದ್ದು, 45W ವೈರ್ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್ಲೆಸ್ ಚಾರ್ಜಿಂಗ್​ಗಾಗಿ ವೈರ್ಲೆಸ್ ಪವರ್ಶೇರ್ ಅನ್ನು ಸಹ ಬೆಂಬಲಿಸುತ್ತದೆ.

5 / 8
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ: ಈ ಸ್ಮಾರ್ಟ್​​ಫೋನ್​​ 6.8 ಇಂಚಿನ ಎಡ್ಜ್ QHD ಡೈನಾಮಿಕ್ AMOLED 2X ಡಿಸ್ ಪ್ಲೇಯನ್ನು ಹೊಂದಿದ್ದು ಆಕ್ಟಾ ಕೋರ್ 4 nm SoC ಪ್ರೊಸೆಸರ್ ಬೆಂಬಲ ಪಡೆದುಕೊಂಡಿದೆ. ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಫೋನ್ 5,000mAh ಬ್ಯಾಟರಿ ಬ್ಯಾಕ್ಅಪ್ ಪಡೆದಿದ್ದು, 45W ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 15W ವೈರ್ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್ಲೆಸ್ ಚಾರ್ಜಿಂಗ್​ಗಾಗಿ ವೈರ್ಲೆಸ್ ಪವರ್ಶೇರ್ ಅನ್ನು ಸಹ ಬೆಂಬಲಿಸುತ್ತದೆ.

6 / 8
ಬೆಲೆ ಎಷ್ಟು?: ಸ್ಯಾಮ್ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ (12GB+512GB) — 118,999 ರೂ., ಸ್ಯಾಮ್ಸಂಗ್ ಗ್ಯಾಲಕ್ಸಿ S22 ಅಲ್ಟ್ರಾ (12GB+256GB) — Rs 109,999 ರೂ., ಸ್ಯಾಮ್ಸಂಗ್ ಗ್ಯಾಲಕ್ಸಿ S22+ (8GB+256GB) — Rs 88,999 ರೂ., ಸ್ಯಾಮ್ಸಂಗ್ ಗ್ಯಾಲಕ್ಸಿ S22+ (8GB+128GB) — Rs 84,999 ರೂ.

7 / 8
ಇನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆ (8GB+256GB) — Rs 76,999 ರೂ.,  ಸ್ಯಾಮ್ಸಂಗ್ ಗ್ಯಾಲಕ್ಸಿ S22 (8GB+128GB) – Rs 72,999 ರೂ.

8 / 8

Published On - 12:56 pm, Thu, 24 February 22

Follow us