Jio Tariff Hike: ಏರ್ಟೆಲ್, ವಿ ಬಳಿಕ ಈಗ ಜಿಯೋದಿಂದ ಗ್ರಾಹಕರಿಗೆ ಬಿಗ್ ಶಾಕ್: ಪ್ಲಾನ್‌ಗಳ ಬೆಲೆಯಲ್ಲಿ ಏರಿಕೆ
Reliance Jio hikes prices: ಏರ್ಟೆಲ್ ಮತ್ತು ವಿ ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ನೀಡಿದ ಬೆನ್ನಲ್ಲೇ ಈಗ ರಿಲಯನ್ಸ್ ಜಿಯೋ ಟೆಲಿಕಾಂ ಸಹ ತನ್ನ ಯೋಜನೆಗಳ ದರದಲ್ಲಿ ಏರಿಕೆ ಮಾಡಿದೆ. ಹೊಸ ಯೋಜನೆ ಹೇಗಿರಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಭಾರ್ತಿ ಏರ್ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾ (Vodafone Idea) ನಂತರ ಭಾರತದ ನಂಬರ್ ಒನ್ ಮೊಬೈಲ್ ಆಪರೇಟರ್ ರಿಲಯನ್ಸ್ ಜಿಯೋ (Reliance JIO) ಕೂಡ ದರ ಏರಿಕೆ ಶಾಕ್ ನೀಡಿದ್ದು, ಮುಂದಿನ ತಿಂಗಳಿನಿಂದ ತನ್ನ ಪ್ರಿಪೇಯ್ಡ್ ದರಗಳಲ್ಲಿ ಶೇಕಡಾ 21 ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಹೌದು, ದೇಶದ ಪ್ರಮುಖ ಖಾಸಾಗಿ ಟೆಲಿಕಾಂ ಕಂಪೆನಿಗಳಾದ ಜಿಯೋ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ (Vi) ಎಲ್ಲವೂ ಒಂದು ವಾರದೊಳಗೆ ಪ್ರೀಪೇಡ್ ರೀಚಾರ್ಜ್ ಬೆಲೆಗಳ ಹೆಚ್ಚಳವನ್ನು ಘೋಷಿಸಿವೆ. ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳು ಬೆಲೆ ಏರಿಕೆ ಬಗ್ಗೆ ಅಷ್ಟೇನೂ ಚಿಂತಿಸಿದ ಗ್ರಾಹಕರಿಗೆ ಇದು ಬರಸಿಡಿಲಿನಂತೆ ಎದುರಾದ ಸುದ್ದಿಯಾಗಿದ್ದು, ರಿಲಯನ್ಸ್ ಜಿಯೋ ಕೂಡ ತನ್ನ ಪ್ರಿಪೇಡ್ ಬೆಲೆಗಳನ್ನು ಹೆಚ್ಚಿಸಿರುವುದನ್ನು ನೋಡಿ ದೇಶದ ಬೆಸ್ತುಬಿದ್ದಿದ್ದಾರೆ. ಜಿಯೋ ಈಗ ತನ್ನ ತನ್ನ ಕೆಲವು ಜನಪ್ರಿಯ ಯೋಜನೆಗಳ ಬೆಲೆಗಳನ್ನು 480 ರೂ. ವರೆಗೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.
ಈ ಯೋಜನೆಗಳು ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ಒದಗಿಸುತ್ತವೆ. ಜಾಗತಿಕವಾಗಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಜಿಯೋ ತನ್ನ ಬದ್ಧತೆಯನ್ನು ಎತ್ತಿ ಹಿಡಿಯುವ ಮೂಲಕ, ಜಿಯೋ ಗ್ರಾಹಕರು ದೊಡ್ಡ ಫಲಾನುಭವಿಗಳಾಗಿ ಮುಂದುವರಿಯುತ್ತಾರೆ ಎಂದು ಆಶಿಸುತ್ತೇವೆ ಎಂದು ಜಿಯೋ ತನ್ನ ಪ್ರತಿಕಾ ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ.
