Kannada News » Photo gallery » Man Of the Match Kannada movie actor Nataraj S Bhat new film poster launched by Daali Dhananjaya
ನಟರಾಜ್ ಜನ್ಮದಿನಕ್ಕೆ ಡಾಲಿ ನೀಡಿದ ಪೋಸ್ಟರ್ ಗಿಫ್ಟ್; ಹಲವು ಚಿತ್ರದಲ್ಲಿ ‘ರಾಮಾ ರಾಮಾ ರೇ’ ಕಲಾವಿದ ಬ್ಯುಸಿ
‘ರಾಮಾ ರಾಮಾ ರೇ’ ಸಿನಿಮಾ ಮೂಲಕ ಗಮನ ಸೆಳೆದ ನಟರಾಜ್ ಅವರು ಫೆ.23ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ಆ ಪ್ರಯುಕ್ತ ಅವರ ಗೆಳೆಯ ಡಾಲಿ ಧನಂಜಯ ಅವರು ಹೊಸ ಚಿತ್ರಗಳ ಪೋಸ್ಟರ್ ಬಿಡುಗಡೆ ಮಾಡಿದರು.
‘ರಾಮಾ ರಾಮಾ ರೇ’ ಸಿನಿಮಾ ಖ್ಯಾತಿಯ ಕಲಾವಿದ ನಟರಾಜ್ ಅವರಿಗೆ ಅನೇಕ ಅವಕಾಶಗಳು ಸಿಗುತ್ತಿವೆ. ಈಗ ಅವರ ‘ಮ್ಯಾನ್ ಆಫ್ ದಿ ಮ್ಯಾಚ್’, ‘ಮಾರೀಚ’ ಹಾಗೂ ‘ಕುಬುಸ’ ಸಿನಿಮಾಗಳು ರಿಲೀಸ್ಗೆ ಸಜ್ಜಾಗಿವೆ. ಈ ಚಿತ್ರಗಳ ಜೊತೆಗೆ ಮತ್ತೆ ಮೂರು ಸಿನಿಮಾಗಳನ್ನು ನಟರಾಜ್ ಒಪ್ಪಿಕೊಂಡಿದ್ದಾರೆ.
1 / 5
ಕನ್ನಡದ ಖ್ಯಾತ ಕಥೆಗಾರ ಕುಂ. ವೀರಭದ್ರಪ್ಪ ಅವರು ಬರೆದ ‘ಕುಬುಸ’ ಕಥೆ ಇದೇ ಹೆಸರಿನಲ್ಲಿ ಸಿನಿಮಾವಾಗುತ್ತಿದೆ. ಈ ಚಿತ್ರದಲ್ಲಿ ನಟರಾಜ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಎರಡು ಶೇಡ್ನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ರಮೇಶ್ ರೇಣುಕಾ ರಾಮ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
2 / 5
ನಟರಾಜ್ ಅವರ ಜನ್ಮದಿನದ ಸಲುವಾಗಿ ‘ಕುಬುಸ’ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ನಟ ಡಾಲಿ ಧನಂಜಯ ಅವರು ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಿನಿಮಾಗೆ ವಿ. ಶೋಭಾ ಶರ್ಮಾ ಬಂಡವಾಳ ಹಾಕಿದ್ದು, ಚೇತನ್ ಶರ್ಮಾ ಛಾಯಾಗ್ರಹಣ, ಪ್ರವೀಣ್ ಚಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.
3 / 5
ನಟರಾಜ್ ಅಭಿನಯದ ‘ಮಾರೀಚ’ ಸಿನಿಮಾಗೆ ಸುಧೀರ್ ಶಾನ್ ಬಾಗ್ ಸಿಂಗ್ ಆಕ್ಷನ್-ಕಟ್ ಹೇಳಿದ್ದಾರೆ. ಗೌತಮ್ ಜೋಶ್ನಾ ನಿರ್ಮಾಣ ಮಾಡಿದ್ದಾರೆ. ಗಣೇಶ್ ಛಾಯಾಗ್ರಹಣ ಹಾಗೂ ಸುನಾದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದೆ.
4 / 5
ನಟರಾಜ್ ಅವರು ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ಕಾನೂನು ಪದವಿ ಪಡೆದರೂ ಕೂಡ ಅವರನ್ನು ಹೆಚ್ಚಾಗಿ ಸೆಳೆದಿದ್ದು ಬಣ್ಣದ ಲೋಕ. ‘ರಾಮಾ ರಾಮಾರೇ’ ಚಿತ್ರದಿಂದ ಯಶಸ್ಸು ಪಡೆದ ಅವರು ಈಗ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.