5G Service: ನೀವು 5ಜಿ ಸೇವೆ ಬಳಕೆ ಮಾಡಲು SIM ಬದಲಿಸುವ ಅವಶ್ಯಕತೆ ಇಲ್ಲ; ಯಾಕೆ ಎಂಬುದು ಇಲ್ಲಿದೆ ನೋಡಿ
ಭಾರತದಲ್ಲಿ 5G ಸೇವೆಗಳಿಗೆ ಚಾಲನೆ ನೀಡುವ ಮೂಲಕ ತಂತ್ರಜ್ಞಾನದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಾಗಿದೆ. ಬೆಂಗಳೂರು ಸೇರಿದಂತೆ ದೇಶದ ಒಟ್ಟು 13 ನಗರಗಳಲ್ಲಿ ಮೊದಲ ಹಂತದಲ್ಲಿ ಸೇವವೆಗಳು ಲಭ್ಯವಾಗಲಿವೆ.
ಭಾರತದಲ್ಲಿ 5G ಸೇವೆಗಳಿಗೆ (5G Internet Service) ಚಾಲನೆ ನೀಡುವ ಮೂಲಕ ತಂತ್ರಜ್ಞಾನದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಾಗಿದೆ. ಅದರಂತೆ ದೇಶದಲ್ಲಿ ಮುಂದಿನ ದಿನಗಳಲ್ಲಿ ಹೈ ಸ್ಪೀಡ್ ಇಂಟರ್ನೆಟ್ ಲಭ್ಯವಾಗಲಿದೆ. ದೇಶದಲ್ಲಿ 5G ಸೇವೆಗಳೇನೋ ಆರಂಭಗೊಂಡಿದೆ, ಆದರೆ ಜನ ಸಾಮಾನ್ಯರಿಗೆ ಇದರ ಪ್ರಯೋಜನ ಯಾವಾಗ ಎಂಬುದೊಂದೆ ಈಗಿರುವ ಪ್ರಶ್ನೆಯಾಗಿದೆ. ಅದಾಗ್ಯೂ ಮೊದಲ ಹಂತದಲ್ಲಿ ಬೆಂಗಳೂರು ನಗರ ಸೇರಿದಂತೆ ದೇಶದ ಒಟ್ಟು 13 ನಗರಗಳಲ್ಲಿ ಸೇವವೆಗಳು ಲಭ್ಯವಾಗಲಿವೆ. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಎರಡೂ ಕಂಪನಿಗಳು ಈ ವರ್ಷವೇ 5G ಸೇವೆಗಳನ್ನು ಪ್ರಾರಂಭಿಸುತ್ತವೆ ಎಂದು ಬಹಿರಂಗಪಡಿಸಿವೆ.
ಮೊದಲು ನೀವು ತಿಳಿದುಕೊಳ್ಳಬೇಕಾಗಿರುವುದು ಇಷ್ಟೆ
ಮಾಹಿತಿ ಪ್ರಕಾರ, ದೇಶದ ಜನರು 5G ಸೇವೆಯನ್ನು ಬಳಸಲು ಸಿಮ್ ಕಾರ್ಡ್ ಬದಲಿಸಬೇಕಾದ ಅಗತ್ಯ ಇಲ್ಲ. ಪ್ರಸ್ತುತ 4G ಸಿಮ್‌ನೊಂದಿಗೆ 5G ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ನೀವು 5G ಸಫೊರ್ಟ್ ಮಾಡುವ ಸ್ಮಾರ್ಟ್‌ಪೋನ್ ಹೊಂದಿದ್ದರೆ 4G ಸಿಮ್ ಮೂಲಕವೇ 5G ಸೇವೆಗಳನ್ನು ಪಡೆಯಬಹುದು. ಟೆಲಿಕಾಂ ಕಂಪೆನಿಗಳು ಎಲ್ಲಿಯವರೆಗೆ NSA 5G ತಂತ್ರಜ್ಞಾನವನ್ನು ಬಳಸುವುದೋ ಅಲ್ಲಿಯವರೆಗೆ ನಿಮಗೆ 5G ಸಿಮ್ ಅಗತ್ಯವಿಲ್ಲ. ಏಕೆಂದರೆ, ಈ ಟೆಕ್ನಾಲಜಿಯು ಈಗಾಗಲೇ ಅಸ್ತಿತ್ವದಲ್ಲಿರುವ 4G ಸಿಮ್‌ಗಳನ್ನು 5G ಯೊಂದಿಗೆ ಫಾರ್ವರ್ಡ್ ಆಗುವಂತೆ ಮಾಡಲಿದೆ.
