Tecno Spark 10 4G: ಮಾರುಕಟ್ಟೆಗೆ ಎಂಟ್ರಿಕೊಟ್ಟ ಟೆಕ್ನೋ ಸ್ಪಾರ್ಕ್‌ 10 ಸ್ಮಾರ್ಟ್​ಫೋನ್: ಇದು ಬಜೆಟ್ ಬೆಲೆಯ ಬಂಪರ್ ಫೋನ್

|

Updated on: Apr 27, 2023 | 2:44 PM

ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಟೆಕ್ನೋ ಸ್ಪಾರ್ಕ್‌ 10 (Tecno Spark 10 4G) ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ದೀರ್ಘ ಬಾಳಿಕೆ ಬೊಂಬಾಟ್ ಬ್ಯಾಟರಿಯನ್ನು ಹೊಂದಿದೆ.

Tecno Spark 10 4G: ಮಾರುಕಟ್ಟೆಗೆ ಎಂಟ್ರಿಕೊಟ್ಟ ಟೆಕ್ನೋ ಸ್ಪಾರ್ಕ್‌ 10 ಸ್ಮಾರ್ಟ್​ಫೋನ್: ಇದು ಬಜೆಟ್ ಬೆಲೆಯ ಬಂಪರ್ ಫೋನ್
Tecno Spark 10 4G
Follow us on

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚು ಬಜೆಟ್ ಬೆಲೆಯ ಮೊಬೈಲ್​ಗಳಿಗೆ ಹೆಸರುವಾಸಿಯಾಗಿರುವ ಟೆಕ್ನೋ ಕಂಪನಿ ಇದೀಗ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಒಂದನ್ನು ಅನಾವರಣ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಟೆಕ್ನೋ ಸ್ಪಾರ್ಕ್‌ 10 (Tecno Spark 10 4G) ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ದೀರ್ಘ ಬಾಳಿಕೆ ಬೊಂಬಾಟ್ ಬ್ಯಾಟರಿ ಬ್ಯಾಕಪ್ ಹೊಂದಿದ್ದು ಕೃತಕ ಬುದ್ಧಿಮತ್ತೆ (AI) ಆಧಾರಿತ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು (Camera) ಒಳಗೊಂಡಿದೆ. 90Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಈ ಫೋನಿನ ಮತ್ತೊಂದು ಹೈಲೇಟ್. ಬಜೆಟ್ ಪ್ರಿಯರ ನಿದ್ದೆಕದ್ದಿರುವ ಈ ಫೋನಿನ ವಿಶೇಷತೆ ಏನು?, ಯಾವಾಗ ಮಾರಾಟ? ಎಂಬ ಬಗೆಗಿನ ವಿವರ ಇಲ್ಲಿದೆ.

ಟೆಕ್ನೋ ಸ್ಪಾರ್ಕ್‌ 10 (4G) ಸ್ಮಾರ್ಟ್‌ಫೋನ್‌ ಭಾರತಕ್ಕೆ ಇನ್ನಷ್ಟೆ ಕಾಲಿಡಬೇಕಿದೆ. ದೇಶಧಲ್ಲಿ ಇದರ ಬೆಲೆ 15,000 ರೂ. ಒಳಗಡೆ ಇರಬಹುದು ಎಂದು ಅಂದಾಜಿಸಲಾಗಿದೆ. ಇದು ಮೆಟಾ ವೈಟ್, ಮೆಟಾ ಬ್ಲೂ ಮತ್ತು ಮೆಟಾ ಬ್ಲ್ಯಾಕ್ ಬಣ್ಣಗಳ ಮೂಲಕ ಅನಾವರಣಗೊಂಡಿದೆ. ಈ ಫೋನಿನ ಫೀಚರ್ಸ್ ನೋಡುವುದಾದರೆ, ಇದು 720 x 1612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌, 120Hz ಟಚ್ ಸ್ಯಾಪ್ಲಿಂಗ್‌ ರೇಟ್​ನಿಂದ ಕೂಡಿದೆ.

Google Pixel 6a: ಕೇವಲ 749 ರೂ. ಗೆ ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್​ಫೋನ್ ಖರೀದಿಸಿ: ಈ ಬಂಪರ್ ಆಫರ್ ಮಿಸ್ ಮಾಡ್ಬೇಡಿ

ಇದನ್ನೂ ಓದಿ
Mobile Blast: ಮನಕಲಕುವ ಘಟನೆ: ರೆಡ್ಮಿ ಸ್ಮಾರ್ಟ್​ಫೋನ್​ ಸ್ಪೋಟಗೊಂಡು 8 ವರ್ಷದ ಬಾಲಕಿ ದುರ್ಮರಣ: ಎಚ್ಚರ ವಹಿಸಿ
Vivo X90 Pro: 120W ಫಾಸ್ಟ್ ಚಾರ್ಜರ್, ಅದ್ಭುತ ಕ್ಯಾಮೆರಾ: ಸದ್ದಿಲ್ಲದೆ ವಿವೋದಿಂದ ಎರಡು ಹೊಸ ಸ್ಮಾರ್ಟ್​ಫೋನ್ ಬಿಡುಗಡೆ
Vivo Y78+ 5G: ಮಾರುಕಟ್ಟೆಗೆ ಎಂಟ್ರಿಕೊಟ್ಟ ವಿವೊ Y78+ 5G ಸ್ಮಾರ್ಟ್‌ಫೋನ್‌: ಏನು ವಿಶೇಷತೆ?, ಬೆಲೆ ಎಷ್ಟು?
WhatsApp New Feature: ಇನ್ನು ಒಂದೇ ವಾಟ್ಸ್​ಆ್ಯಪ್ ಖಾತೆ ನಾಲ್ಕು ಫೋನ್​ಗಳಲ್ಲಿ ಬಳಸಬಹುದು!

ಬೆಲೆಗೆ ತಕ್ಕಂತೆ ಟೆಕ್ನೋ ಸ್ಪಾರ್ಕ್‌ 10 4G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G37 ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ವಿಶೇಷ ಎಂದರೆ ಈ ಫೋನ್​ನಲ್ಲಿ ವರ್ಚುವಲ್ RAM ಅನ್ನು 8GB ವರೆಗೆ ವಿಸ್ತರಿಸಬಹುದಾದ ಆಯ್ಕೆ ನೀಡಲಾಗಿದೆ.

ಟೆಕ್ನೋ ಸ್ಪಾರ್ಕ್‌ 10 ಸ್ಮಾರ್ಟ್‌ಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ ಅನಿರ್ದಿಷ್ಟ AI ಸೆನ್ಸಾರ್‌ ಒಳಗೊಂಡಿದೆ. ಇದಲ್ಲದೆ ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾ ಪಿಕ್ಸೆಲ್ AI ಬೆಂಬಲಿತ ಕ್ಯಾಮೆರಾವನ್ನು ಅಳಡಿಸಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ತಕ್ಕಂತೆ 18W ಫ್ಲಾಶ್ ಚಾರ್ಜ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ಡ್ಯುಯಲ್-ಸಿಮ್, 4G, ವೈಫೈ, ಬ್ಲೂಟೂತ್, NFC ಮತ್ತು GPS ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಬೆಂಬಲಿಸಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Thu, 27 April 23