AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oppo K10: ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಬೊಂಬಾಟ್ ಕ್ಯಾಮೆರಾದ ಈ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್

Oppo K10 Specifications: ಇದೇ ಮಾರ್ಚ್ 23 ರಂದು ಭಾರತದಲ್ಲಿ ಹೊಸ ಒಪ್ಪೋ ಕೆ10 (Oppo K10) ಸ್ಮಾರ್ಟ್‌ಫೋನ್‌ ಅನಾವರಣಗೊಳ್ಳಲಿದೆ. ಎಂದಿನಂತೆ ಈ ಫೋನ್​ಗೆ ಕೂಡ ಬೊಂಬಾಟ್ ಕ್ಯಾಮೆರಾವನ್ನು (Camera) ಅಳವಡಿಸಲಾಗಿದೆ.

Oppo K10: ಭಾರತದಲ್ಲಿ ಧೂಳೆಬ್ಬಿಸಲು ಬರುತ್ತಿದೆ ಬೊಂಬಾಟ್ ಕ್ಯಾಮೆರಾದ ಈ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್
Oppo K10
TV9 Web
| Updated By: Vinay Bhat|

Updated on: Mar 20, 2022 | 2:16 PM

Share

ಭಾರತದಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನ್​ಗಳ ಮೂಲಕ ಸಾಕಷ್ಟು ಬಳಕೆದಾರರನ್ನು ಹೊಂದಿರುವ ಚೀನಾ ಮೂಲದ ಪ್ರಸಿದ್ಧ ಒಪ್ಪೋ ಕಂಪನಿ ಇದೀಗ ಮತ್ತೊಮ್ಮೆ ಧೂಳೆಬ್ಬಿಸಲು ಬರುತ್ತಿದೆ. ದೇಶದಲ್ಲಿ ಹೊಸ ಸ್ಮಾರ್ಟ್​​ಫೋನ್ (Smartphone) ಬಿಡುಗಡೆ ಮಾಡುವ ಬಗ್ಗೆ ಒಪ್ಪೋ ಮಾಹಿತಿ ಹಂಚಿಕೊಂಡಿದೆ. ಇದೇ ಮಾರ್ಚ್ 23 ರಂದು ಭಾರತದಲ್ಲಿ ಹೊಸ ಒಪ್ಪೋ ಕೆ10 (Oppo K10) ಸ್ಮಾರ್ಟ್‌ಫೋನ್‌ ಅನಾವರಣಗೊಳ್ಳಲಿದೆ. ಎಂದಿನಂತೆ ಈ ಫೋನ್​ಗೆ ಕೂಡ ಬೊಂಬಾಟ್ ಕ್ಯಾಮೆರಾವನ್ನು (Camera) ಅಳವಡಿಸಲಾಗಿದೆ. ಇಷ್ಟೇ ಅಲ್ಲದೆ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ ಪ್ರೊಸೆಸರ್‌, 5000mAh ಸಾಮರ್ಥ್ಯದ ದೀರ್ಘ ಬಾಳಿಕೆ ಬರುವ ಬ್ಯಾಟರಿಯನ್ನು ಕೂಡ ನೀಡಲಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟಿರಬಹುದು?, ಇತರೆ ವಿಶೇಷತೆ ಏನು ಎಂಬುದರ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

ಭಾರತದಲ್ಲಿ ಒಪ್ಪೋ K10 ಸ್ಮಾರ್ಟ್‌ಫೋನ್‌ ಒಂದು ಅಥವಾ ಎರಡು ಸ್ಟೋರೆಜ್ ಆಯ್ಕೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಬೆಲೆ ಅಂದಾಜಿ 20,000 ರೂ. ಒಳಗೆ ಎಂಬ ಮಾಹಿತಿಯಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ನ ನಿಖರವಾದ ಮಾರಾಟದ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಈ ಫೋನ್‌ ಭಾರತದಲ್ಲಿ ಮಾರ್ಚ್ 23 ರಂದು ಬಿಡುಗಡೆಗೊಂಡರೆ ಮಾರ್ಚ್ 29 ರಿಂದ  ಖರೀದಿಗೆ ಸಿಗಲಿದೆ.

ಒಪ್ಪೋ K10 ಸ್ಮಾರ್ಟ್‌ಫೋನ್‌ 1,080×1920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಒಳಗೊಂಡಿದೆ. 6nm ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 11 ನಲ್ಲಿ ColorOS 11.1 ಜೊತೆಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡಲಿದೆ.

ಈ ಫೋನಿನಲ್ಲಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಪ್ರಮುಖ ಹೈಲೇಟ್ ಆಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರಲಿದೆ. ಜೊತೆಗೆ 16 ಮೆಗಾಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 33W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುವ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದಲ್ಲದೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಕೂಡ ಅಳವಡಿಸಲಾಗಿದೆ.

ಒಪ್ಪೋ ಕಂಪನಿ ಮೊನ್ನೆಯಷ್ಟೆ ಭಾರತದಲ್ಲಿ ಒಪ್ಪೋ A76 ಹೆಸರಿನ ಫೋನ್ ಅನ್ನು ಲಾಂಚ್ ಮಾಡಿತ್ತು. ಇದರ 6GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ಕೇವಲ 17,499 ರೂ. ನಿಗದಿ ಮಾಡಲಾಗಿದೆ. ಈ ಫೋನ್ 720×1,612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.56 ಇಂಚಿನ HD+ ಡಿಸ್ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ f/2.2 ಲೆನ್ಸ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಜೊತೆಗೆ f/2.4 ಲೆನ್ಸ್ ಹೊಂದಿದೆ. ಇದಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W SuperVOOC ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ.

Realme GT Neo 3: 150W ಫಾಸ್ಟ್ ಚಾರ್ಜರ್​​ನ ಮೊದಲ ಫೋನ್: ರಿಯಲ್ ಮಿ GT Neo 3 ಬಿಡುಗಡೆಗೆ ಸಿದ್ಧತೆ

2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