5G Service: ಭಾರತದಲ್ಲಿ 5G ಯುಗ ಆರಂಭ: ನಿಮ್ಮ ಮೊಬೈಲ್ಗೆ 5G ಸಪೋರ್ಟ್ ಆಗುತ್ತಾ? ಹೀಗೆ ಪರಿಶೀಲಿಸಿ
ದೇಶದ ಟೆಲಿಕಾಂ ವ್ಯವಸ್ಥೆಯಲ್ಲಿ ಇಂದಿನಿಂದ ಹೊಸ ಯುಗ ಆರಂಭವಾಗಿದೆ. 5ಜಿ ತಂತ್ರಜ್ಞಾನವು ತಡೆರಹಿತ ಕವರೇಜ್, 5G ತಂತ್ರಜ್ಞಾನ ಶತಕೋಟಿ ಡಿವೈಸ್ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಉತ್ತಮ ಗುಣಮಟ್ಟದ ವಿಡಿಯೊ ಕರೆ ಸೇವೆಗಳನ್ನು ಒದಗಿಸುತ್ತದೆ.
ಭಾರತದಲ್ಲಿ ಇಂದು 5ಜಿ ಸೇವೆಗೆ (5G Service) ಚಾಲನೆ ನೀಡಲಾಗಿದೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದ್ದ 6ನೇ ಇಂಡಿಯನ್ ಮೊಬೈಲ್ ಕಾಂಗ್ರೆಸ್ನಲ್ಲಿ 5G ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಪ್ರಾರಂಭಿಸಿದರು. ಈ ಮೂಲಕ ದೇಶದ ಟೆಲಿಕಾಂ ವ್ಯವಸ್ಥೆಯಲ್ಲಿ ಇಂದಿನಿಂದ ಹೊಸ ಯುಗ ಆರಂಭವಾಗಿದೆ. ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆ ಎಂದು ಹೇಳಿಕೊಳ್ಳುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC), ದೂರಸಂಪರ್ಕ ಇಲಾಖೆ ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. 4ಜಿ ಸೇವೆಯಲ್ಲಿ 50 ಎಂಬಿಪಿಎಸ್ ಕನಿಷ್ಠ ವೇಗವಾಗಿದ್ದರೆ, 5ಜಿ ಸೇವೆಯಲ್ಲಿ ಇಂಟರ್‌ನೆಟ್‌ನ ವೇಗ ಕನಿಷ್ಠ 1 ಜಿಬಿ ಇರಲಿದೆ ಎಂದು ಹೇಳಲಾಗಿದೆ.
ದೇಶದ ಅಗ್ರ ಟೆಲಿಕಾಂ ಸೇವಾ ಸಂಸ್ಥೆಗಳಾಗಿರುವ ಏರ್ಟೆಲ್ ವಾರಣಾಸಿಯಿಂದ ಈ ಸೇವೆಯನ್ನು ಆರಂಭ ಮಾಡಲಿದ್ದರೆ, ಜಿಯೋ ಸಂಸ್ಥೆಯು ಅಹಮದಾಬಾದ್‌ನ ಹಳ್ಳಿಯಿಂದ 5ಜಿ ಸೇವೆಯನ್ನು ಶುರು ಮಾಡಲಿದೆ. ಇದು 4ಜಿಗಿಂತ 10 ಪಟ್ಟು ವೇಗ ಇರಲಿದೆ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಇಂಟರ್ನೆಟ್ ಸೇವೆ ಆಗಿದೆ. ಈಗಾಗಲೇ 72 ದೇಶಗಳಲ್ಲಿ 5ಜಿ ಸೇವೆಯ ಸೌಲಭ್ಯವಿದೆ. ಸದ್ಯ ಈ 5ಜಿ ಸೇವೆಯು ಭಾರತದ ಕೆಲ ಆಯ್ದ ನಗರಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸಲಿದ್ದು, ಮುಂಬರುವ ವರ್ಷಗಳಲ್ಲಿ ಇಡೀ ರಾಷ್ಟ್ರದಲ್ಲಿ ಇದರ ಸೇವೆ ವಿಸ್ತರಣೆಯಾಗಲಿದೆ. ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ನವದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲ ಹಂತದಲ್ಲಿ 5ಜಿ ಸೇವೆ ಲಭ್ಯವಿರಲಿದೆ.
