Airtel 5G: ಭಾರತದಲ್ಲಿ ಮೊಟ್ಟ ಮೊದಲ 5G ಸೇವೆ ಆರಂಭಿಸಿದ ಏರ್ಟೆಲ್: ಎಲ್ಲೆಲ್ಲಿ ಲಭ್ಯ, ಬೆಲೆ ಎಷ್ಟು?, ಇಲ್ಲಿದೆ ಮಾಹಿತಿ

| Updated By: Vinay Bhat

Updated on: Oct 02, 2022 | 12:01 PM

5G Service: ಏರ್ಟೆಲ್ ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೊದಲ ಕಂಪನಿಯಾಗಿದೆ. ಈ ವಿಚಾರವನ್ನು ಭಾರ್ತಿ ಏರ್ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ತಿಳಿಸಿದ್ದಾರೆ.

Airtel 5G: ಭಾರತದಲ್ಲಿ ಮೊಟ್ಟ ಮೊದಲ 5G ಸೇವೆ ಆರಂಭಿಸಿದ ಏರ್ಟೆಲ್: ಎಲ್ಲೆಲ್ಲಿ ಲಭ್ಯ, ಬೆಲೆ ಎಷ್ಟು?, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ 5ಜಿ ಯುಗ ಆರಂಭವಾಗಿದೆ. 6ನೇ ಇಂಡಿಯನ್ ಮೊಬೈಲ್​ ಕಾಂಗ್ರೆಸ್​ನಲ್ಲಿ 5G ಸೇವೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಾಲನೆ ನೀಡಿದ್ದಾರೆ. ಇದರ ಜೊತೆಗೆ ದೇಶದಲ್ಲಿ ಭಾರ್ತಿ ಏರ್ಟೆಲ್ ಮೊಟ್ಟಮೊದಲ 5ಜಿ ಸೇವೆಯನ್ನು ಶುರುಮಾಡಿದೆ. ಏರ್ಟೆಲ್ ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೊದಲ ಕಂಪನಿಯಾಗಿದೆ. ಈ ವಿಚಾರವನ್ನು ಭಾರ್ತಿ ಏರ್ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ತಿಳಿಸಿದ್ದಾರೆ. ದೆಹಲಿ, ಮುಂಬೈ, ವಾರಾಣಸಿ, ಬೆಂಗಳೂರು (Bengaluru) ಮತ್ತು ಇತರ ನಗರಗಳಲ್ಲಿ ಏರ್ಟೆಲ್​ನ 5G (Airtel 5G) ಸೇವೆಯು ಲಭ್ಯವಿರುತ್ತದೆ. ಮಾರ್ಚ್ 2023 ರ ವೇಳೆಗೆ ದೇಶದಾದ್ಯಂತ ಹಲವಾರು ನಗರಗಳಲ್ಲಿ ಮತ್ತು ಮಾರ್ಚ್ 2024 ರ ವೇಳೆಗೆ ಭಾರತದಾದ್ಯಂತ 5G ಸೇವೆಗಳನ್ನು ಏರ್ಟೆಲ್ ಹೊರತರಲಿದೆ ಎಂದೂ ಮಿತ್ತಲ್ ಹೇಳಿದ್ದಾರೆ.

ಏರ್ಟೆಲ್ ಕಂಪನಿಯ ಹಿರಿಯ ಅಧಿಕಾರಿಯ ಪ್ರಕಾರ, ಚೆನ್ನೈ, ಹೈದರಾಬಾದ್ ಮತ್ತು ಸಿಲಿಗುರಿಯಲ್ಲಿಯೂ 5G ಸೇವೆಗಳನ್ನು ಪ್ರಾರಂಭಿಸಲಾಗುತ್ತಿದೆ. ಏರ್‌ಟೆಲ್ 5G ಸೇವೆಗಳು ಅಸ್ತಿತ್ವದಲ್ಲಿರುವ 4G ದರಗಳಲ್ಲಿ ಲಭ್ಯವಿರುತ್ತವೆ ಮತ್ತು 5G ಗಾಗಿ ಹೊಸ ಸುಂಕವನ್ನು ಸ್ವಲ್ಪ ಸಮಯದ ನಂತರ ಪ್ರಕಟಿಸಲಾಗುತ್ತಿದೆ ಎಂದಿದ್ದಾರೆ. ಏರ್ಟೆಲ್ 5ಜಿ ನೆಟ್​ವರ್ಕ್ ಇಗಿರುವ 4ಜಿ ನೆಟ್​ವರ್ಕ್​ಗಿಂತ 20-30 ಸಮಯ ವೇಗವಾಗಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ನೆಟ್​ವರ್ಕ್ ಸ್ಲೈಸಿಂಗ್ ಎಂಬ ಫೀಚರ್ ನೀಡುತ್ತಿದ್ದು ಈ ಮೂಲಕ ಕಡಿಮೆ ನೆಟ್​ವರ್ಕ್ ಇರುವ ಪ್ರದೇಶದಲ್ಲಿ ಅಥವಾ ವರ್ಕ್​ ಫ್ರಮ್ ಹೋಮ್ ಕೆಲಸ ಮಾಡುವವರಿಗೆ ಹೈ ಸ್ಪೀಡ್​ನಲ್ಲಿ 5ಜಿ ನೆಟ್​ವರ್ಕ್ ಉಪಯೋಗಿಸಬಹುದಾಗಿದೆ.

