Vivo X90 Pro: 120W ಫಾಸ್ಟ್ ಚಾರ್ಜರ್, ಅದ್ಭುತ ಕ್ಯಾಮೆರಾ: ಸದ್ದಿಲ್ಲದೆ ವಿವೋದಿಂದ ಎರಡು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ
ವಿವೋ ಎಕ್ಸ್ 90 (Vivo X90) ಮತ್ತು ವಿವೋ ಎಕ್ಸ್ 90 ಪ್ರೊ (Vivo X90 Pro) ಸಾಕಷ್ಟು ಬಲಿಷ್ಠವಾಗಿದೆ. ವಿವೋ X90 ಪ್ರೊ ನಲ್ಲಿ 120W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ನೀಡಲಾಗಿದೆ. ಅಂತೆಯೆ ವಿವೋ X90 ಯಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ಅಳವಡಿಸಲಾಗಿದೆ.
ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿ ಸದ್ದು ಮಾಡುವ ಪ್ರಸಿದ್ಧ ವಿವೋ (Vivo) ಸಂಸ್ಥೆ ಇದೀಗ ಭಾರತದಲ್ಲಿ ತನ್ನ X ಸರಣಿ ಅಡಿಯಲ್ಲಿ ಎರಡು ಹೊಸ ಮೊಬೈಲ್ ಅನ್ನು ಅನಾವರಣ ಮಾಡಿದೆ. ಈ ಸರಣಿಯು ವಿವೋ ಎಕ್ಸ್ 90 (Vivo X90) ಮತ್ತು ವಿವೋ ಎಕ್ಸ್ 90 ಪ್ರೊ (Vivo X90 Pro) ಆಗಿದ್ದು ಸಾಕಷ್ಟು ಬಲಿಷ್ಠವಾಗಿದೆ. ವಿವೋ X90 ಪ್ರೊ ನಲ್ಲಿ 120W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ನೀಡಲಾಗಿದೆ. ಅಂತೆಯೆ ವಿವೋ X90 ಯಲ್ಲಿ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ಅಳವಡಿಸಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಇತರೆ ಫೀಚರ್ಗಳು ಏನೆಲ್ಲ ಇದೆ ಎಂಬುದರ ಸಂಪೂರ್ಣ ವಿವರ ನೋಡೋಣ.
ವಿವೋ X90:
ವಿವೋ X90 ಸ್ಮಾರ್ಟ್‌ಫೋನ್ 2,800 × 1,260 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯದ 6.76 ಇಂಚಿನ ಕರ್ವ್ಡ FHD+ Q9 ಅಲ್ಟ್ರಾ-ವಿಷನ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ಮೂಲಕ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಪಡೆದಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ ಈ ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ರಚನೆ ನೀಡಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹಾಗೂ ಉಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 12 ಮೆಗಾ ಪಿಕ್ಸಲ್ ಹಾಗೂ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇವೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ. 4,810mAh ಸಾಮರ್ಥ್ಯದ ಬ್ಯಾಟರಿ ಪವರ್ ಪಡೆದಿದ್ದು, ಇದಕ್ಕೆ ಪೂರಕವಾಗಿ 120W ಡ್ಯುಯಲ್ ಸೆಲ್ ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G ಬೆಂಬಲ ಪಡೆದುಕೊಂಡಿದೆ.
Tech Tips: ಇನ್ಸ್ಟಾಗ್ರಾಮ್ ಬಯೋದಲ್ಲಿ ಐದು ಲಿಂಕ್ಗಳನ್ನು ಸೇರಿಸುವ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
ವಿವೋ X90 ಫೋನ್ ಭಾರತದಲ್ಲಿ ಎರಡು ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಇದರ 8GB RAM + 256GB ವೇರಿಯಂಟ್ ಬೆಲೆಯು 59,999ರೂ. ಆಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್ ಸಾಮರ್ಥ್ಯಕ್ಕೆ 63,999ರೂ. ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಮೇ 5 ರಿಂದ ಖರೀದಿಗೆ ಸಿಗಲಿದೆ. ನಿಮ್ಮಲ್ಲಿ ಹೆಚ್‌ಡಿಎಫ್‌ಸಿ ಕ್ರೆಡಿಟ್/ಡೆಬಿಟ್ ಕಾರ್ಡ್ ಇದ್ದರೆ 8,000ರೂ. ಇನ್‌ಸ್ಟಂಟ್ ರಿಯಾಯಿತಿ ಸಿಗಲಿದೆ.
ವಿವೋ X90 ಪ್ರೊ:
ವಿವೋ X90 ಪ್ರೊ ಸ್ಮಾರ್ಟ್‌ಫೋನ್ 1,260x 2,800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಅಮೋಲೆಡ್ 3D ಕರ್ವ್ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದ್ದು, ಇದರಲ್ಲಿರುವ ಡಿಸ್‌ಪ್ಲೇ 3 ಹಂತದ ಐ ಪ್ರೊಟೆಕ್ಷನ್ ಅನ್ನು ನೀಡುತ್ತದೆ. ಅತ್ಯಂತ ಬಲಿಷ್ಠವಾದ ಆಕ್ಟಾ-ಕೋರ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಆಂಡ್ರಾಯ್ಡ್ 13 ಆಧಾರಿತ FunTouch OS ನಲ್ಲಿ ಕಾರ್ಯನಿರ್ವಹಿಸಲಿದೆ.
ಕ್ಯಾಮೆರಾ ಕೂಡ ಅದ್ಭುತವಾಗಿದ್ದು, Zeiss-ಬ್ರಾಂಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX 989 1-ಇಂಚಿನ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX758 ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಸೋನಿ IMX ಸೆಲ್ ಅನ್ನು ಒಳಗೊಂಡಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.
4,870mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು 120W ವೇಗದ ಚಾರ್ಜಿಂಗ್ ಬೆಂಬಲಿಸಲಿಸುತ್ತದೆ. ಜೊತೆಗೆ 50W ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಕೂಡ ನೀಡಲಾಗಿದೆ. ಕಂಪನಿ ಹೇಳುವ ಪ್ರಕಾರ ಈ ಫೋನ್ ಕೇವಲ ಎಂಟು ನಿಮಿಷಗಳಲ್ಲಿ 0% ನಿಂದ 50% ನಷ್ಟು ಬ್ಯಾಟರಿಯನ್ನು ಚಾರ್ಜ್ ಆಗುತ್ತದೆ. 5G ಬೆಂಬಲ ಪಡೆದುಕೊಂಡಿದೆ. ವಿವೋ X90 ಪ್ರೊ ಸ್ಮಾರ್ಟ್‌ಫೋನ್ 8GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಗೆ 59,999ರೂ.. ಅಂತೆಯೆ 12GB RAM + 256GB ಸ್ಟೋರೇಜ್ ರೂಪಾಂತರದ ಆಯ್ಕೆಯು 63,999ರೂ. ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಕೂಡ ಮೇ 5 ರಿಂದ ಖರೀದಿಗೆ ಸಿಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Thu, 27 April 23