ಈ ನಗರಗಳಲ್ಲಿ ಇಂದಿನಿಂದ 5ಜಿ ಸೇವೆಗಳು ಲಭ್ಯ
ಬೆಂಗಳೂರು, ಗುರುಗ್ರಾಮ, ಚಂಡೀಗಢ, ಲಖನೌ, ಪುಣೆ, ಮುಂಬೈ, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಗಾಂಧಿನಗರ, ಅಹಮದಾಬಾದ್, ಜಾಮ್ನಗರ, ಚೆನ್ನೈನಲ್ಲಿ ಇಂದಿನಿಂದ ಹೈಸ್ಪೀಡ್ ಇಂಟರ್ನೆಟ್ ಬಳಕೆಯಾಗಲಿದೆ.
ಯಾರಿಗೆಲ್ಲಾ 5ಜಿ ಸೇವೆ ಲಭ್ಯ?
ಇಂದಿನಿಂದ ಲಭ್ಯವಾಗುವ 5ಜಿ ಸೇವೆಗಳು ಜನ ಸಾಮಾನ್ಯರಿಗೆ ಲಭ್ಯವಿರುವುದಿಲ್ಲ. ಬದಲಾಗಿ ಕೇವಲ ವಾಣಿಜ್ಯ ಉದ್ದೇಶಗಳಿಗೆ 5G ಬಳಕೆ ಮಾಡಲಾಗುತ್ತದೆ. ಜನಸಾಮಾನ್ಯರಿಗೆ ಒಂದು ವರ್ಷದ ಬಳಿಕ 5G ಸೇವೆಗಳು ಲಭ್ಯವಾಗಲಿದ್ದು, ವೇಗದ ಇಂಟರ್ನೆಟ್ ಬಳಕೆಗಾಗಿ ಅಲ್ಲಿಯವರೆಗೆ ಕಾಯಲೇ ಬೇಕು.
ಯಾವೆಲ್ಲಾ ಟೆಲಿಕಾಂ ಕಂಪನಿಗಳಲ್ಲಿ 5ಜಿ ಸೇವೆಗಳು ಲಭ್ಯ?
- ವೊಡಾಫೋನ್
- ಜೀಯೋ
- ಏರ್‌ಟೆಲ್
5ಜಿ ಸೇವೆಗಳ ಪ್ರಮುಖ ಅಂಶಗಳು
- ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಭಾರತದಲ್ಲಿ 5G ಸೇವೆಯ ಮೊದಲ ಪೂರೈಕೆದಾರರಾಗಬಹುದು.
- 5G ಟೆಲಿಕಾಂ ಸೇವೆಗಳು ತಡೆರಹಿತ ಕವರೇಜ್, ಹೆಚ್ಚಿನ ಡೇಟಾ ದರ, ಹೆಚ್ಚು ವಿಶ್ವಾಸಾರ್ಹ ಸಂವಹನ ವ್ಯವಸ್ಥೆಯನ್ನು ಒದಗಿಸಲಿದೆ.
- 5G ತಂತ್ರಜ್ಞಾನವು ಸಾಮಾನ್ಯ ಜನರಿಗೆ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ನೀಡುತ್ತದೆ.
- ಇದು ಶಕ್ತಿಯ ದಕ್ಷತೆ, ಸ್ಪೆಕ್ಟ್ರಮ್ ದಕ್ಷತೆ ಮತ್ತು ನೆಟ್‌ವರ್ಕ್ ದಕ್ಷತೆಯನ್ನು ಹೆಚ್ಚಿಸುತ್ತದೆ.