5ಜಿ ತಂತ್ರಜ್ಞಾನವು ತಡೆರಹಿತ ಕವರೇಜ್, 5G ತಂತ್ರಜ್ಞಾನ ಶತಕೋಟಿ ಡಿವೈಸ್ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಉತ್ತಮ ಗುಣಮಟ್ಟದ ವಿಡಿಯೊ ಕರೆ ಸೇವೆಗಳನ್ನು ಒದಗಿಸುತ್ತದೆ. ಉತ್ತಮ ಮತ್ತು ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು (ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಸಹ) ಅನುಮತಿಸುತ್ತದೆ.
5G ಸಪೋರ್ಟ್ ಸ್ಮಾರ್ಟ್ಫೋನ್ ಇದ್ದಾಗ ಮಾತ್ರ 5G ವೇಗದ ಬಗ್ಗೆ ತಿಳಿಯುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್ 5G ಸೇವೆಯನ್ನು ಬೆಂಬಲಿಸದಿದ್ದರೆ, ನೀವು ಹೊಸ ಮೊಬೈಲ್‌ನ್ನು ಖರೀದಿಸಬೇಕಾಗುತ್ತದೆ. ಹಾಗಾದರೆ ನಿಮ್ಮ ಫೋನ್ 5G ಅನ್ನು ಸಪೋರ್ಟ್ ಮಾಡುತ್ತಿದೆಯಾ ಎಂದು ಹೀಗೆ ಪರಿಶೀಲಿಸಿ.
- ನಿಮ್ಮ Android ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ.
- ‘Wi-Fi & Network’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ ‘SIM & Network’ ಆಯ್ಕೆಯನ್ನು ಕ್ಲಿಕ್ ಮಾಡಿ.
- ಈಗ ನೀವು ‘ಆದ್ಯತೆಯ ನೆಟ್‌ವರ್ಕ್ ಪ್ರಕಾರ’ ಆಯ್ಕೆಯ ಅಡಿಯಲ್ಲಿ ಎಲ್ಲಾ ತಂತ್ರಜ್ಞಾನಗಳ ಪಟ್ಟಿಯನ್ನು ನೋಡಲು ಸಾಧ್ಯವಾಗುತ್ತದೆ.
- ನಿಮ್ಮ ಫೋನ್ 5G ಅನ್ನು ಸಪೋರ್ಟ್ ಮಾಡಿದರೆ, ಅದನ್ನು 2G/3G/4G/5G ಎಂದು ಪಟ್ಟಿ ಮಾಡಲಾಗುತ್ತದೆ.
ನಿಮ್ಮ ಫೋನ್ 5G ನೆಟ್‌ವರ್ಕ್ ಅನ್ನು ಬೆಂಬಲಿಸದಿದ್ದರೆ, ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಅನುಭವಿಸಲು ನೀವು 5G-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಾಗಿ ಖರ್ಚು ಮಾಡಬೇಕಾಗುತ್ತದೆ. ಒಂದು ವೇಳೆ ನಿಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನಿಗೆ 5ಜಿ ಬೆಂಬಲವಿದೆ ಇದೆ ಎಂದರೆ ಹೊಸ ಫೋನ್ ಖರೀದಿಸುವ ಅಗತ್ಯವಿಲ್ಲ. ಈಗಂತು ಮಾರುಕಟ್ಟೆಯಲ್ಲಿ 15,000 ರೂ. ಒಳಗೆ ಆಕರ್ಷಕ 5ಜಿ ಸ್ಮಾರ್ಟ್ಫೋನ್ಗಳು ಖರೀದಿಗೆ ಸಿಗುತ್ತಿದೆ.
Published On - 12:52 pm, Sat, 1 October 22