iPhone SE 2022: ಭಾರತದಲ್ಲಿ ಹೊಸ ಅಪ್​ಗ್ರೇಡ್​​ನೊಂದಿಗೆ ಐಫೋನ್‌ SE 2022 ಖರೀದಿಗೆ ಲಭ್ಯ: ಬೆಲೆ ಎಷ್ಟು?

| Updated By: Vinay Bhat

Updated on: Mar 19, 2022 | 3:30 PM

ಆ್ಯಪಲ್ ಐಫೋನ್ ಎಸ್ಇ 2022 (iPhone SE 2022) ಇದೀಗ ಭಾರತದಲ್ಲಿ ಖರೀದಿಗೆ ಸಿಗುತ್ತಿದೆ. ಗ್ರಾಹಕರು ಕಂಪನಿಯ ಅಧಿಕೃತ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಐಫೋನ್ SE (2022) ತಮ್ಮದಾಗಿಸಬಹುದು.

iPhone SE 2022: ಭಾರತದಲ್ಲಿ ಹೊಸ ಅಪ್​ಗ್ರೇಡ್​​ನೊಂದಿಗೆ ಐಫೋನ್‌ SE 2022 ಖರೀದಿಗೆ ಲಭ್ಯ: ಬೆಲೆ ಎಷ್ಟು?
Apple iPhone SE 2022
Follow us on

ಇತ್ತೀಚೆಗಷ್ಟೆ ಆ್ಯಪಲ್ ಇವೆಂಟ್‌ (Apple Event) ನಲ್ಲಿ ಬಿಡುಗಡೆ ಆಗಿ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದ್ದ ಆ್ಯಪಲ್ ಐಫೋನ್ ಎಸ್ಇ 2022 (iPhone SE 2022) ಇದೀಗ ಭಾರತದಲ್ಲಿ ಖರೀದಿಗೆ ಸಿಗುತ್ತಿದೆ. ಗ್ರಾಹಕರು ಕಂಪನಿಯ ಅಧಿಕೃತ ಆನ್‌ಲೈನ್ ಸ್ಟೋರ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಐಫೋನ್ SE (2022) ತಮ್ಮದಾಗಿಸಬಹುದು. ಈ ಫೋನ್, 2020ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದ ಐಫೋನ್ ಎಸ್ಇ (iPhone SE 2020) ಯ ಮುಂದುವರಿದ ಆವೃತ್ತಿಯೇ ಆಗಿದ್ದು, ತಾಂತ್ರಿಕತೆಯಲ್ಲಿ ಸಾಕಷ್ಟು ಅಪ್‌ಗ್ರೇಡ್ ಕಾಣಬಹುದಾಗಿದೆ. ಈ ಹೊಸ ಫೋನಿನಲ್ಲಿ ನೀವು 5G ಕೆನಿಕ್ಟಿವಿಟಿ, A15 ಬಯೋನಿಕ್ ಚಿಪ್ ಬಳಸಲಾಗಿದೆ. ಇನ್ನು ಕ್ಯಾಮೆರಾ ಸೇರಿದಂತೆ ಸಾಕಷ್ಟು ಸುಧಾರಣೆಗಳನ್ನು ಕಾಣಬಹುದಾಗಿದೆ. ಈ ಐಫೋನ್ 64GB 128GB ಮತ್ತು 256GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ.

ಭಾರತದಲ್ಲಿ ಐಫೋನ್‌ SE (2022) ಬೆಲೆ 64GB ಮಾದರಿಗೆ 43,900 ರೂ. ನಿಗದಿ ಮಾಡಲಾಗಿದೆ. 128GB ವೇರಿಯಂಟ್‌ಗೆ 48,900 ರೂ. ಮತ್ತು 256GB ವೇರಿಯಂಟ್‌ಗೆ ಮಾದರಿಗೆ 58,900 ರೂ. ಇದೆ. ಹೊಸದಾಗಿ ಗ್ರೀನ್ ಬಣ್ಣದ ಆಯ್ಕೆ ಕೂಡ ಪಡೆದಿದೆ.