ಇನ್ನು ನಿಮ್ಮಲ್ಲಿ ಹಳೆಯ ಸ್ಮಾರ್ಟ್​ಫೋನ್​ಗಳಿದ್ದರೆ ಹೊಸ 5ಜಿ ಫೋನನ್ನು ಖರೀದಿಸುವಂತೆ ಏರ್ಟೆಲ್ ಬಳಕೆದಾರರ ಬಳಿ ಮನವಿ ಮಾಡಿದೆ. ಮುಖ್ಯವಾದ ಅಂಶ ಎಂದರೆ ನಿಮ್ಮ ಮೊಬೈಲ್​ನಲ್ಲಿ ಈಗಿರುವ ಏರ್ಟೆಲ್ ಸಿಮ್ ಮೂಲಕವೇ 5ಜಿ ಕಾರ್ಯನಿರ್ವಹಿಸಲಿದೆ. ಅಂದರೆ 5ಜಿ ಸೇವೆ ಪಡೆಯಲು ಯಾವುದೇ ಹೊಸ ಸಿಮ್​ನ ಅಗತ್ಯವಿಲ್ಲ. ನಿಮ್ಮ ಪ್ರದೇಶದಲ್ಲಿ 5ಜಿ ಲಭ್ಯವಾಗುತ್ತಿದೆ ಎಂದಾದರೆ ಸ್ಮಾರ್ಟ್​ಫೋನ್​ನಲ್ಲಿ ನೆಟ್​ವರ್ಕ್​ ಸೆಟ್ಟಿಂಗ್​ಗೆ ಹೋಗಿ 5ಜಿ ಅನ್ನು ಚಾಲ್ತಿ ಮಾಡಿದರೆ ಸಾಕು.

ಇದನ್ನೂ ಓದಿ
WhatsApp: ವಾಟ್ಸ್​ಆ್ಯಪ್​ನಲ್ಲಿ ಲೈವ್ ಲೊಕೇಶನ್ ಶೇರ್ ಮಾಡುವುದು ಹೇಗೆ?: ಇಲ್ಲಿದೆ ಸಿಂಪಲ್ ಟ್ರಿಕ್
Smartphones: ಹಬ್ಬದ ಪ್ರಯುಕ್ತ ಈ ತಿಂಗಳು ಬಿಡುಗಡೆ ಆಗಲಿರುವ ಸ್ಮಾರ್ಟ್​ಫೋನ್​ಗಳು ಯಾವುವು?: ಇಲ್ಲಿದೆ ನೋಡಿ
ಇಂದು ಪ್ರಧಾನಿ ಮೋದಿ ಹಾಕಿದ ಈ ಕನ್ನಡಕದ ಅಚ್ಚರಿಯ ಸಂಗತಿಗಳು ಇಲ್ಲಿವೆ
Infinix Note 12i: ಅತಿ ಕಡಿಮೆ ಬೆಲೆಗೆ ಇನ್ಫಿನಿಕ್ಸ್‌ ನೋಟ್ 12i 2022 ಸ್ಮಾರ್ಟ್‌ಫೋನ್‌ ಬಿಡುಗಡೆ: ಏನು ವಿಶೇಷತೆ?

5ಜಿ ತಂತ್ರಜ್ಞಾನವು ತಡೆರಹಿತ ಕವರೇಜ್, ಶತಕೋಟಿ ಡಿವೈಸ್​ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಉತ್ತಮ ಗುಣಮಟ್ಟದ ವಿಡಿಯೊ ಕರೆ ಸೇವೆಗಳನ್ನು ಒದಗಿಸುತ್ತದೆ. ಉತ್ತಮ ಮತ್ತು ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು (ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಸಹ) ಅನುಮತಿಸುತ್ತದೆ.

Published On - 12:01 pm, Sun, 2 October 22