Redmi Note 11T 5G: ರಿಲೀಸ್ಗೆ ಒಂದೇ ದಿನ ಬಾಕಿ: ಈ ಸ್ಮಾರ್ಟ್ಫೋನ್ಗಾಗಿ ಕಾದು ಕುಳಿತಿದ್ದಾರೆ ಮೊಬೈಲ್ ಪ್ರಿಯರು
Upcoming Smartphone in India: ಹೊಸ ರೆಡ್ಮಿ ನೋಟ್ 11T 5G ಫೋನ್ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾದ ರೆಡ್ಮಿ ನೋಟ್ 11 ನ ಮರುಬ್ರಾಂಡೆಡ್ ಆವೃತ್ತಿಯಾಗಿದೆ. ಇದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಎಂದು ಹೇಳಲಾಗುತ್ತಿದೆ. ಆದರೆ, ಇದರ ಫೀಚರ್ಸ್ಗೆ ಮಾತ್ರ ಕೊರತೆಯಿಲ್ಲ. ಹೈರೇಂಜ್ ಮಾದರಿಯ ಫೀಚರ್ಸ್ ಇರಲಿದೆಯಂತೆ.
ಭಾರತೀಯ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಭರ್ಜರಿ ಸುದ್ದಿಯಲ್ಲಿರುವ ಫೋನಿನ ಬಿಡುಗಡೆ ದಿನ ಹತ್ತಿರವಾಗಿದೆ. ಮೊಬೈಲ್ ಪ್ರಿಯರು ಕಳೆದೊಂದು ತಿಂಗಳುಗಳಿಂದ ಕಾದುಕುಳಿತಿರುವ ಬಹುನಿರೀಕ್ಷಿತ ರೆಡ್ಮಿ ನೋಟ್ 11ಟಿ 5ಜಿ (Redmi Note 11T 5G) ಸ್ಮಾರ್ಟ್‌ಫೋನ್ ರಿಲೀಸ್ಗೆ ಇನ್ನೇನು ಕೇವಲ ಒಂದೇ ದಿನ ಬಾಕಿ ಉಳಿದಿದ್ದು ಇದೇ ನವೆಂಬರ್ 30 ರಂದು ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಅನಾವರಣಗೊಳ್ಳಲಿದೆ. ಈ ಮೂಲಕ ಶವೋಮಿ (Xiaomi) ಭಾರತದಲ್ಲಿ ಮತ್ತೊಮ್ಮೆ ತನ್ನ ಪಾರುಪತ್ಯ ಮೆರೆಯಲು ಸಜ್ಜಾಗಿದೆ. ಇದು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಎಂದು ಹೇಳಲಾಗುತ್ತಿದೆ. ಆದರೆ, ಇದರ ಫೀಚರ್ಸ್ಗೆ ಮಾತ್ರ ಕೊರತೆಯಿಲ್ಲ. ಹೈರೇಂಜ್ ಮಾದರಿಯ ಫೀಚರ್ಸ್ ರೆಡ್ಮಿ ನೋಟ್ 11T 5G ಸ್ಮಾರ್ಟ್ಫೋನ್ನಲ್ಲಿ ಇರಲಿದೆಯಂತೆ.
ಹೊಸ ರೆಡ್ಮಿ ನೋಟ್ 11T 5G ಫೋನ್ ಕಳೆದ ತಿಂಗಳು ಚೀನಾದಲ್ಲಿ ಬಿಡುಗಡೆಯಾದ ರೆಡ್ಮಿ ನೋಟ್ 11 ನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಎಂದು ಊಹಿಸಲಾಗಿದ್ದು, ಮೂರು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ. ಅಂದರೆ 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಬರುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ ಕಂಪನಿ ಬಿಡುಗಡೆಗೂ ಮುನ್ನವೇ ವಿಶೇಷ ಆಫರ್ ಕೂಡ ನೀಡಿದೆ. ಶವೋಮಿ ಕಂಪನಿ ಅಮೆಜಾನ್ ಇಂಡಿಯಾ ಜೊತೆ ಪಾಲುದಾರಿಕೆ ಹೊಂದಿದ್ದು ರೆಡ್ಮಿ ನೋಟ್ 11ಟಿ ಅನ್ನು ಸೇಲ್ ಮಾಡಲಿದೆ. ಇದಕ್ಕೂ ಮುನ್ನ ಅಮೆಜಾನ್ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳಲಿದ್ದು, ಅದಕ್ಕೆ ಸರಿಯಾದ ಉತ್ತರ ನೀಡಿದ್ದಲ್ಲಿ ಹೊಸ ರೆಡ್ಮಿ ನೋಟ್ 11T 5G ಅನ್ನು ಉಚಿತವಾಗಿ ಖರೀದಿಸಬಹುದು. ಈಗಾಗಲೇ ಇದು ಪ್ರಾರಂಭವಾಗಿದ್ದು ಡಿಸೆಂಬರ್ 15ರ ವರೆಗೆ ನಡೆಯಲಿದೆ.