- ಇದು ಹೆಚ್ಚಿನ ವೇಗದಲ್ಲಿ ಚಲನಶೀಲತೆಯೊಂದಿಗೆ ಉತ್ತಮ ಗುಣಮಟ್ಟದ ವೀಡಿಯೊ ಸೇವೆಗಳನ್ನು ಅನುಮತಿಸುತ್ತದೆ.
- 5G ವಿಪತ್ತುಗಳ ನೈಜ ಸಮಯದ ಮೇಲ್ವಿಚಾರಣೆ, ನಿಖರವಾದ ಕೃಷಿ ಮತ್ತು ಆಳವಾದ ಗಣಿಗಳಲ್ಲಿ, ಕಡಲಾಚೆಯ ಚಟುವಟಿಕೆಗಳಂತಹ ಅಪಾಯಕಾರಿ ಕೈಗಾರಿಕಾ ಕಾರ್ಯಾಚರಣೆಗಳಲ್ಲಿ ಮಾನವರ ಪಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆಂಗಳೂರಿನ ಈ ಸ್ಥಳದಲ್ಲಿ ಮೊದಲ 5ಜಿ ಸೇವೆ ಆರಂಭ
ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (DIAL) ಭಾರತದಲ್ಲಿ 5G ಅನ್ನು ಅಧಿಕೃತವಾಗಿ ಪ್ರಾರಂಭಿಸುವ ಮೊದಲು ದೆಹಲಿಯ T3 ವಿಮಾನ ನಿಲ್ದಾಣದಲ್ಲಿ 5G ಸೇವೆಗಳ ಲಭ್ಯತೆಯನ್ನು ಘೋಷಿಸಿತು. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 ರಿಂದ ಹಾರುವ ಪ್ರಯಾಣಿಕರು ಶೀಘ್ರದಲ್ಲೇ 5G ನೆಟ್‌ವರ್ಕ್ ಅನ್ನು ಬಳಸಲು ಸಾಧ್ಯವಾಗುತ್ತದೆ ಎಂದು DIAL ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಬೆಂಗಳೂರಿನ ಬಗ್ಗೆ ತಿಳಿಸುವುದಾರೆ ನಗರದಲ್ಲಿ ಮೊದಲು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ 5ಜಿ ಸೇವೆ ಲಭ್ಯವಾಗಲಿದೆ ಎನ್ನಲಾಗುತ್ತಿದೆ. ಏರ್‌ಟೆಲ್, ಜಿಯೋ ಮತ್ತು ವೊಡಾಪೋನ್ ಐಡಿಯಾ ಸಂಸ್ಥೆಗಳೆಲ್ಲವೂ ಇಲ್ಲಿ ಟೆಸ್ಟಿಂಗ್ ನಡೆಸಿ ಕಂಡಿದೆ.
5G ಸ್ಪೆಕ್ಟ್ರಮ್‌ಗಾಗಿ ಇತ್ತೀಚೆಗೆ ನಡೆದ ಹರಾಜಿನಲ್ಲಿ 51,236 MHz ಅನ್ನು ಟೆಲಿಕಾಂ ಸೇವಾ ಪೂರೈಕೆದಾರರಿಗೆ 1,50,173 ಕೋಟಿ ರೂಪಾಯಿಗಳ ಒಟ್ಟು ಆದಾಯದೊಂದಿಗೆ ಹಂಚಲಾಯಿತು. ಮುಖೇಶ್ ಅಂಬಾನಿಯವರ ಜಿಯೋ 88,078 ಕೋಟಿ, ಸುನಿಲ್ ಭಾರ್ತಿ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್ 43,084 ಕೋಟಿ, ವೊಡಾಫೋನ್ ಐಡಿಯಾ ಲಿಮಿಟೆಡ್ 18,799 ಕೋಟಿ ರೂಪಾಯಿಗಳಿಗೆ ಸ್ಪೆಕ್ಟ್ರಮ್ ಖರೀದಿಸಿತು.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:41 am, Sat, 1 October 22