Battlegrounds Mobile India: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆ ದಿನಾಂಕದ ಮಾಹಿತಿ ಮತ್ತೊಮ್ಮೆ ಸೋರಿಕೆ

|

Updated on: May 28, 2021 | 12:26 PM

ಪಬ್​ಜಿ ಗೇಮ್​ನ ಹೊಸ ಅವತಾರವಾದ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾದ ಬಿಡುಗಡೆ ದಿನಾಂಕದ ಮಾಹಿತಿ ಮತ್ತೊಮ್ಮೆ ಸೋರಿಕೆ ಆಗಿದೆ.

Battlegrounds Mobile India: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆ ದಿನಾಂಕದ ಮಾಹಿತಿ ಮತ್ತೊಮ್ಮೆ ಸೋರಿಕೆ
ಪ್ರಾತಿನಿಧಿಕ ಚಿತ್ರ
Follow us on

ಲಕ್ಷಾಂತರ ಮಂದಿ ಭಾರತೀಯರು ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್​ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದನ್ನು ಪಬ್​ಜಿ ಮೊಬೈಲ್ ಇಂಡಿಯಾದ ಮತ್ತೊಂದು ವರ್ಷನ್ ಆಗಿ ನೋಡಲಾಗುತ್ತಿದೆ. ಮುಂಬರುವ ಗೇಮ್​ನ ಬಿಡುಗಡೆ ದಿನಾಂಕ ಮತ್ತೊಮ್ಮೆ ಸೋರಿಕೆ ಆಗಿದೆ. ಸದ್ಯಕ್ಕೆ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾವು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಪ್ರೀ- ರಿಜಿಸ್ಟ್ರೇಷನ್​ಗೆ ಲಭ್ಯವಿದೆ. ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದದ್ದು ಏನೆಂದರೆ, ಸೆಪ್ಟೆಂಬರ್ 4, 2020ರಲ್ಲಿ ಮಾಹಿತಿ ಸೋರಿಕೆ ಆತಂಕದಿಂದ ಭಾರತ ಸರ್ಕಾರವು ಪಬ್​ಜಿ ಗೇಮ್ ನಿಷೇಧಿಸಿತ್ತು. ಇದೀಗ ಹತ್ತಿರಹತ್ತಿರ ವರ್ಷದ ನಂತರ ಗೇಮ್ ಡೆವಲಪರ್​ ಆದ ಕ್ರಾಫ್ಟನ್​ನಿಂದ ಗೇಮ್ ರೀಲಾಂಚ್ ಆಗುತ್ತಿದೆ. ಈ ಸಲ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಅಂತ ಹೆಸರು ಬದಲಿಸಲಾಗಿದೆ. ಸದ್ಯದಲ್ಲೇ ಬಿಡುಗಡೆ ಆಗಲಿದೆ.

ಬ್ಯಾಟಲ್​ಗ್ರೌಂಡ್ಸ್​ ಇಂಡಿಯಾ ಮೊಬೈಲ್​ಗೆ ಸಂಬಂಧಿಸಿದ ಆಂತರಿಕ ಮಾಹಿತಿಯ ಪ್ರಕಾರ, ಜೂನ್ ತಿಂಗಳ ಮೂರನೇ ವಾರದಲ್ಲಿ ಈ ಗೇಮ್​ ಬಿಡುಗಡೆ ಆಗಲಿದೆ. ಅಭಿಜಿತ್ ಅಂಧರೆ ಅವರು ಊ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜೂನ್ ಮೂರನೇ ವಾರದಲ್ಲಿ ಬ್ಯಾಟಲ್​ಗ್ರೌಂಡ್ಸ್ ಇಂಡಿಯಾ ಮೊಬೈಲ್ ಬಿಡುಗಡೆ ಆಗುತ್ತದೆ ಎಂದಿದ್ದಾರೆ. ಜೂನ್ 13ರಿಂದ 19ನೇ ತಾರೀಕಿನ ಮಧ್ಯೆ ಗೇಮ್ ಬಿಡುಗಡೆ ಮಾಡುವುದಕ್ಕೆ ಕ್ರಾಫ್ಟನ್ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ. ಇನ್ನಷ್ಟು ವರದಿಗಳು ಹೇಳಿಕೊಂಡಿರುವಂತೆ ಬ್ಯಾಟಲ್​ಗ್ರೌಂಡ್ಸ್ ಗೇಮ್ ಜೂನ್ 18ನೇ ತಾರೀಕಿಗೆ ಬಿಡುಗಡೆ ಆಗಲಿದೆ. ಇನ್ನೂ ಕೆಲ ಈ ಗೇಮಿಂಗ್​ನ ಅಭಿಮಾನಿಗಳು ಜೂನ್ 10ನೇ ತಾರೀಕು ಬಿಡುಗಡೆ ಆಗಲಿದೆ ಎಂದು ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಕ್ರಾಫ್ಟನ್​ನಿಂದ ಪೋಸ್ಟರ್​ ಬಿಡುಗಡೆ ಆದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈ ಪೋಸ್ಟರ್​ನಲ್ಲಿ ಸೂರ್ಯಗ್ರಹಣವನ್ನು ತೋರಿಸುವ ರೀತಿಯಲ್ಲಿ ರೂಪಿಸಲಾಗಿತ್ತು. ಮುಂದಿನ ಸೂರ್ಯ ಗ್ರಹಣ ಜೂನ್ 10ನೇ ತಾರೀಕಿಗೆ ಇದೆ. ಆದರೆ ಕ್ರಾಫ್ಟನ್​ನಿಂದ ಅಧಿಕೃತವಾಗಿ ಯಾವುದೇ ಹೇಳಿಕೆ ಕೂಡ ಬಂದಿಲ್ಲ. ​​

ಇದನ್ನೂ ಓದಿ: Battlegrounds Mobile India: ಅಧಿಕೃತವಾಗಿ ವಾಪಸ್​ ಆದ PUBG; ಪ್ರೀ ರಿಜಿಸ್ಟ್ರೇಷನ್ ಹೇಗೆ?

(Krafton developed Battlegrounds mobile India game launch date in India leaked once again. Here is the details)