ಜಿಯೋದ ಅನಿಯಮಿತ ಕರೆಗಳ ಆರಂಭಿಕ ಪ್ಲಾನ್ ಈಗ ಇರುವ 78 ರೂ. ಗಳಿಂದ 91 ರೂ. ಗಳಿಗೆ ಏರಿಕೆಯಾಗಲಿದೆ. ಅಲ್ಲದೇ ಇತರ ಪ್ಲAನ್‌ಗಳಲ್ಲಿಯೂ ಸರಾಸರಿ ಶೇ. 20ರಷ್ಟು ದರ ಹೆಚ್ಚಳವಾಗಲಿದೆ. ಪರಿಷ್ಕೃತ ದರಗಳು ಡಿ. 1 ರಿಂದ ಜಾರಿಗೆ ಬರಲಿವೆ. 129 ರೂ. ಬೆಲೆಯ ಆರಂಭಿಕ ಅನಿಯಮಿತ ಯೋಜನೆಯು ಬೆಲೆ ಏರಿಕೆಯಿಂದ ಇದೀಗ 155 ರೂ. ಆಗಿದೆ. ಹಾಗೆಯೇ 199 ರೂ. ಪ್ರಿಪೇಯ್ಡ್ ಯೋಜನೆಯು ಇದೀಗ 239 ರೂ. ಆಗಿದೆ. 399 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯು 479 ರೂ. ದರದಲ್ಲಿ ಕಾಣಿಸಿಕೊಂಡಿದೆ. 599 ರೂ. ಬೆಲೆಯ ಪ್ರಿಪೇಯ್ಟ್ ಯೋಜನೆಯು ಇದೀಗ 719 ರೂ. ಆಗಿದೆ. ಅಂತೆಯೆ 2399ರೂ. ಬೆಲೆಯ ವಾರ್ಷಿಕ ಪ್ರಿಪೇಯ್ಡ್ ಯೋಜನೆಯು 2879 ರೂ. ಪ್ರೈಸ್ ಟ್ಯಾಗ್ ಪಡೆದಿದೆ.
ಇದಿಷ್ಟೇ ಅಲ್ಲದೆ ಜಿಯೋದ ಡಾಟಾ ಟಾಪ್‌ಅಪ್ ಪ್ಲಾನ್‌ಗಳ ದರಗಳೂ ಏರಿಕೆಯಾಗಲಿವೆ. ಈಗ 6GB ಡೇಟಾಗೆ 51 ರೂ. ದರವಿದ್ದು ಇದು 61 ರೂ. ಗೆ ಏರಿಕೆಯಾಗಲಿದೆ. 12GB ಡೇಟಾ ದರ 101 ರೂ. ನಿಂದ 121 ರೂ. ಗೆ, 50GB ಡೇಟಾ ದರ 251 ರೂ. ನಿಂದ 301 ರೂ. ಗೆ ಹೆಚ್ಚಳ ಮಾಡಲಾಗಿದೆ.
ಮುಂಗಡ ರೀಚಾರ್ಜ್ ಮಾಡಿ:
ಜಿಯೋ ಗ್ರಾಹಕರು ಹಣವನ್ನು ಉಳಿಸಲು ಗ್ರಾಹಕರು ಕಡಿಮೆ ಪ್ರಿಪೇಯ್ಡ್ ಸುಂಕಗಳೊಂದಿಗೆ ರೀಚಾರ್ಜ್ ಮಾಡಲು ಎರಡು ದಿನಗಳ ಕಾಲಾವಕಾಶವಿದೆ. ಆದರೆ, ನಾನು ರಿಚಾರ್ಜ್ ಮಾಡಿರುವ ಯೋಜನೆಯ ವ್ಯಾಲಿಡಿಟಿ ಇನ್ನೂ ಮುಗಿದಿಲ್ಲ ಎಂದು ಯೋಚಿಸುತ್ತರುವ ಗ್ರಾಹಕರಿಗೆ ಇದು ಸಿಹಿಸುದ್ದಿಯಾಗಿದ್ದು, ಜಿಯೋದ ಪ್ರಿಪೇಯ್ಡ್ ಯೋಜನೆಗಳೊಂದಿಗೆ ನೀವು ಎಷ್ಟು ಮುಂಗಡ ಅಥವಾ ಬಹು ರೀಚಾರ್ಜ್‌ಗಳನ್ನು ಮಾಡಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಜಿಯೋ ತನ್ನ ವೆಬ್‌ಸೈಟ್‌ನಲ್ಲಿ ಬಳಕೆದಾರರು ಅನಿಯಮಿತ ಮುಂಗಡ ರೀಚಾರ್ಜ್‌ಗಳನ್ನು ಮಾಡಬಹುದು ಎಂದು ಉಲ್ಲೇಖಿಸಿದೆ. ಅಂದರೆ, ನೀವು ಈಗಲೇ ಕಡಿಮೆ ಬೆಲೆಯಲ್ಲಿ ಮತ್ತೊಂದು ಯೋಜನೆಯನ್ನು ಖರೀದಿಸಬಹುದು.
(Jio announced tariff hike on its unlimited prepaid plans plans to get expensive from December 1)