AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Airtel: ದಿನಕ್ಕೆ 3GB ಡೇಟಾ: ಏರ್ಟೆಲ್​ನ ಈ ಪ್ಲಾನ್ ಹಾಕಿಸಿಕೊಂಡರೆ ಸಿಗಲಿದೆ ಭರ್ಜರಿ ಆಫರ್

Best Prepaid Plans: ಏರ್ಟೆಲ್​ ಟೆಲಿಕಾಂ ಭಿನ್ನ ಶ್ರೇಣಿಯ ಪ್ರಿಪೇಯ್ಡ್‌ ಪ್ಲಾನ್‌ಗಳ ಆಯ್ಕೆ ಪಡೆದಿದೆ. ಆ ಪೈಕಿ ಡೈಲಿ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ 699 ರೂ. ಮತ್ತು 599 ರೂ. ಯೋಜನೆಗಳು ಆಕರ್ಷಕ ಎನಿಸಿವೆ.

Airtel: ದಿನಕ್ಕೆ 3GB ಡೇಟಾ: ಏರ್ಟೆಲ್​ನ ಈ ಪ್ಲಾನ್ ಹಾಕಿಸಿಕೊಂಡರೆ ಸಿಗಲಿದೆ ಭರ್ಜರಿ ಆಫರ್
Airtel
Follow us
TV9 Web
| Updated By: Vinay Bhat

Updated on: Oct 25, 2022 | 6:10 AM

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ (Jio) ಹಾಗೂ ಏರ್ಟೆಲ್ (Airtel) ನಡುವಣ ಪೈಪೋಟಿ ಮುಂದುವರೆದಿದೆ. ನಂಬರ್ ಒನ್ ಸ್ಥಾನಕ್ಕಾಗಿ ಹೋರಾಡುತ್ತಿರುವ ಏರ್ಟೆಲ್ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇದರ ನಡುವೆ ಎರಡೂ ಕಂಪನಿಗಳು 5ಜಿ ಸೇವೆ ನೀಡುವುದರಲ್ಲಿ ಬ್ಯೂಸಿಯಾಗಿದೆ. ಜೊತೆಗೆ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ. ಬೆಲೆ ಹೆಚ್ಚಳ ಮಾಡಿದ್ದರೂ ತನ್ನ ಪ್ಲಾನ್​ನ ಜೊತೆಗೆ ಇತರೆ ವಿಶೇಷ ಆಫರ್​ಗಳನ್ನು ನೀಡುತ್ತಿರುವ ಏರ್ಟೆಲ್​ನ ಯೋಜನೆಗಳು ಹೆಚ್ಚಿನವರ ಗಮನ ಸೆಳೆಯುತ್ತಿವೆ. ಆ ಪೈಕಿ ಹಲವು ಪ್ಲಾನ್‌ಗಳು ಅಧಿಕ ಡೈಲಿ ಡೇಟಾ ಪಡೆದಿವೆ. ಏರ್ಟೆಲ್​ ಟೆಲಿಕಾಂ ಭಿನ್ನ ಶ್ರೇಣಿಯ ಪ್ರಿಪೇಯ್ಡ್‌ ಪ್ಲಾನ್‌ಗಳ (Prepaid Plans) ಆಯ್ಕೆ ಪಡೆದಿದೆ. ಆ ಪೈಕಿ ಡೈಲಿ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ 699 ರೂ. ಮತ್ತು 599 ರೂ. ಯೋಜನೆಗಳು ಆಕರ್ಷಕ ಎನಿಸಿವೆ. ಈ ಎರಡೂ ಯೋಜನೆಗಳು ಹೆಚ್ಚಿನ ಡೇಟಾ, ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್‌ ಹಾಗೂ ಆಕರ್ಷಕ ವ್ಯಾಲಿಡಿಟಿ ಪ್ರಯೋಜನಗಳನ್ನು ಒಳಗೊಂಡಿವೆ.

ಏರ್ಟೆಲ್​ ಜನಪ್ರಿಯ ಪ್ರಿಪೇಡ್‌ ಪ್ಲಾನ್‌ಗಳಲ್ಲಿ ಒಂದಾಗಿರುವ 699 ರೂ. ಯೋಜನೆ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಪಡೆಯಬಹುದು. ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ, ಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯವಾಗುತ್ತವೆ.

ಏರ್ಟೆಲ್​ ಟೆಲಿಕಾಂನ 599 ರೂ. ಪ್ರಿಪೇಯ್ಡ್‌ ಪ್ಲಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ. ಹಾಗೂಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ಇದನ್ನೂ ಓದಿ
Image
WhatsApp: ದೀಪಾವಳಿ ದಿನವೇ ಐಫೋನ್-ಆಂಡ್ರಾಯ್ಡ್ ಬಳಕೆದಾರರಿಗೆ ಶಾಕ್ ನೀಡಿದ ವಾಟ್ಸ್​ಆ್ಯಪ್
Image
Galaxy S23 Ultra: ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಸರಣಿ ಬಗ್ಗೆ ಹೊರಬಿತ್ತು ಮತ್ತೊಂದು ಶಾಕಿಂಗ್ ವಿಚಾರ: ಪ್ರೊಸೆಸರ್ ಯಾವುದು?
Image
Tech Tips: ಯೂಟ್ಯೂಬ್​ನಲ್ಲಿ ವಿಡಿಯೋ ನೋಡುವಾಗ ಜಾಹೀರಾತು ಬಾರದಂತೆ ಮಾಡುವುದು ಹೇಗೆ?: ಇಲ್ಲಿದೆ ಟ್ರಿಕ್
Image
Google Photos: ಗೂಗಲ್ ಫೋಟೋಸ್​ನಿಂದ ಡಿಲೀಟ್ ಆದ ಫೈಲ್​ಗಳನ್ನು ಮರಳಿ ಪಡೆಯುವುದು ಹೇಗೆ?

ಇನ್ನು 666 ರೂ. ಪ್ಲಾನ್ ಕೂಡ ಆಕರ್ಷಕ ಎನಿಸಿದೆ. ಇದು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 1.5GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

479 ರೂ. ಪ್ರಿಪೇಯ್ಡ್ ಪ್ಲಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 1.5GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳನ್ನು ನೀಡಲಾಗಿದೆ.

ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