ಆ್ಯಪಲ್ ಐಫೋನ್ SE (2022) 4.7 ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750 x 1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರೆತೆಯು 326ppi ಆಗಿದ್ದು, 625 nits ವರೆಗೆ ಗರಿಷ್ಠ ಹೊಳಪನ್ನು ಹೊಂದಿದೆ

ಈ ಫೋನ್ A 15 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 15 ಬೆಂಬಲ ನೀಡಲಿದೆ. ಈ A 15 ಬಯೋನಿಕ್ ಚಿಪ್ ಅನ್ನು ನೀವು ಐಫೋನ್ 13 ಸೀರೀಸ್ ಸ್ಮಾರ್ಟ್‌ಫೋನುಗಳಲ್ಲಿ ಕಾಣಬಹುದು. ಐಫೋನ್ 8ನಲ್ಲಿ ಬಳಕೆಯಾಗಿದ್ದ ಪ್ರೊಸೆಸರ್‌ಗಿಂತಲೂ ಎ15 ಬಯೋನಿಕ್ ಚಿಪ್ ಬಳಕೆಯಾಗಿರುವ ಐಫೋನ್ ಎಸ್ಇ 2022 ಫೋನಿನ ಸಿಪಿಯು 1.8 ಪಟ್ಟು ಹೆಚ್ಚು ವೇಗವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿ ನೀವು ಲೈವ್ ಟೆಕ್ಸ್ಟ್ ಫೀಚರ್ ಕೂಡ ಕಾಣಬಹುದು.

ಇನ್ನು ಐಫೋನ್ SE (2022) ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದೆ. ಪ್ರಾಥಮಿಕ ಕ್ಯಾಮರಾವು 12 ಮೆಗಾ ಪಿಕ್ಸೆಲ್ ಸೆನ್ಸಾರ್ ಇದ್ದು, f/ 1.8 ಲೆನ್ಸ್‌ + ಒಐಎಸ್ ಹೊಂದಿದೆ. ಇದು ಡೀಪ್ ಫ್ಯೂಷನ್, ಸ್ಮಾರ್ಟ್ HDR 4 ಮತ್ತು ಫೋಟೋಗ್ರಾಫಿಕ್ ಸ್ಟೈಲ್ಸ್ ಸೇರಿದಂತೆ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು 60fps ವರೆಗೆ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಸೆಲ್ಫಿಗಾಗಿ ಮುಂಬಾಗದಲ್ಲಿ 7 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಸೆಲ್ಫಿ ಕ್ಯಾಮೆರಾವು ನ್ಯಾಚುರಲ್, ಸ್ಟುಡಿಯೋ, ಬಾಹ್ಯರೇಖೆ, ಹಂತ, ಸ್ಟೇಜ್ ಮೊನೊ ಮತ್ತು ಹೈ-ಕೀ ಮೊನೊ ಎಂಬ ಆರು ಪರಿಣಾಮಗಳೊಂದಿಗೆ ಪೋರ್ಟ್ರೇಟ್ ಲೈಟಿಂಗ್ ಅನ್ನು ಬೆಂಬಲಿಸುತ್ತದೆ.

ಈ ಫೋನಿನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿಯನ್ನ ಹಂಚಿಕೊಂಡಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋಈನ್ 5G, 4G VoLTE, Wi-Fi 5, ಬ್ಲೂಟೂತ್ v5, GPS/ A-GPS, NFC ಮತ್ತು ಲೈಟ್ನಿಂಗ್ ಪೋರ್ಟ್ ಸೇರಿದಂತೆ ಸಂಪರ್ಕ ಆಯ್ಕೆಗಳೊಂದಿಗೆ ಬರುತ್ತದೆ. ಹಾಗೆಯೇ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬ್ಯಾರೋಮೀಟರ್, ಮೂರು-ಆಕ್ಸಿಸ್ ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಗೈರೊಸ್ಕೋಪ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ.

Oppo A76: ಅತ್ಯಂತ ಕಡಿಮೆ ಬೆಲೆಗೆ ಭರ್ಜರಿ ಕ್ಯಾಮೆರಾ, ಬ್ಯಾಟರಿಯ ಒಪ್ಪೋ A76 ಫೋನ್ ಬಿಡುಗಡೆ