ಬ್ಲ್ಯಾಕ್ ಫ್ರೈಡೇ ಸೇಲ್ (Black Friday Sale) ನಾಳೆ ಭಾರತದಲ್ಲಿ ಕೊನೆಯಾಗಲಿದೆ. ಅಮೆರಿಕಲ್ಲಿ ಆಚರಿಸುವ ಥ್ಯಾಂಕ್ಸ್ ಗಿವಿಂಗ್ ಡೇ ಬಳಿಕ, ಪ್ರತೀ ವರ್ಷ ಈ ಬ್ಲ್ಯಾಕ್ ಫ್ರೈಡೇ ಸೇಲ್ ಬರುತ್ತದೆ. ಹೀಗಾಗಿ, ಈ ಬಾರಿ ನವೆಂಬರ್ 26 ರಂದು ಈ ಸೇಲ್ ಪ್ರಾರಂಭಗೊಂಡಿತ್ತು. ಈ ಸೇಲ್ನಲ್ಲಿ ಭಾರತೀಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ವಿವಿಧ ರಿಯಾಯಿತಿಗಳನ್ನು ಘೋಷಿಸಿವೆ. ಕೆಲವು ತಾಣಗಳಲ್ಲಿ ಈ ಮೇಳ ನಾಳೆಗೆ ಅಂತ್ಯಕಂಡರೆ ಶವೋಮಿಯಲ್ಲಿ ನವೆಂಬರ್ 30ಕ್ಕೊರಗೆ ಆಯೋಜಿಸಲಾಗಿದೆ. ಶವೋಮಿ ಬ್ಲ್ಯಾಕ್ ಪ್ರೈಡ್ (Xiaomi Black Friday Sale) ಸೇಲ್ ಮೇಳದಲ್ಲಿ ಆಯ್ದ ಸ್ಮಾರ್ಟ್‌ಫೋನ್ (Smartphone) ಸೇರಿದಂತೆ ಇತರೆ ಡಿವೈಸ್‌ಗಳಿಗೆ ಆಕರ್ಷಕ ಕೊಡುಗೆ ನೀಡಲಾಗಿದೆ. ಈ ವಿಶೇಷ ಮಾರಾಟದಲ್ಲಿ ಆಯ್ದ, ಫೋನ್, ಇಯರ್‌ಫೋನ್, ಸ್ಮಾರ್ಟ್ ಟಿವಿ (Smart TV) ಸೇರಿದಂತೆ ಇತರೆ ಕೆಲವು ಸಾಧನಗಳಿಗೆ ಭರ್ಜರಿ ರಿಯಾಯಿತಿ, ಗ್ರಾಹಕರಿಗೆ ವಿನಿಮಯ ವ್ಯವಹಾರಗಳು, ಯಾವುದೇ EMI ಕೊಡುಗೆಗಳು ಸೇರಿದಂತೆ ಇತರೆ ಹೆಚ್ಚುವರಿ ಕೊಡುಗೆಗಳನ್ನು ನೀಡುತ್ತಿದೆ.
ಶವೋಮಿಯ ಈ ಬ್ಲ್ಯಾಕ್ ಫ್ರೈಡೇ ಸೇಲ್ನಲ್ಲಿ ರೆಡ್ಮಿ ಬುಕ್ 15 ಇ-ಲರ್ನಿಂಗ್ ಎಡವಿಷನ್ 11ನೇ ತಲೆಮಾರಿನ ಕೋರ್ i3 ಯಿಂಧ ಆವೃತ್ತವಾಗಿದೆ. ಇದರ ಬೆಲೆ ಕೇವಲ 37,999 ರೂ. ಆಗಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ದಾರರಿಗೆ ಮತ್ತಷ್ಟು ಆಫರ್ ನೀಡಲಾಗಿದ್ದು 2,500 ರೂ. ಡಿಸ್ಕೌಂಟ್ನಲ್ಲಿ ಸಿಗಲಿದೆ. ಇದರ ಜೊತೆಗೆ ರೆಡ್ಮಿ ಬುಕ್ 15 ಪ್ರೊ ಕೂಡ ಕೇವಲ 47,999 ರೂ. ಗೆ ಸೇಲ್ ಕಾಣುತ್ತಿದೆ. ಎಂಐ ಟಿವಿ 4A 43 ಯ ಬೆಲೆ ಈಗ 26,999 ರೂ. ಇದರ ಜೊತೆಗೆ ಬ್ಯಾಕಿಂಗ್ ಆಫರ್ ಕೂಡ ಇದೆ. ಶವೋಮಿಯ ಬೆಸ್ಟ್ ಸ್ಮಾರ್ಟ್ಫೋನ್ಗಳಾದ ಎಂಐ 11 ಲೈಟ್ ಎನ್ಇ 21,499 ರೂ. ಗೆ ಮಾರಾಟ ಆಗುತ್ತಿದೆ. ಎಂಐ 11 ಎಕ್ಸ್ 22,499 ರೂ. ಮತ್ತು ಎಂಐ 11 ಎಕ್ಸ್ ಪ್ರೋ 31,499 ರೂ. ಗೆ ಖರೀದಿಸಬಹುದು. ಇವುಗಳ ವಿಶೇಷತೆ ಏನು ಎಂಬುದನ್ನು ನೋಡೋಣ.
ಶವೋಮಿ ಎಂಐ 11 ಲೈಟ್ 5G NE ಸ್ಮಾರ್ಟ್‌ಫೋನ್ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.55 ಇಂಚಿನ ಫುಲ್ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 6GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ವೇರಿಯೆಂಟ್ ಆಯ್ಕೆಯನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿವೆ. ಇದಲ್ಲದೆ 20 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.
ಎಂಐ 11X ಪ್ರೊ ಸ್ಮಾರ್ಟ್‌ಫೋನ್ 6.67-ಇಂಚಿನ ಫುಲ್ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿವೆ. ಇದು ಸ್ನಾಪ್‌ಡ್ರಾಗನ್ 888SoC ಪ್ರೊಸೆಸರ್ ಹೊಂದಿದೆ. ಇದು 8GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ಎಚ್‌ಎಂ 2 ಸೆನ್ಸಾರ್ ಹೊಂದಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿವೆ. ಜೊತೆಗೆ 4,520mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 33W ವೇಗದ ಚಾರ್ಜಿಂಗ್ ಮತ್ತು 2.5W ನಲ್ಲಿ ವೈರ್ಡ್ ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
(Big discount on smartphones and other redmi mi products in xiaomi Black Friday Sale)