ಈ ಸ್ಮಾರ್ಟ್‌ಫೋನ್ ಒಟ್ಟು ಮೂರು ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ಸಿಗಲಿದೆ. ಅಕ್ವಾಮರಿನ್ ಬ್ಲೂ, ಮ್ಯಾಟ್ ಬ್ಲ್ಯಾಕ್ ಮತ್ತು ಸ್ಟಾರ್‌ಡಸ್ಟ್ ವೈಟ್ ಬಣ್ಣಗಳಲ್ಲಿ ಸಿಗಲಿದೆ. ಸೋರಿಕೆಯಾದ ರೆಡ್ಮಿ ನೋಟ್ 11T 5G ಫೋನಿನ ಕೆಲವು ನಿರ್ದಿಷ್ಟ ವಿವರಗಳನ್ನು ನೋಡುವುದಾದರೆ, 90Hz ರಿಫ್ರೆಶ್ ರೇಟ್ ಮತ್ತು 240Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಪೂರ್ಣ-HD+ (1,080×2,400 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ ಎಂದು ಹೇಳಲಾಗಿದೆ.
ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಯಿಂದ ಚಾಲಿತವಾಗಿದೆ, ಅಂದರೆ, ಈ ಪ್ರೊಸೆಸರ್ ವೇಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 8GB ವರೆಗಿನ LPDDR4X RAM ಅನ್ನು ಹೊಂದಿರಲಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ. ವಿಶೇಷ ಎಂದರೆ, ರೆಡ್‌ಮಿ ಈ ಫೋನಿನ ಕ್ಯಾಮೆರಾವನ್ನು ಅಪ್‌ಗ್ರೇಡ್ ಮಾಡಿದೆ ಎನ್ನಲಾಗಿದೆ. ಫೋನ್ ಹಿಂಬದಿಯಲ್ಲಿ 50 ಮೆಗಾ ಪಿಕ್ಸೆಲ್ ಮತ್ತು 8 ಮೆಗಾ ಪಿಕ್ಸೆಲ್ ಅಲ್ಟ್ರಾವೈಡ ಶೂಟರ್‌ರೊಂದಿಗೆ ಎರಡು ಕ್ಯಾಮೆರಾಗಳು ಇರಲಿವೆ ಎನ್ನಲಾಗಿದೆ. ಜೊತೆಗೆ, ಮುಂಬದಿಯಲ್ಲಿ 16 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎನ್ನಲಾಗಿದೆ.
ರೆಡ್ಮಿ ನೋಟ್ 11T 5G 128GB UFS 2.2 ಸಂಗ್ರಹಣೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಇದು 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು ಎಂದು ಊಹಿಸಲಾಗಿದೆ. ಇದರ ಬೆಲೆ ಎಷ್ಟಿರಬಹುದೆಂದು ಇನ್ನೂ ಕಂಪನಿ ಬಹಿರಂಗ ಪಡಿಸಿಲ್ಲ.
WhatsApp: ವಾಟ್ಸ್ಆ್ಯಪ್ನಲ್ಲಿ ಫೋಟೋ, ವಿಡಿಯೋ ನೋಡಿದ ಬಳಿಕ ಅಟೋಮೆಟಿಕ್ ಡಿಲೀಟ್ ಆಗೋ ಟ್ರಿಕ್ ಗೊತ್ತಾ?
(Redmi Note 11T 5G Xiaomi is all set to launch the most awaited Redmi Note 11T in India on 30th November)
Published On - 3:02 pm, Sun, 28 November 21